ಚಿಕ್ಕಮಗಳೂರು

ಸಣ್ಣ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ ಹಿರೇಮಠ್

Published On :

ನರಸಿಂಹರಾಜಪುರ: ಸಮಾಜ ಪರಿವರ್ತನ ಸಂಸ್ಥೆ ಅಧ್ಯಕ್ಷ ಎಸ್.ಆರ್. ಹಿರೇಮಠ್ ಅವರು ಒತ್ತುವರಿ ಮಾಡಿರುವ ರೈತರ ಜಮೀನುಗಳನ್ನು ತೆರವುಗೊಳಿಸುವಂತೆ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಮೂಲಕ ಸಣ್ಣ ರೈತರು, ಕೂಲಿ ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಕೆ.ಪಿ.ಸಿ.ಸಿ. ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷ ಸಚಿನ್ ಮೀಗಾ ಆರೋಪಿಸಿದ್ದಾರೆ.
ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿ, ಇತ್ತೀಚಿಗೆ ಸಮಾಜ ಪರಿವರ್ತನಾ ಸಂಸ್ಥೆ ಅಧ್ಯಕ್ಷಎಸ್.ಆರ್. ಹಿರೇಮಠ್ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಹೈಕೋರ್ಟಿನಲ್ಲಿ ನಾನು ಅರ್ಜಿ ಸಲ್ಲಿಸಿರುವುದಕ್ಕೂ ಮಲೆನಾಡು ಭಾಗದಲ್ಲಿ ಒತ್ತುವರಿ ತೆರವು ಪ್ರಕರಣ ನಡೆಯುತ್ತಿರುವುದಕ್ಕೂ ಸಂಬಂಧವಿಲ್ಲ ಎಂದಿದ್ದರು.
ಆದರೆ, ಹಿರೇಮಠ್ ಅವರು ನ್ಯಾಯಾಲಯದಲ್ಲಿ ಸರ್ಕಾರಿ ಜಮೀನು ಸಂರಕ್ಷಣೆ ಪಡೆಯ ಮುಖ್ಯಸ್ಥ ಡಾ.
ಬಾಲಸುಬ್ರಮಣ್ಯಂ ಅವರ ವರದಿಯನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರಬೇಕು ಎಂದು ತಮ್ಮ ವಕೀಲರ ಮೂಲಕ ವಾದ ಮಂಡಿಸಿದ್ದಾರೆ ಎಂದರು.
ಬೆಂಗಳೂರು ನಗರಕ್ಕೆ ಸೀಮಿತವಾಗಿದ್ದ ಕ್ರಿಯಾ ಯೋಜನೆಯನ್ನು ಎಲ್ಲಾ ಜಿಲ್ಲೆಗಳಿಗೆ ಅನ್ವಯವಾಗುವಂತೆ ಪರಿವರ್ತಿಸಿಕೊಂಡು ಸಣ್ಣ ರೈತರಿಗೆ ಹಿರೇಮಠ್ ದ್ರೋಹ ಮಾಡಿದ್ದಾರೆ ಎಂದು ಸಚಿನ್ ಮೀಗ ಕಿಡಿ ಕಾರಿದ್ದಾರೆ.
ಸರ್ಕಾರ ಡಾ. ಬಾಲಸುಬ್ರಮಣ್ಯಂ ಅವರ ವರದಿಯನ್ನು ಒಪ್ಪಿರಲಿಲ್ಲ ಅಥವಾ ತಿರಸ್ಕಾರವೂ ಮಾಡಿರಲಿಲ್ಲ. ಈಗ ಕಳಸದ ಇನಾಂ ಭೂಮಿಯ ವಿಚಾರವನ್ನು ಎಸ್.ಆರ್. ಹಿರೇಮಠ್ ಹಾಕಿರುವ ಒತ್ತುವರಿ ತೆರವು ದಾವೆಯ ಪ್ರಕರಣವನ್ನು ಜೊತೆಯಾಗಿ ಸೇರಿಸಲು ನ್ಯಾಯಾಲ ಆದೇಶ ನೀಡಿದೆ. ಈ ಎರಡೂ ಪ್ರಕರಣಗಳು ಫೆ. 24 ರಂದು ನ್ಯಾಯಾಲಯದ ಮುಂದೆ ಬರಲಿದೆ ಎಂದು ಸಚಿನ್ ಮೀಗ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.