ಬಲಿಜ ಸಂಘಕ್ಕೆ ನಿವೇಶನ: ಭರವಸೆ
ಕ.ಪ್ರ.ವಾರ್ತೆ , ತರೀಕೆರೆ , ಫೆ. 24
ಪುರಸಭೆ ಸದಸ್ಯರ ಸಹಕಾರದಿಂದ ತಾಲೂಕು ಬಲಿಜ ಸಂಘಕ್ಕೆ ಪಟ್ಟಣದಲ್ಲಿ ನಿವೇಶನ ಕೊಡಿಸಿಕೊಡಲು ತಾವು ಎಲ್ಲ ರೀತಿಯಲ್ಲಿ ಪ್ರಯತ್ನಿಸುವುದಾಗಿ ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.
ತಾಲೂಕು ಬಲಿಜ ಸಂಘ ವತಿಯಿಂದ ಸೋಮವಾರ ಪಟ್ಟಣದ ಎಂ.ಜಿ.ಹಾಲ್ನಲ್ಲಿ ಏರ್ಪಾಡಾಗಿದ್ದ ತಾಲೂಕು ಬಲಿಜ ಸಮಾವೇಶದಲ್ಲಿ ಮಾತನಾಡಿ, ಜನಾಂಗ ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮೇಲೆ ಬರಲು ಸಂಘಟನೆ ಬಹಳ ಮುಖ್ಯ. ಬಲಿಜ ಸಮುದಾಯವನ್ನು 2-ಎಗೆ ಸೇರಿಸುವುದು ನಿಶ್ಚಯ ಎಂದು ತಿಳಿಸಿದರು.
ಸಂಘಕ್ಕೆ ನೆರವು ನೀಡಿ: ಬೆಂಗಳೂರು, ಕರ್ನಾಟಕ ಬಲಿಜ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಟಿ.ವೇಣುಗೋಪಾಲ್ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ ರಾಜ್ಯದಲ್ಲಿ ಒಟ್ಟು 50 ಲಕ್ಷ ಬಲಿಜ ಜನಾಂಗ ಇದ್ದೇವೆ, ಇಂದು ವೈಜ್ಞಾನಿಕ ಮತ್ತು ಕಂಪ್ಯೂಟರ್ ಜಗತ್ತಿನಲ್ಲಿದ್ದೇವೆ. ನಾವು ಸಂಘಟಿತರಾಗಿದ್ದೇವೆ. ಎಲ್ಲರೂ ಸಂಘಕ್ಕೆ ಸದಸ್ಯರಾಗಬೇಕು. ಜನಾಂಗಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿ ಎಂದು ಅವರು ತಿಳಿಸಿದರು.
ಮಾಜಿ ಶಾಸಕರಾದ ಎಸ್.ಎಂ.ನಾಗರಾಜ್, ಟಿ.ಎಚ್.ಶಿವಶಂಕರಪ್ಪ ಮಾತನಾಡಿದರು. ಹಣ್ಣೆ ಶ್ರೀ ಶೈಲ ಶಾಖಾ ಮಠದ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಅವರು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.
ತಾಲೂಕು ಬಲಿಜ ಸಂಘದ ಅಧ್ಯಕ್ಷ ಟಿ.ವಿ.ಶಿವಣ್ಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಲೂರು ಮಾಜಿ ಶಾಸಕ ನಾಗರಾಜ್, ಪುರಸಭೆ ಮಾಜಿ ಪುರಸಭಾಧ್ಯಕ್ಷ ಟಿ.ವಿ.ಶಿವಶಂಕರಪ್ಪ, ಚಲನಚಿತ್ರ ನಟ ಸರಿಗಮ ವಿಜಿ, ಮೈಸೂರು, ಚಲನಚಿತ್ರ ನಿರ್ಮಾಪಕಿ ಮೀನಾ ತೂಗುದೀಪ ಶ್ರೀನಿವಾಸ್, ಸಾಹಿತಿ ಸೂರಿ ಶ್ರೀನಿವಾಸ್, ಶಶಿಧರ್ ಮತ್ತಿತರರು ಮಾತನಾಡಿದರು.
ಮಾಜಿ ಶಾಸಕ ಬಿ.ಆರ್.ನೀಲಕಂಠಪ್ಪ, ರಾಮು, ತಾಲ್ಲೂಕು ಬಲಿಜ ಸಂಘದ ಪದಾದಿಕಾರಿಗಳು, ನಿರ್ದೇಶಕರು, ಸದಸ್ಯರು, ಚಿಕ್ಕಮಗಳೂರು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ನರೇಂದ್ರನಾಥ್, ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು. ಸೂರಿ ಶ್ರೀನಿವಾಸ್ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

