ಮಗನ ಸಾವಿಗೆ ಪ್ರೇಮಾಕುಮಾರಿ ಕಾರಣ
ಕ.ಪ್ರ.ವಾರ್ರ್ತೆ ಟಿ ಚಿಕ್ಕಮಗಳೂರು ಟಿ ಫೆ.13
ಮಾಜಿ ಸಚಿವ ರಾಮದಾಸ್ ವಿರುದ್ಧ ಪ್ರೇಮ ಪ್ರಕರಣದ ಆರೋಪ ಹೊರಿಸಿರುವ ಪ್ರೇಮಾಕುಮಾರಿಯ ವಿರುದ್ಧ ಅವರ ಅತ್ತೆ ಕೊಲೆ ಆರೋಪ ಹೊರಿಸಿದ್ದಾರೆ.
ಇದು, ಸಾಮಾನ್ಯವಾದ ಆರೋಪವಲ್ಲ, ತನ್ನ ಮಗನಿಗೆ ಪ್ರೇಮಾಕುಮಾರಿ ಹಾಗೂ ಅವರ ತಾಯಿ ಸೇರಿ ಸಾಯಿಸಿದ್ದಾರೆ ಎಂದು ಸುದ್ದಿಗಾರರೊಂದಿಗೆ ಗುರುವಾರ ಮಾತನಾಡುವಾಗ ತಿಳಿಸಿದರು.
ಚಿಕ್ಕಮಗಳೂರು ತಾಲೂಕಿನ ಕಬ್ಬಿಗೆರೆ ಗ್ರಾಮದ ಕಮಲಮ್ಮ ಅವರು ಪ್ರೇಮಾಕುಮಾರಿ ಹಾಗೂ ತನ್ನ ಮಗ ರುದ್ರೇಗೌಡರ ಲವ್ ಸ್ಟೋರಿಯನ್ನು ಮಾಧ್ಯಮದ ಎದುರು ಎಳೆ ಎಳೆಯಾಗಿ ಬಿಚ್ಚಿಟ್ಟರು.
ರುದ್ರೇಗೌಡ, ಕಡೂರು ತಾಲೂಕಿನ ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಆಗ ತರೀಕೆರೆ ತಾಲೂಕಿನ ಎಂ.ಸಿ. ಹಳ್ಳಿಯ ಪ್ರೇಮಾಕುಮಾರಿ ನಡುವೆ ಪ್ರೇಮಾಂಕುರವಾಯಿತು.
ಮದುವೆ ಪ್ರಸ್ತಾಪ: ಕೆಲ ದಿನಗಳ ನಂತರ ಪ್ರೇಮಾಕುಮಾರಿ ಮದುವೆಯ ಪ್ರಸ್ತಾಪ ಮಾಡಿದ್ದು, ಈ ವಿಷಯವನ್ನು ರುದ್ರೇಗೌಡ ಅವರು ತನ್ನ ತಾಯಿ ಕಮಲಮ್ಮ ಅವರಿಗೆ ತಿಳಿಸಿದ್ದ. ಬೇರೆ ಬೇರೆ ಜಾತಿಯಾಗಿದ್ದರಿಂದ ಮದುವೆ ಸಾಧ್ಯವಿಲ್ಲ ಎಂದು ತಾಯಿ ಪ್ರಾರಂಭದಲ್ಲಿ ಹೇಳಿದರು. ಈ ವಿಷಯ ರುದ್ರೇಗೌಡ, ಪ್ರೇಮಾಕುಮಾರಿಗೆ ತಿಳಿಸಿದ್ದು, ಆಗ ಆಕೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ಈ ವಿಷಯವನ್ನು ರುದ್ರೇಗೌಡ, ತನ್ನ ತಾಯಿಗೆ ತಿಳಿಸಿದ್ದು, ತಂಗಿಯ ಮದುವೆಯ ನಂತರ ಪ್ರೇಮಾಕುಮಾರಿಯನ್ನು ಮದುವೆಯಾಗುವಂತೆ ಕಮಲಮ್ಮ ಸಮಾಧಾನ ಹೇಳಿದರು.
