ಚಿಕ್ಕಮಗಳೂರು

ಅಕ್ಷರ ಸೇವೆಗೂ ಸಾಹಿತ್ಯ ಪರಿಷತ್ ಮನ್ನಣೆ ನೀಡಿದೆ

Published On :

ಕ.ಪ್ರ.ವಾರ್ತೆ  ತರೀಕೆರೆ  ಫೆ .26
ಸಾಹಿತ್ಯ ಸಂಗೀತ ಕಲೆ ಇತ್ಯಾದಿ ಕ್ಷೇತ್ರಗಳ ಜೊತೆ ಜೊತೆಗೆ ಅಕ್ಷರ ಸೇವೆ ಸಲ್ಲಿಸುತ್ತಿರುವ ಮಹನೀಯರಿಗೂ ಕನ್ನಡ ಸಾಹಿತ್ಯ ಪರಿಷತ್ ಮನ್ನಣೆ ನೀಡುತ್ತ ಬಂದಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎನ್.ಎಸ್.ಶಿವಸ್ವಾಮಿ ತಿಳಿಸಿದ್ದಾರೆ.
 ಅವರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾರ್ಚ್  12 ರಂದು ನೆಡೆಯಲಿರುವ ತಾಲೂಕು ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ನಿಯೋಜಿತರಾಗಿರುವ ಪತ್ರಕರ್ತ ಅನಂತ ನಾಡಿಗ್ ಅವರಿಗೆ ಅಧಿಕೃತ ಆಹ್ವಾನ ನೀಡುವ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಅತ್ಯಧಿಕ ಸಮ್ಮೇಳನ: ಜಿಲ್ಲೆಯಲ್ಲೇ ತರೀಕೆರೆ ತಾಲೂಕು ಕಸಾಪ ಅತ್ಯಧಿಕ ಸಮ್ಮೇಳನ, ಹೋಬಳಿ ಸಮ್ಮೇಳನಗಳನ್ನು ಕನ್ನಡ ಪರ ಕಾರ್ಯಕ್ರಮಗಳನ್ನು ಸಂಘಟಿಸಿದ ಕೀರ್ತಿಗೆ ಪಾತ್ರವಾಗಿದೆ, ಎಲ್ಲರ ಸಹಕಾರದಿಂದ ಜಿಲ್ಲೆಯಲ್ಲಿ ಎಲ್ಲಿ ತಾಲೂಕುಗಳಲ್ಲಿ ಸಮ್ಮೇಳನಗಳನ್ನು ವಿಜೃಂಭಣೆಯಿಂದ ನೆಡೆಸಲಾಗಿದೆ, ಸಮ್ಮೇಳನಾಧ್ಯಕ್ಷರಾಗಿ ಅನಂತ ನಾಡಿಗ್ ಅವರು ನಿಯೋಜಿತರಾಗಿರುವುದು ಎಲ್ಲರಿಗೂ ಸಂತೋಷ ತಂದಿದೆ ಎಂದು ತಿಳಿಸಿದರು.
 ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಸುಬ್ರಹ್ಮಣ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಭಾಷಾಭಿವೃದ್ದಿ ದಿಸೆಯಲ್ಲಿ ಉಪನ್ಯಾಸ, ಮನಯಂಗಳದಿ ಸಾಹಿತ್ಯ ಸಲ್ಲಾಪ
ಇತ್ಯಾದಿ ಹಲವಾರು ಕಾರ್ಯಕ್ರಮಗಳ ಮೂಲಕ ಪರಿಷತ್ ಎಲ್ಲರ ಗಮನ ಸೆಳೆದಿದೆ ಎಂದರು.
 ಸಮ್ಮೇಳನಾಧ್ಯಕ್ಷರಾಗಿ ನಿಯೋಜಿತರಾಗಿರುವ ಅನಂತ ನಾಡಿಗ್ ಅವರಿಗೆ ಶಾಲು ಹೊದಿಸಿ ಫಲ ತಾಂಬೂಲ ನೀಡಿ ಅಧಿಕೃತವಾಗಿ ಆಹ್ವಾನಿಸಲಾಯಿತು.   ಹಿರಿಯ ಕಲಾವಿದ ಬೇಲೇನಹಳ್ಳಿ ಸೋಮಶೇಖರ್, ಕನ್ನಡಶ್ರೀ ಬಿ.ಎಸ್.ಭಗವಾನ್, ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಚ್.ಚಂದ್ರಪ್ಪ, ಅಜ್ಜಂಪುರ ಪುಟ್ಟಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಲ್.ರಮೇಶ್, ಎನ್.ಕೆ.ಸುಬ್ರಹ್ಮಣ್ಯ, ಪ್ರಕಾಶ್, ಅವರು ಮಾತನಾಡಿದರು.
ಯುವ ಕವಿ ದಾದಾಪೀರ್, ಕೆ.ನಾಗರಾಜ್, ನಾಗೇನಹಳ್ಳಿ ತಿಮ್ಮಯ್ಯ,  ಸೋಮಶೇಖರಯ್ಯ, ಕರಿಬಸಪ್ಪ, ರಮೇಶ್, ಮಮತ ಮಹಿಳಾ ಸಮಾಜದ ಅಧ್ಯಕ್ಷೆ ಸೌಭಾಗ್ಯಮ್ಮ, ಕಾರ್ಯದರ್ಶಿ ಲೀಲಾ
ಸೋಮಶೇಖರಯ್ಯ, ಉಮಾ ಪ್ರಕಾಶ್, ಶಾರದ ಅಶೋಕ್, ಲಕ್ಷ್ಮಿ ವಿಶ್ವನಾಥ್, ಪರಿಷತ್‌ನ ಸದಸ್ಯರು ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.