ಚಿಕ್ಕಮಗಳೂರು

ಮಹಿಳೆ ಅಡ್ಡಗಟ್ಟಿ ಒಡವೆ, ಹಣ ಅಪಹರಣ

Published On :

ನರಸಿಂಹರಾಜಪುರ: ಗುಬ್ಬಿಗಾ ಗ್ರಾಮದ ಸರ್ಕಲ್ ಸಮೀಪಹೋಗುತ್ತಿದ್ದ ಮಹಿಳೆಯೊಬ್ಬಳನ್ನು ಅಡ್ಡಗಟ್ಟಿದ ಮೂವರು ಬೈಕ್ ಸವಾರರು ಆಕೆಯ ಕಿವಿಯ ಓಲೆ, ಸರ ಹಾಗೂ ಹಣ ಅಪಹರಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಶಾರದಮ್ಮ ಎಂಬ ಮಹಿಳೆಯು ಗುಬ್ಬಿಗಾ ಸಮೀಪದ ಬಗನಹಡಲು ಸೇತುವೆ ಸಮೀಪ ಮಂಗಳವಾರ ಸಂಜೆ ನಡೆದು ಹೊಗುತ್ತಿದ್ದಾಗ ಮೋಟಾರ್ ಬೈಕ್ನಲ್ಲಿ ಬಂದ ಮೂವರು ಅವಳನ್ನು ಅಡ್ಡಗಟ್ಟಿದ್ದಾರೆ. ಕಿವಿಯ ಓಲೆ,ಕುತ್ತಿಗೆಯಲ್ಲಿದ್ದ ಬಂಗಾರದ ಸರ ಕಿತ್ತುಕೊಂಡಿದ್ದಾರೆ.
ಬ್ಯಾಗ್ ಕೊಡುವಂತೆ ಚಾಕು ತೋರಿಸಿ ಬೆದರಿಸಿ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.  ಬ್ಯಾಗ್ನಲ್ಲಿ 7 ಸಾವಿರ ರುಪಾಯಿ ಇತ್ತು ಎನ್ನಲಾಗಿದೆ. ಬೈಕ್ ಸವಾರರಲ್ಲಿ ಒಬ್ಬನು ಹೆಲ್ಮೆಟ್ ಧರಿಸಿದ್ದು ಉಳಿದ ಇಬ್ಬರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು.
ಘಟನೆಯ ಬಳಿಕ ಆಸ್ಪತ್ರೆಗೆ ತೆರಳಿ ಪ್ರಥಮ ಚಿಕಿತ್ಸೆ ಪಡೆದ ಮಹಿಳೆ, ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.