ಟೀ ಅಂಗಡಿ ಮಾಲೀಕರ ಜತೆ ಮೋದಿ ಚರ್ಚೆ
ಚಿಕ್ಕಮಗಳೂರು: ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರಮೋದಿಯವರು ಬುಧವಾರ ದೇಶದ 1 ಸಾವಿರ ಟೀ ಅಂಗಡಿ ಮಾಲೀಕರ ಜೊತೆ ಹಾಗೂ ಗ್ರಾಹಕರೊಂದಿಗೆ ನೇರ ಸಂವಾದ ನಡೆಸಿ ಮುಂದಿನ ಚುನಾವಣೆಯ ಬಗ್ಗೆ ಚರ್ಚಿಸಲಿದ್ದಾರೆ. ಸಂಬಂಧ ನಗರ ಪ್ರಮುಖ ವೃತ್ತಗಳಲ್ಲಿರುವ ಮೂರು ಸ್ಥಳಗಳಲ್ಲಿ ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಚಾಯ್ ಪೇ ಚರ್ಚಾ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು ಚಹಾ ಅಂಗಡಿಯ ಮಾಲೀಕರು ಹಾಗೂ ಗ್ರಾಹಕರೊಂದಿಗೆ ಚರ್ಚಿಸುವ ಕಾರ್ಯಕ್ರಮವನ್ನು ಎಲ್ಸಿಡಿ ಟಿವಿ ಮುಖಾಂತರ ನೇರ ಪ್ರಸಾರ ಮಾಡಲಾಗುವುದು ಎಂದು ನಮೋ ಬ್ರಿಗೇಡ್ ಸಂಚಾಲಕರಾದ ಭರತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಗರದ ಅಮೃತ ಟೀ ಕ್ಯಾಂಟೀನ್ ತಿಲಕ್ ಪಾರ್ಕ್, ವಿಜಯಪುರ, ಟೀ ಆಟೋ ಸರ್ಕಲ್ ದೀಪಾ ನರ್ಸಿಂಗ್ ಹೋಮ್ ಎದುರು, ಶಂಕರಪುರ ಮತ್ತು ಬ್ರಾಹ್ಮಣ ವಿದ್ಯಾರ್ಥಿನಿಲಯದ ಹತ್ತಿರ ನರಿಗುಡ್ಡನಹಳ್ಳಿ ಸರ್ಕಲ್ಗಳಲ್ಲಿ ಎಲ್ಸಿಡಿ ಟಿವಿಗಳನ್ನು ಅಳವಡಿಸಿ ನರೇಂದ್ರಮೋದಿಯವರ ಜೊತೆ ನಡೆಯುವ ನೇರ ಸಂವಾದ ಕಾರ್ಯಕ್ರಮವನ್ನು ಭಿತ್ತರಿಸಲಾಗುವುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

