ಧ್ವನಿಸುರಳಿ ಸಂಪೂರ್ಣ ಸದ್ಬಳಕೆ ಆಗಲಿ: ಡಾ.ಶ್ರೀನಿವಾಸ್
ಕ.ಪ್ರ.ವಾರ್ತೆ ಟಿ ತರೀಕೆರೆ ಟಿ ಫೆ.13
ಸರ್ಕಾರದ ಸೌಲಭ್ಯ ಬಳಸಿಕೊಂಡು ಸಾರ್ವಜನಿಕರಿಗೆ ಹೆಚ್ಚು ಸೇವೆ ಮಾಡಬೇಕೆಂದು ಪಶು ಪಾಲನೆ ಮತ್ತು ಪಶು ಸೇವಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ. ಸಿ.ಟಿ. ಶ್ರೀನಿವಾಸ್ ತಿಳಿಸಿದ್ದಾರೆ.
ಪಟ್ಟಣದ ಪಶು ಆಸ್ಪತ್ರೆ ಸಭಾಂಗಣದಲ್ಲಿ ಪಶುಪಾಲನಾ ಇಲಾಖೆ, ಪಶು ಆಸ್ಪತ್ರೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಜಾನುವಾರುಗಳಿಗೆ ತಗುಲಿರುವ ಕಾಲುಬಾಯಿಜ್ವರ ನಿಯಂತ್ರಣ ಕುರಿತು ಅಜ್ಜಂಪುರ ಹಿರಿಯ ಪಶು ವೈದ್ಯಾಧಿಕಾರಿ ಡಾ.ರಾಜಶೇಖರಯ್ಯ ಅವರು ರಾಜ್ಯದಲ್ಲೇ ಮೊದಲ ಬಾರಿಗೆ ರಚಿಸಿದ ಧ್ವನಿ ಸುರುಳಿ ಬಿಡುಗಡೆ ಮತ್ತು ತಾಲೂಕಿನ ಪಶು ವೈದ್ಯರು-ಸಿಬ್ಬಂದಿ ವರ್ಗಕ್ಕೆ ಏರ್ಪಡಿಸಿದ್ದ ಆರನೇ ಸುತ್ತಿನ ಕಾಲು-ಬಾಯಿ ಜ್ವರ ಲಸಿಕೆ ಹಾಕುವ ಒಂದು ತಿಂಗಳ ಮಾಸಾಚರಣೆ ಕಾರ್ಯಕ್ರಮ ಕುರಿತು ರೈತರಲ್ಲಿ ಅರಿವು ಮೂಡಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಡ್ಡ ಪರಿಣಾಮ ಇಲ್ಲ: ಬೃಹತ್ ಗಾತ್ರದ ಜಾನುವಾರುಗಳನ್ನು ಆಸ್ಪತ್ರೆಗೆ ಕರೆ ತರಲು ಕಷ್ಟವಾಗಬಹುದು. ಆದುದರಿಂದ ಜಾನುವಾರುಗಳು ಇರುವ ಸ್ಥಳದಲ್ಲಿಯೇ ಹೋಗಿ ಸೇವೆ ಸಲ್ಲಿಸಬೇಕಾಗುತ್ತದೆ. ಲಸಿಕೆ ಹಾಕಿಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮವಾಗುವುದಿಲ್ಲ. ಶಕ್ತಿ ಮೀರಿ ಕರ್ತವ್ಯ ನಿರ್ವಹಿಸಿ, ಸಾರ್ವಜನಿಕರ ಸಹಕಾರದಿಂದ ಜಾನುವಾರುಗಳ ಕಾಲು-ಬಾಯಿಜ್ವರವನ್ನು ಎಲ್ಲರೂ ಸೇರಿ ನಿಯಂತ್ರಿಸೋಣ ಎಂದು ತಿಳಿಸಿದರು.
ರೈತರು ನೆನೆಯುತ್ತಾರೆ: ಕರ್ನಾಟಕ ಮಿಲ್ಕ್ ಫೆಡರೇಶನ್ನ ಡೆಪ್ಯೂಟಿ ಮ್ಯಾನೇಜರ್ ಡಾ. ಎನ್.ಎಸ್. ಪಾಟೀಲ್ ಮಾತನಾಡಿ, ಪಶು ವೈದ್ಯರನ್ನು ಸಾಮಾಜಿಕವಾಗಿ ಗುರುತಿಸಬೇಕು. ರೈತರು ನಿಮ್ಮನ್ನು ನೆನೆಯುತ್ತಾರೆ. ಹಾಲಿನ ಉತ್ಪನ್ನಗಳಿಗೆ ಮುಂದೆ ಇನ್ನೂ ಹೆಚ್ಚಿನ ಬೇಡಿಕೆ ಬರುತ್ತದೆ ಎಂದು ತಿಳಿಸಿದರು.
ಧ್ವನಿ ಸುರುಳಿ ರಚಿಸಿದ ಪಶು ವೈದ್ಯಾದಿಕಾರಿ ಡಾ.ರಾಜಶೇಖರಯ್ಯ ಮಾತನಾಡಿದರು.
ಪಶು ವೈದ್ಯಾಧಿಕಾರಿ ಡಾ.ಎ.ಬಿ.ಪ್ರಭಾಕರ್ ಮಾತನಾಡಿದರು. ಧ್ವನಿ ಸುರುಳಿಯ ಅಧಿಕೃತ ಪ್ರಸಾರಕ್ಕೆ ಚಾಲನೆ ನೀಡಲಾಯಿತು. ಸಹಾಯಕ ನಿರ್ದೇಶಕ ಡಾ. ಜಿ.ಎಂ. ಕೊಟ್ರೇಶಪ್ಪ, ಡಾ.ಗಿರೀಶ್, ಡಾ.ಉಮೇಶ್, ಜಬೀವುಲ್ಲಾ, ತಾಲೂಕಿನಾದ್ಯಂತ ಆಗಮಿಸಿದ್ದ ಪಶು ವೈದ್ಯರು, ವೈದ್ಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ.ರಾಜಶೇಖರಯ್ಯ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