ನಂತರ ಪ್ರೇಮಾಕುಮಾರಿಯೊಂದಿಗೆ ರುದ್ರೇಗೌಡ ಹಾಗೂ ಅವನ ತಂಗಿಯ ಮದುವೆ ಒಂದೇ ದಿನ ಕಬ್ಬಿಗೆರೆಯಲ್ಲಿ ನಡೆಯಿತು. ರುದ್ರೇಗೌಡ ಎಂ.ಸಿ. ಹಳ್ಳಿಯಲ್ಲಿರುವ ಪ್ರೇಮಾಕುಮಾರಿ ಮನೆಯಲ್ಲಿ ವಾಸವಾಗಿದ್ದ. ನಂತರದ ದಿನಗಳಲ್ಲಿ ಪ್ರೇಮಾಕುಮಾರಿ ಹಾಗೂ ಅವರ ತಾಯಿ ಲೀಲಾವತಿ, ಸಹೋದರ ಆಗಾಗ ಕಬ್ಬಿಗೆರೆಗೆ ಬಂದು, ಎರಡು ಎಕರೆ ಜಮೀನು ತನ್ನ ಹೆಸರಿಗೆ ಬರೆದುಕೊಡುವಂತೆ ಜಗಳ ಮಾಡುತ್ತಿದ್ದರು. ರುದ್ರೇಗೌಡ ತನ್ನ ಮಾವನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು 2006ರ ಆಗಸ್ಟ್ 27 ರಂದು ಪೋನ್ ಬಂದಿತು. ಮಗನ ಅಂತ್ಯಕ್ರಿಯೆ ಕಬ್ಬಿಗೆರೆಯಲ್ಲಿಯೇ ನಡೆಯಿತು.
ಕಿರುಕುಳ: ಮಗ ತೀರಿಕೊಂಡ ನಂತರ ಇದ್ದ ಎರಡು ಎಕರೆ ಆಸ್ತಿಯನ್ನು ಬರೆದುಕೊಡುವಂತೆ ಆಗಾಗ ಊರಿಗೆ ಬಂದು ಪ್ರೇಮಾಕುಮಾರಿ, ಆಕೆಯ ತಾಯಿ ಹಾಗೂ ಅಣ್ಣ ಕಿರುಕುಳ ನೀಡುತ್ತಿದ್ದರು. ಹಲವು ಬಾರಿ ಜಗಳ ಮಾಡಿ ಹೋಗಿದ್ದರು. ಒಮ್ಮೆ ಇದ್ದಕಿದ್ದಂತೆ ಚೈನ್ ಕದ್ದಿದ್ದಾರೆಂದು ತನ್ನ ವಿರುದ್ಧ ಪೊಲೀಸ್ ಠಾಣೆಗೆ ಪ್ರೇಮಾಕುಮಾರಿ ದೂರು ಸಹ ನೀಡಿದ್ದರು. ಗಂಡ ರುದ್ರೇಗೌಡ ನಿಧನದ ನಂತರ ಅನುಕಂಪದ ಆಧಾರದ ಮೇಲೆ ಪ್ರೇಮಾಕುಮಾರಿಗೆ ಕೆಲಸ ಸಿಕ್ಕಿತು. ಕಳ್ಳತನ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿದ್ದ ಕೇಸನ್ನು ಪ್ರೇಮಾಕುಮಾರಿ ಇತ್ತೀಚೆಗೆ ವಾಪಸ್ ಪಡೆದುಕೊಂಡಿದ್ದರು.
ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ, ಪ್ರೇಮಾಕುಮಾರಿ ಹಾಗೂ ಆಕೆಯ ತಾಯಿ ಲೀಲಾವತಿ ಸೇರಿ ಸಾಯಿಸಿದ್ದಾರೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

