'ಸಾಧನೆಗೆ ಕಠಿಣ ಪರಿಶ್ರಮ ಅವಶ್ಯ'
ಚಿಕ್ಕಮಗಳೂರು: ನಿರ್ದಿಷ್ಟ ಗುರಿ ಸಾಧಿಸಲು ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಅಗತ್ಯ ಇದೆ ಎಂದು ವಿಧಾನಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಹೇಳಿದ್ದಾರೆ.
ಹಿರೇಮಗಳೂರಿನ ಶ್ರೀಪ್ರಭುಲಿಂಗಸ್ವಾಮಿ ಪ್ರೌಢಶಾಲೆಯಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಓದುವಿಗೆ ಯಾವುದೇ ಹಂತದಲ್ಲೂ ಸಮಸ್ಯೆಗಳು ಎದುರಾಗಬಾರದು ಎಂಬ ಕಾರಣದಿಂದ ಸರ್ಕಾರ ಸೈಕಲ್, ಬಿಸಿಯೂಟ, ಕ್ಷೀರಭಾಗ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಎಲ್ಲ ಯೋಜನೆಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿ ತಂದೆ ತಾಯಂದಿರು, ಶಾಲೆ ಹಾಗೂ ಊರಿಗೆ ಹೆಸರು ತರಬೇಕು ಎಂದು ಸಲಹೆ ಮಾಡಿದರು.
ಗುರಿ ತಲುಪಿ: ಕೆಲ ದಶಕಗಳ ಹಿಂದೆ ಈ ರೀತಿಯ ಯೋಜನೆಗಳು, ಸವಲತ್ತುಗಳು ಶಾಲಾ ಕಾಲೇಜುಗಳಲ್ಲಿ ಇರಲಿಲ್ಲ. ಅಂಥಾ ಕಷ್ಟ ಪರಿಸ್ಥಿತಿಯಲ್ಲೂ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಹೆಸರು ತರುತ್ತಿದ್ದರು. ಈಗ ಎಲ್ಲ ರೀತಿಯ ಸವಲತ್ತುಗಳು ಸರ್ಕಾರದಿಂದ ದೊರೆಯುತ್ತಿವೆ. ವಿದ್ಯಾರ್ಥಿಗಳು ಬಳಸಿ ಗುರಿಮುಟ್ಟಬೇಕು. ಶಾಲೆಯ ಅಡುಗೆ ಮನೆ ನಿರ್ಮಾಣಕ್ಕೆ ಸರ್ಕಾರ 3 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ತಮ್ಮ ಶಾಸಕರ ನಿಧಿಯಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕಾಂಪೌಂಡ್ ನಿರ್ಮಿಸಿ: ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡುವಂತೆ ಒತ್ತಾಯಿಸಿ ಕನ್ನಡ ಪೂಜಾರಿ, ಸಾಹಿತಿ ಹಿರೇಮಗಳೂರು ಕಣ್ಣನ್ ಮನವಿ ಸಲ್ಲಿಸಿ ಮಾತನಾಡಿ, ಶಾಲೆ ಉತ್ತಮವಾಗಿ ನಡೆಯುತ್ತಿದೆ. ಆದರೆ, ಅದಕ್ಕೆ ಸೂಕ್ತ ರಕ್ಷಣೆ ಇಲ್ಲದ ಕಾರಣದಿಂದ ಒಳಗೆ ಯಾರ್ಯಾರು ಬರುತ್ತಿದ್ದಾರೆ. ಅದನ್ನು ತಪ್ಪಿಸಲು ಕಾಂಪೌಂಡ್ ನಿರ್ಮಿಸಬೇಕಾಗಿದೆ ಎಂದು ಹೇಳಿದರು.
ದೈಹಿಕ, ಮಾನಸಿಕ ವ್ಯಾಯಾಮಕ್ಕಾಗಿ ಸೈಕಲ್ ತುಳಿಯುವುದು ಒಳ್ಳೆಯದು. ಸರ್ಕಾರ ಸದುದ್ದೇಶದಿಂದ ಸೈಕಲ್ ನೀಡುತ್ತಿದೆ. ಅದಕ್ಕೆ ಬೇರೆ ಕಾರ್ಯಗಳಿಗೆ ಉಪಯೋಗಿಸದೆ ಶಾಲೆಗೆ ಬಂದು ಹೋಗಲು ಬಳಸಬೇಕು. ಉತ್ತಮ ಆರೋಗ್ಯದೊಂದಿಗೆ ವಿದ್ಯಾರ್ಥಿಗಳು ವಿವೇಕವಂತರಾಗಬೇಕು ಎಂದು ಸಲಹೆ ಮಾಡಿದರು.
ನಗರಸಭೆ ಸದಸ್ಯ ಎಚ್.ಎಸ್. ಪುಟ್ಟಸ್ವಾಮಿ, ನಿವೃತ್ತ ಉಪನ್ಯಾಸಕ ಎ.ಜಿ. ವಿಶ್ವಮೂರ್ತಿ, ಮುಖ್ಯೋಪಾಧ್ಯಾಯ ಸಿ.ಪಿ. ಶ್ರೀಧರ್ ಮಾತನಾಡಿದರು.
ಅಂಬೇಡ್ಕರ್ ಯುವಜನ ಸಂಘ ಅಧ್ಯಕ್ಷ ಎಚ್.ಸಿ. ಗಂಗಾಧರ್, ಐಡಿಎಸ್ಜಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಆರ್. ವಿಜಯನ್, ಮುಖಂಡರಾದ ಚಂದ್ರಪ್ಪ, ಎಚ್.ಜೆ. ಶಿವಕುಮಾರ್, ನವಚೇತನ ಯುವಕ ಸಂಘ ಪ್ರಧಾನ ಕಾರ್ಯದರ್ಶಿ ಜಗದೀಶ್, ಪುಷ್ಪರಾಜ್, ಸುರೇಶ್, ರವಿಕುಮಾರ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

