ಚಿಕ್ಕಮಗಳೂರು

ಶಾಸಕ ವೈಎಸ್ವಿ ದತ್ತಗೆ ಸನ್ಮಾನ

Published On :


ತರೀಕೆರೆ: ಕವಿ ಕುಮಾರವ್ಯಾಸನ ಪದ್ಯಗಳಲ್ಲಿ ಜನಪರ ಚಿಂತನೆ ಇದೆ ಎಂದು ಕಡೂರು ಶಾಸಕ ವೈಎಸ್ವಿ ದತ್ತ ತಿಳಿಸಿದರು. ಬ್ರಾಹ್ಮಣ ಸೇವಾ ಸಮಿತಿ ವತಿಯಿಂದ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿಯವರ 121ನೇ ರಥೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕುಮಾರವ್ಯಾಸನ ಪದ್ಯಗಳನ್ನು  ಓದಿದಷ್ಟು ಮತ್ತೆ ಓದಿಸಿಕೊಂಡು ಹೋಗುತ್ತದೆ. ಪದ್ಯಗಳು ಅಷ್ಟು ಅರ್ಥಗರ್ಭಿತವಾಗಿದೆ, ಜಾತಿಯ ಸೀಮಿತ ಪರಿವಿಧಿಯಿಂದ ಮೇಲೆದ್ದ ಕುಮಾರವ್ಯಾಸರು ಕನ್ನಡದ ಶ್ರೇಷ್ಠ ಕವಿಗಳಾಗಿದ್ದಾರೆ. ಕುಮಾರವ್ಯಾಸನ ಪದ್ಯಗಳಲ್ಲಿನ ದ್ರೋಣಾಚಾರ್ಯರ ಒಂದು ಪ್ರಸಂಗವನ್ನು ಉದಹರಿಸಿದ ಶಾಸಕರು, ತಮಗೂ ತರೀಕೆರೆಗೂ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು. ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ನಿಕಟಪೂರ್ವ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿದರು. ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಎ.ವಿ. ನಾಗಭೂಷಣ್, ಎನ್. ಮಂಜುನಾಥ್ ಅವರು ಶಾಸಕ ದತ್ತ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ದಿ. ಡಾ. ಎಚ್.ಎಸ್. ವೆಂಕಟರಾಮ್ ಇವರ ಸ್ಮರಣಾರ್ಥ ಗಮಕ ಕಲಾವಿದರಾದ ರಾಜಾರಾಂ ಮತ್ತು ಅನಂತನಾರಾಯಣ ಅವರಿಂದ ಭಾರತ ವಾಚನ ಮತ್ತು ವ್ಯಾಖ್ಯಾನ ಏರ್ಪಡಿಸಲಾಗಿತ್ತು. ಸಮಿತಿ ಉಪಾಧ್ಯಕ್ಷ ಗೋಪಾಲಕೃಷ್ಣ ಅವರು ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.