ಧರ್ಮವೇ ಇಲ್ಲದಿದ್ದರೆ ದೇಶ ಇರದು
ಚಿಕ್ಕಮಗಳೂರು: ಒಳ್ಳೆಯವರಿಗೆ ಕಾಲವಿಲ್ಲ ಎಂದು ಭಾವಿಸುವವರ ಸಂಖ್ಯೆ ಹೆಚ್ಚಾಗಿದೆ. ಕೆಲವು ವೇಳೆ ಈ ರೀತಿ ಆಗಿರಬಹುದು. ಆದರೆ, ಇದು ತಪ್ಪು. ತಡವಾಗಿಯಾದರೂ ಒಳ್ಳೆಯವರಿಗೆ ಕಾಲ ಬಂದೇ ಬರುತ್ತದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದ್ದಾರೆ.
ಶಾಸಕ ಸಿ.ಟಿ.ರವಿ ಅವರ ನಿವಾಸದಲ್ಲಿ ದಂಪತಿಯಿಂದ ಪಾದಪೂಜೆ ಸ್ವೀಕರಿಸಿದ ನಂತರ ಅವರು ಆಶೀರ್ವಚನ ನೀಡಿದರು.
ಪ್ರತಿಯೊಬ್ಬರೂ ತಮ್ಮಲ್ಲಿರುವ ಸ್ವಾರ್ಥ ಬಿಟ್ಟು ಬೇರೆಯವರಿಗಾಗಿ ಜೀವಿಸಬೇಕು. ಶರೀರ ನಮ್ಮದು, ಆಯಸ್ಸು ನಮ್ಮದು, ನಮ್ಮ ಮನೆ, ನಮ್ಮ ವಾಹನ ಎಂಬುದನ್ನು ಬಿಡಬೇಕು. ಯಾರೊಬ್ಬರು ನನ್ನ ಮೇಲೆ ಬೇರೆಯವರಿಗೆ ಹಕ್ಕಿದೆ ಎಂದು ಹೇಳುವರೋ, ಆ ರೀತಿಯಾಗಿ ನಡೆಯುವರೋ ಅಂತಹವರೂ ಕಾವಿಯನ್ನು ತೊಡದ ಸಂತರಾಗುತ್ತಾರೆ ಎಂದು ತಿಳಿಸಿದರು.
ಧರ್ಮವಿದ್ದಲ್ಲಿ ಮಾತ್ರ ದೇಶ ಇರುತ್ತದೆ. ಧರ್ಮವೇ ಇಲ್ಲದಿದ್ದರೆ ದೇಶ ಇರಲು ಸಾಧ್ಯವಿಲ್ಲ, ಧರ್ಮವೇ ಇಲ್ಲದಿದ್ದಲ್ಲಿ ದೇಶದ ಶವ ಮಾತ್ರ ಇರುತ್ತದೆ. ಧರ್ಮ ರಕ್ಷಣೆ, ಧರ್ಮ ವಿಕಾಸಕ್ಕೆ ಶಕ್ತಿ ಬೇಕು. ಧರ್ಮ ರಕ್ಷಣೆಗಾಗಿ ಹೋರಾಡುವವರ ಅವಶ್ಯಕತೆ ಪ್ರಸ್ತುತ ದೇಶಕ್ಕೆ ಅಗತ್ಯವಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸಮಾಜದ ಆಸ್ತಿಗೆ ಆಸೆ ಪಡುತ್ತಿದ್ದಾರೆ. ಇದು ಬದಲಾಗಿ ನಮ್ಮ ಆಸ್ತಿಯನ್ನು ಸಮಾಜಕ್ಕೆ ನೀಡುವಂತಾಗಬೇಕು. ರಾಷ್ಟ್ರ ನಮ್ಮದು ಎಂಬ ಭಾವನೆ ಎಲ್ಲರಲ್ಲಿಯೂ ಮೂಡಬೇಕು. ಆಗ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ಹೇಳಿದರು.
ನಗರಸಭೆ ಸದಸ್ಯರು ಸೇರಿದಂತೆ ಹಲವು ಜನಪ್ರತಿನಿಧಿಗಳು ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.
--
ಸೋಮೇಶ್ವರಸ್ವಾಮಿ ರಥೋತ್ಸವ
ತರೀಕೆರೆ: ಸಮೀಪದ ಲಕ್ಕವಳ್ಳಿ ಹೋಬಳಿ ಸೋಂಪುರ ಗ್ರಾಮದ ಶ್ರೀ ಪ್ರಸನ್ನ ಸೋಮೇಶ್ವರ ದೇವಾಲಯದಲ್ಲಿ ಗುರುವಾರ ಶ್ರೀಪ್ರಸನ್ನ ಸೋಮೇಶ್ವರ ಸ್ವಾಮಿಯವರ ರಥೋತ್ಸವವು ವೈಭವದಿಂದ ನಡೆಯಿತು.
ಮಾಜಿ ಶಾಸಕ ಎಸ್.ಎಂ. ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ. ಕುಮಾರ್, ತಹಸೀಲ್ದಾರ್ ಮತ್ತು ಮುಜರಾಯಿ ಅಧಿಕಾರಿ ಕೆ.ಎಚ್. ಶಿವಕುಮಾರ್, ಶ್ರೀಪ್ರಸನ್ನ ಸೋಮೇಶ್ವರ ದೇವಾಲಯದ ಅರ್ಚಕರು ಮತ್ತು ಸಮಸ್ತ ಗ್ರಾಮಭಕ್ತರು, ಮಹಾಜನರು ರಥೋತ್ಸವದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

