ಸಮಾಜ ಸೇವೆಗೆ ಜೀವನ ಮುಡುಪಿಟ್ಟ ಚಿದಂಬರ ಪಂಡಿತ: ನಾಗರಾಜ್
ತರೀಕೆರೆ: ಸತ್ಕವಿರತ್ನ ಕೀರ್ತಿಶೇಷ ಚಿದಂಬರ ಪಂಡಿತರು ಒಂದು ಚೈತನ್ಯದ ನೆನಪಾಗಿದ್ದಾರೆ ಎಂದು ಬೆಂಗಳೂರು ಸಂಸ್ಕೃತ ಮಹಾ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ವೇ.ಬ್ರ.ಶ್ರೀ ಸೌ.ತಿ. ನಾಗರಾಜ್ ತಿಳಿಸಿದ್ದಾರೆ.
ಭಾನುವಾರ ಪಂಡಿತ ಸಹೋದರರು ವತಿಯಿಂದ ಅನ್ನಪೂರ್ಣ ಭವನದಲ್ಲಿ ಸತ್ಕವಿರತ್ನ ತರೀಕೆರೆ ಚಿದಂಬರ ಪಂಡಿತರ 138ನೇ ಸಂಸ್ಕರಣಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ನೆನಪು-ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೆನಪು: ಕೇವಲ ವ್ಯಕ್ತಿಯ ನೆನಪಲ್ಲ ಇದು, ಒಂದು ದಿವ್ಯ ಚೇತನದ ನೆನಪು, ಚಿದಂಬರ ಪಂಡಿತರು ಇಡೀ ಸಮಾಜಕ್ಕಾಗಿ, ಧರ್ಮಕ್ಕಾಗಿ ಜೀವನವನ್ನೇ ಮುಡಿಪಿಟ್ಟಿದ್ದಾರೆ. ನಾಡಿನ ಪ್ರಸಿದ್ಧ ವಿದ್ವಾಂಸರಾಗಿ, ಕವಿಗಳಾಗಿ, ಆಯುರ್ವೇದ ಪಂಡಿತರಾಗಿ ಲೋಕಕ್ಕೆ ಮಹದುಪಕಾರ ಮಾಡಿದ್ದಾರೆ. ಅವರು ರಚಿಸಿದ ಗ್ರಂಥ ಸರ್ವಶ್ರೇಷ್ಠವಾಗಿದ್ದು, ತುಳಸೀ ಪೂಜೆಯಿಂದ ಹಿಡಿದು ಎಲ್ಲಾ ವ್ರತ, ಪೂಜೆ ಪುನಸ್ಕಾರಗಳು ಗ್ರಂಥದಲ್ಲಿದೆ. ಪ್ರತಿ ಕುಟುಂಬಕ್ಕೆ ಈ ಗ್ರಂಥ ತಲುಪಬೇಕು. ಅದನ್ನು ಅನುಷ್ಠಾನಕ್ಕೆ ತರಬೇಕು ಎಂಬುದು ತಮ್ಮ ಆಶಯ ಎಂದು ತಿಳಿಸಿದರು.
ಗ್ರಂಥ ರಚನೆ: ಮೈಸೂರು ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿವೃತ್ತ ಉಪನಿರ್ದೇಶಕ ಡಾ.ಟಿ.ವಿ. ಸತ್ಯನಾರಾಯಣ ಮಾತನಾಡಿ, ಚಿತ್ ಅಂದರೆ ಜ್ಞಾನ, ಜ್ಞಾನವನ್ನೇ ತನ್ನ ಅಸ್ತ್ರವನಾಗಿಸಿಕೊಂಡವರು ಎಂದು ಅರ್ಥ, ಮಂತ್ರಗಳನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಚಿದಂಬರ ಪಂಡಿತರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಎ.ವಿ. ನಾಗಭೂಷಣ್ ಕಾರ್ಯಕ್ರಮ ಉದ್ಘಾಟಿಸಿ, ಚಿದಂಬರ ಪಂಡಿತರು ಮುದ್ರಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ್ದು, ಅವರ ಜೀವನ ಸಾಧನೆಯನ್ನು ಹೃದಯಪೂರ್ವಕವಾಗಿ ನೆನಪಿಸಿಕೊಂಡು ಗೌರವ ಸಮರ್ಪಿಸಬೇಕು ಎಂದರು.
ಭದ್ರಾವತಿ ಅಕಾಶವಾಣಿ ನಿರ್ದೇಶಕ ಡಾ.ಎ.ಎಸ್. ಶಂಕರನಾರಾಯಣ ಮಾತನಾಡಿದರು. ಕೃತಿ ಪರಿಚಯದ ಪುಸ್ತಕ ಬಿಡುಗಡೆ ನೆರವೇರಿಸಲಾಯಿತು. ಚಿದಂಬರ ಪಂಡಿತರು ರಚಿಸಿದ ಋಗ್ವೇದೀಯ ನಿತ್ಯಕರ್ಮ ವಿಧಾನಂ ಗ್ರಂಥವನ್ನು ವಿತರಿಸಲಾಯಿತು.
ಶ್ರೀವತ್ಸ ಭಜನಾ ಮಂಡಳಿ ಸದಸ್ಯೆಯರಿಂದ ಭಜನೆ ಏರ್ಪಡಿಸಲಾಗಿತ್ತು. ತ.ರಾ. ಅನಂತ ಪಂಡಿತ್, ತ.ರಾ. ಶಿವಶಂಕರ ಪಂಡಿತ್, ಶರತ್ ಪಂಡಿತ್, ಶಶಾಂಕ ಪಂಡಿತ್, ಛಲಪತಿ, ಚಂದ್ರಮೌಳಿ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

