ಜನಪದವು ಸಾಹಿತ್ಯ ಸಂಸ್ಕೃತಿಯ ತಾಯಿ ಬೇರು: ಪ್ರೊ.ಕುಮಾರಪ್ಪ
ಕ.ಪ್ರ.ವಾರ್ತೆ ಟಿ ತರೀಕೆರೆ ಟಿ ಫೆ.18
ಜನಪದವು ನಮ್ಮ ಸಾಹಿತ್ಯ ಮತ್ತು ಸಂಸ್ಕೃತಿಯ ತಾಯಿ ಬೇರು ಎಂದು ಎಸ್ಜೆಎಂ ಕಾಲೇಜು ಪ್ರಾಚಾರ್ಯ ಪ್ರೊ. ಬಿ.ಇ. ಕುಮಾರಪ್ಪ ಹೇಳಿದರು.
ಇಲ್ಲಿನ ಎಸ್.ಜೆ.ಎಂ. ಕಾಲೇಜು ವತಿಯಿಂದ ಮಂಗಳವಾರ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ 'ಜನಪದ ಸಿರಿ' ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ತಾಯಿ ಬೇರನ್ನು ನಾವು ರಕ್ಷಿಸಿ ಪೋಷಿಸಿದಾಗ ಮಾತ್ರ ನಾವು ನಮ್ಮತನದೊಂದಿಗೆ ಉಳಿಯುತ್ತೇವೆ ಎಂದು ಅವರು ತಿಳಿಸಿದರು.
ಜಾನಪದ ಸೊಗಡು: ಆರಕ್ಷಕ ವೃತ್ತ ನಿರೀಕ್ಷಕ ಸುರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧುನಿಕತೆಯ ಆಡಂಬರದಲ್ಲಿ ಬೆಳೆಯುತ್ತಿರುವ ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ಪರಂಪರೆ ಹಾಗೂ ಜಾನಪದ ಸೊಗಡು ಜಾಗೃತಗೊಳಿಸುವ ಈ ಕಾರ್ಯಕ್ರಮ ಶ್ಲಾಘನೀಯ. ಕಾಲೇಜಿನ ಆವರಣದಲ್ಲಿ ಓಡಾಡುತ್ತಿರುವ ಮಕ್ಕಳನ್ನು ಕಂಡು ಹಾಗೂ ಅವರ ಜಾನಪದ ಶೈಲಿಯ ಉಡುಗೆ ತೊಡುಗೆಗಳನ್ನು ನೋಡಿ 50 ವರ್ಷಗಳ ಹಿಂದಿನ ಮದುವೆ ದಿಬ್ಬಣದ ನೆನಪುಗಳು ಮರುಕಳಿಸುವಂತಾಗಿದೆ ಎಂದು ತಿಳಿಸಿದರು.
ವಿನುತಾ, ದೀಪು, ಶ್ರುತಿ, ಪೂಜಾ, ಶ್ರುತಿ, ವಿದ್ಯಾರ್ಥಿಗಳು, ಪ್ರೊ. ಆರ್.ವಿ. ಹೆಗಡಾಳ್, ಪ್ರೊ. ಬಸವರಾಜಪ್ಪ, ನಿ.ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲಪ್ಪ, ಉಪನ್ಯಾಸಕರು ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಮೆರವಣಿಗೆ: ಪಟ್ಟಣದ ಕೋಡಿ ಕ್ಯಾಂಪ್ ವೃತ್ತದಿಂದ ಎತ್ತಿನ ಬಂಡಿಯಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕ ವೃಂದದವರು ಜಾನಪದ ವೇಷ ಭೂಷಣಗಳೊಂದಿಗೆ ಏರ್ಪಡಿಸಿದ್ದ ಮೆರವಣಿಗೆಯ ಉದ್ಘಾಟನೆಯನ್ನು ಪ್ರಾಚಾರ್ಯ ಬಿ.ಇ.ಕುಮಾರಪ್ಪ ನೆರವೇರಿಸಿದರು.
ಭಾಗ್ಯದ ಬಳೆಗಾರ, ಜೋಕುಮಾರ ಇತ್ಯಾದಿ ಜನಪದ ಕಥೆಗಳ ಹಿನ್ನೆಲೆಯ ನೃತ್ಯ ಮತ್ತಿತರ ಮನರಂಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

