ಫಸಲು ಪಡೆಯಲು ಅಡ್ಡಿ: ದಯಾಮರಣ ಕೋರಿ ಸಿಎಂಗೆ ಮನವಿ
ಕೊಪ್ಪ: ಜಮೀನಿನ ಹಕ್ಕು ಸ್ವಾಧೀನ ಹೊಂದಿ, ಫಸಲು ಪಡೆಯಲು ಅಡ್ಜಿಪಡಿಸುತ್ತಿರುವ ತೋಟದ ಮಾಲೀಕರ ಪರವಾಗಿ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಭಾವ ಬೀರುತ್ತಿರುವುದರಿಂದ ನೊಂದ ರೈತ ಕುಟುಂಬವೊಂದು ಮುಖ್ಯಮಂತ್ರಿಗಳಿಗೆ ದಯಾಮರಣ ನೀಡುವಂತೆ ಬುಧವಾರ ಮನವಿ ಮಾಡಿದ್ದಾರೆ.
ತಾಲೂಕಿನ ಗುಡ್ಡೇತೋಟದ ಕೆ.ಟಿ.ಸುಬ್ಬಣ್ಣ, ಆತನ ಸಹೋದರ ಕೆ.ಟಿ. ಯೋಗೇಂದ್ರ, ರೈತ ಮುಖಂಡ ಡಿ.ಬಿ. ರಾಜೇಂದ್ರ, ತಹಸೀಲ್ದಾರ್ ಶ್ರೀಧರಮೂರ್ತಿ ಎಸ್. ಪಂಡಿತ್ ಮೂಲಕ ಮುಖ್ಯಮಂತ್ರಿಗೆ ದಯಾಮರಣದ ಮನವಿ ಸಲ್ಲಿಸಿತು. ಗುಡ್ಡೇತೋಟ ಸರ್ವೆ ನಂ.121 ರಲ್ಲಿ 30 ಎಕರೆ ಜಮೀನು ಹಕ್ಕು ಸ್ವಾಧೀನ ಹೊಂದಿದೆ. ಈ ಜಮೀನಿನಲ್ಲಿ ಫಸಲು ತೆಗೆಯಲು ಭದ್ರಾ ಎಸ್ಟೇಟ್ ಮಾಲೀಕರು ಅಡ್ಡಿಪಡಿಸುತ್ತಿರುವುದಲ್ಲದೆ, ತನ್ನ ಹಾಗೂ ತನ್ನ ಮಗನ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಕೆ.ಟಿ.ಸುಬ್ಬಣ್ಣ ದೂರಿದ್ದಾರೆ.
ರಾಜ್ಯ ಹೆಚ್ಚುವರಿ ಡಿ.ಜಿ. (ಕಾನೂನು ಮತ್ತು ಸುವ್ಯವಸ್ಥೆ) ಎಂ.ಎನ್. ರೆಡ್ಡಿ, ಭದ್ರಾ ಎಸ್ಟೇಟ್ ಪರವಾಗಿ ಪ್ರಭಾವ ಬೀರಿ ನನ್ನ ಸ್ವಾಧೀನ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಧಿಕಾರಿಗಳ ಪ್ರಭಾವ ಬಳಸಿ ನನ್ನ ಜಮೀನಿನ ಸ್ವಾಧೀನದ ಬೇಲಿ ಕಿತ್ತು ನನಗೆ ಮತ್ತು ಮಗನಿಗೆ ಜೀವ ಬೆದರಿಕೆ ಒಡ್ಡುವ ಹುನ್ನಾರವಿದೆ ಎಂದು ದೂರಿರುವ ಅವರು ನನಗೆ ನ್ಯಾಯ ಪಡೆಯಲು ಕಷ್ಟವಾಗುತ್ತಿದೆ. ವಯೋವೃದ್ಧನಾಗಿ ಹಾಗೂ ಆರ್ಥಿಕವಾಗಿ ಜರ್ಝರಿತವಾಗಿರುವ ನನ್ನ ಇಡೀ ಕುಟುಂಬಕ್ಕೆ ದಯಾಮರಣ ದಯಪಾಲಿಸಬೇಕಾಗಿ ಅವರು ತಮ್ಮ ಮನವಿಯಲ್ಲಿ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

