ಚಿಕ್ಕಮಗಳೂರು

ಬಿಳಿಗಿರಿರಂಗನಾಥಸ್ವಾಮಿ ಜಾತ್ರೆ ಭಕ್ತರಿಗೆ ಅಗತ್ಯ ಸೌಕರ್ಯ ಕಲ್ಪಿಸಿ: ಶಾಸಕ

Published On :

ಯಳಂದೂರು: ತಾ. ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗಸ್ವಾಮಿ ಸಂಕ್ರಾಂತಿ ರಥೋತ್ಸವದ ಚಿಕ್ಕ ಜಾತ್ರೆ  ಜ.15ರಂದು ನಡೆಯುವುದರಿಂದ ಜಾತ್ರೆಗೆ ಬರುವ ಲಕ್ಷಾಂತರ ಪ್ರವಾಸಿಗರು ಮತ್ತು ಭಕ್ತಾಧಿಗಳಿಗೆ ಯಾವುದೇ ಕುಂದು ಕೊರತೆ ಬಾರದಂತೆ ಅಧಿಕಾರಿಗಳು ಅಗತ್ಯ ಸೌಕರ್ಯ ಕಲ್ಪಿಸಲು ಮುಂದಾಗಬೇಕು ಎಂದು ಶಾಸಕ ಎಸ್.ಜಯಣ್ಣ ಸೂಚಿಸಿದರು.
ಪಟ್ಟಣದ ತಾಪಂ ಸಭಾಗಣದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಿಳಿಗಿರಿರಂಗಸ್ವಾಮಿ ಸಂಕ್ರಾಂತಿ ಚಿಕ್ಕ ಜಾತ್ರೆ ಜ. 12 ರಿಂದ 17  ವರಗೆ ನಡೆಯುವುದರಿಂದ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮತ್ತು ಪ್ರವಾಸಿಗರು ಆಗಮಿಸುವುದರಿಂದ ದೇವಾಲಯದ ಆಸು ಪಾಸುಗಳಲ್ಲಿ ಮತ್ತು ಬಸ್‌ನಿಲ್ದಾಣಗಳಲ್ಲಿ  ತಾತ್ಕಾಲಿಕ ಕುಡಿಯುವ ನೀರಿನ ನಲ್ಲಿಗಳನ್ನು ಅಳವಡಿಸಬೇಕು. ದುಸ್ಥಿತಿಯಲ್ಲಿರುವ ಕೈಪಂಪ್‌ಗಳ ದುರಸ್ಥಿಗೆ ಮುಂದಾಗಿ,  ಕಿರುನೀರು ಸರಬರಾಜು ಮೋಟಾರು ರಿಪೇರಿ ಆಗದಂತೆ ಮುಂಜಾಗ್ರತೆ ವಹಿಸಬೇಕು.
ನಿರಂತರ ವಿದ್ಯುತ್:   ಜಾತ್ರೆಗೆ ರಾಜ್ಯದ ನಾನಾ  ಜಿಲ್ಲೆಗಳಿಂದ  ಭಕ್ತರು ಆಗಮಿಸುವುದರಿಂದ ಹೆಚ್ಚುವರಿ ನೂರಕ್ಕೂ ಅಧಿಕ ಬಸ್ ವ್ಯವಸ್ಥೆ ಕಲ್ಪಿಸಬೇಕು,ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಸಜ್ಜಾಗಬೇಕು ಎಂದು ಸೂಚಿಸಿದರು.
 ಬಿಳಿಗಿರಿರಂಗನ ಬೆಟ್ಟದ ಬಸ್‌ನಿಲ್ದಾಣದಲ್ಲಿ ತಾತ್ಕಾಲಿವಾಗಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿಕೊಳ್ಳಲು ಸಾರಿಗೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಬೇಕು. ಒಂದು ವಾರ ಬಿಳಿಗಿರಿರಂಗನ ಬೆಟ್ಟದಲ್ಲಿ ಚಿಕ್ಕ ಜಾತ್ರೆ ನಡೆಯುವುದರಿಂದ ಚೆಸ್ಕಾಂ ಇಲಾಖೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಮತ್ತು ವಿದ್ಯುತ್ ಪರಿವರ್ತಕಗಳು ಮತ್ತು ಕಂಬಗಳಲ್ಲಿ ವ್ಯತ್ಸಾಸಗಳಿದ್ದರೆ ಸರಿಪಡಿಸಿಕೊಳ್ಳಬೇಕು.
 ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲೆ ಮೊಕ್ಕಾಂ ಹೂಡುವ ಮೂಲಕ ತೊಂದರೆಯಾಗಂತೆ ಕಾರ್ಯಪ್ರವೃತರಾಗಿ ಎಂದು ಸೂಚಿಸಿದರು. ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಿ, ಕಾನೂನು ಸುವ್ಯವ್ಯವಸ್ಥೆ ಕಾಪಾಡುವಂತೆ ಇದೇ ಸಂದರ್ಭದಲ್ಲಿ ಶಾಸಕರು ನಿರ್ದೇಶನ ನೀಡಿದರು.
 ತಾಪಂ ಅಧ್ಯಕ್ಷೆ ಗಂಗಾಮಣಿ  ರೇವಣ್ಣ,ಉಪಾಧ್ಯಕ್ಷ ಮಹೇಶ್‌ಕುಮಾರ್,ಜಿಪಂ ಸದಸ್ಯರಾದ ಕಿನಕಹಳ್ಳಿ ಸಿದ್ದರಾಜು,ಕೇತಮ್ಮ,ಯರಗಂಬಳ್ಳಿ ಗ್ರಾ.ಪಂ.ಅಧ್ಯಕ್ಷ ಮಹೇಶ್,ಬಿಳಿಗಿರಿರಂಗಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೈಸೂರು ಶ್ರೀನಿವಾಸ್, ಟಿಎಪಿಎಂಎಸ್ ಅಧ್ಯಕ್ಷ ಮದ್ದೂರು ಶ್ರೀಕಂಠ,  ಕೂಮಾರನಪುರ ಶ್ರೀರಾಮ್, ಗ್ರಾಪಂ ಮಾಜಿ ಅಧ್ಯಕ್ಷ ಶೇಷಾದ್ರಿ ದುಗಹಟ್ಟಿ ವೀರಭದ್ರಪ್ಪ,ಮಾಜಿ ಧರ್ಮದರ್ಶಿ ದೊರೆ,ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮದ್ದೂರು ರಾಮಚಂದ್ರ, ತಾ.ಪಂ.ಇಒ ರಂಗನಾಥ್,ಬಿಳಿಗಿರಿರಂಗನ ಬೆಟ್ಟದ ಇಒ ವೆಂಕಟೇಶಪ್ರಸಾದ್  ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.