ಚಿಕ್ಕಮಗಳೂರು

ಹಣದ ಸಿರಿವಂತಿಕೆಗಿಂತ ಗುಣದ ಶ್ರೀಮಂತಿಕೆಗೆ ಒತ್ತು

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜ.5
ಆಚಾರ್ಯ ತುಳಸಿ ಅವರು ಯುಗ ಪ್ರವರ್ತಕರು. ಅಣುವ್ರತ ಆಚಾರ್ಯ ಸಂಹಿತೆ ಮೂಲಕ ಸ್ವಾಸ್ಥ್ಯ ಸಮಾಜಕ್ಕೆ ದಿಕ್ಸೂಚಿ ನೀಡಿದ್ದಾರೆ ಎಂದು ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಜೀವನಸಂಧ್ಯಾ ವೃದ್ಧಾಶ್ರಮ ವಾಸಿಗಳೊಂದಿಗೆ ತೇರಾಪಂಥ ಮಹಿಳಾ ಮಂಡಳ ಇತ್ತೀಚೆಗೆ ಆಯೋಜಿಸಿದ್ದ ಆಚಾರ್ಯ ತುಳಸಿ ಜನ್ಮಶತಾಬ್ಧಿ ಆಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಹಣದ ಶ್ರೀಮಂತಿಕೆಗಿಂತ ಗುಣದ ಶ್ರೀಮಂತಿಕೆ ಪ್ರಚುರಪಡಿಸಿದವರು ಎಂದರು.
ಹಿರಿಯರೊಂದಿಗೆ ಬಾಳಿ:  ಇದ್ದಷ್ಟು ದಿನ ಬೇರೆಯವರಿಗೆ ಒಳಿತು ಮಾಡುವುದಕ್ಕಿಂತ ದೊಡ್ಡ ಕೆಲಸ ಬೇರೊಂದಿಲ್ಲ.
 ನೇತ್ರದಾನದ ಮೂಲಕ ಸತ್ತ ನಂತರವೂ ಜಗತ್ತು ನೋಡಲು ಸಾಧ್ಯ. ಅಂಗಾಂಗ ದಾನ ಪುಣ್ಯದ ಕೆಲಸ. ನೈತಿಕತೆಯಿಂದ ಮಾನಸಿಕ ಶಾಂತಿ ಸಾಧ್ಯ. ನಾವು ನಮ್ಮ ಕೆಲಸವನ್ನು ಬಿಟ್ಟು. ಬೇರೆಯವರಿಗೆ ತೊಂದರೆ ಕೊಡುವ ಸ್ವಭಾವವನ್ನು ಬದಲಾಯಿಸಿಕೊಳ್ಳಬೇಕೆಂದ ಸಂಸದರು, ಮಕ್ಕಳನ್ನು ವಸತಿ ಶಾಲೆ, ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪ್ರವೃತ್ತಿ ಒಳ್ಳೆಯದಲ್ಲ.
 ಆಕಸ್ಮಿಕ ಅನಿವಾರ್ಯತೆ ಹೊರತುಪಡಿಸಿ ಸಾಧ್ಯವಾದಷ್ಟು ಚಿಕ್ಕ ಮಕ್ಕಳು, ವಯೋವೃದ್ಧ ಹಿರಿಯರು ಒಟ್ಟಾಗಿ ಬಾಳುವುದು ಒಳ್ಳೆಯದು ಎಂದರು.
ಬದುಕಿನ ಸೂತ್ರ:  ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮಂಡಳಿ ಅಧ್ಯಕ್ಷೆ ಮಂಜು ಬನ್ಸಾಲಿ ಮಾತನಾಡಿ, ಜೈನಧರ್ಮ ಸತ್ಯಧರ್ಮ. 9ನೇ ಆಚಾರ್ಯರಾದ ತುಳಸಿಜೀ 22ನೇ ವಯಸ್ಸಿನಿಂದ ಕಾರ್ಯಪ್ರವೃತ್ತರಾದರು.
 ನೈತಿಕ ಕ್ರಾಂತಿ, ಅಣುವ್ರತ ಜ್ಞಾನ, ಪ್ರೇಕ್ಷಾಧ್ಯಾನದ ಮೂಲಕ ಬದುಕಿನ ಸೂತ್ರ ತಿಳಿಸಿಕೊಟ್ಟರು. ಅಣುವಿನಿಂದಲೇ ಜೀವನ-ನಾಶ ಎರಡೂ ಇದೆ. ಅಣು ಬಿಂದು ಆದರೂ ಅಪಾರ ಶಕ್ತಿ ಇದೆ. ಚಾರಿತ್ರ್ಯ ಮೌಲ್ಯಗಳು ಜೀವನದಲ್ಲಿ ಇರಬೇಕೆಂದು ಆಚಾರ್ಯ ತುಳಸಿ ಪ್ರತಿಪಾದಿಸಿದ್ದು, ಮಹಿಳಾ ಸಬಲೀಕರಣಕ್ಕೂ ಪ್ರಯತ್ನಿಸಿದವರೆಂದರು.
ತೋಟದ ಮನೆಯಲ್ಲಿ ತಂಗಿದ್ದರು:  ಮಹಿಳಾ ಜಾಗೃತಿ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಮಾತನಾಡಿ, ಅಣುವ್ರತ ಸಂಹಿತೆ ಬಹುತೇಕ ಎಲ್ಲ ಧರ್ಮಗಳಲ್ಲೂ ಪ್ರತಿಪಾದಿಸಲ್ಪಟ್ಟ ಸಂಗತಿಯನ್ನೆ ಹೊಂದಿದೆ.
 ಆದರೆ, ಆಚಾರ್ಯ ತುಳಸಿ ಅವರು ಜನಮನಕ್ಕೆ ತಲುಪಿಸಿದ್ದಾರೆ. 1968 ರಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಅವರು, ತಿಪ್ಪನಹಳ್ಳಿ ತೋಟದ ತಮ್ಮ ಮನೆಯಲ್ಲಿ ತಂಗಿದ್ದರೆಂಬುದೇ ನಮ್ಮ ಪುಣ್ಯ ಎಂದರು. ತೇರಾಪಂಥ ಯುವ ಪ ರಿಷತ್ ಅಧ್ಯಕ್ಷ ಅನಿಲ್ ಸಕ್ಲೇಚಾ, ತೇರಾಪಂಥ ಸಭಾ ಅಧ್ಯಕ್ಷ ತಾರಾಚಂದ್ ಜೈನ್,  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಜೀವನಸಂಧ್ಯಾ ಟ್ರಸ್ಟ್ ಮಾಜಿ ಅಧ್ಯಕ್ಷ ಕಾಂತಿಲಾಲ್ ಜೈನ್, ತೇರಾಪಂಥ ಟ್ರಸ್ಟ್ ಅಧ್ಯಕ್ಷ ಅಶೋಕ ಡೋಸಿ, ತೇರಾಪಂಥ ಸಭಾ ಕಾರ್ಯದರ್ಶಿ ಭರತ ಭಲ್ಲೊಟಿ, ಮಾಜಿ ಅಧ್ಯಕ್ಷ ಲಾಲ್‌ಚಂದ್ ಬನ್ಸಾಲಿ, ಬಸಂತಿದೇವಿ ಸಿಪ್ಪಾನಿ ಮಾತನಾಡಿದರು.
ಮಹಿಳಾ ಮಂಡಳದ ಚಂದ್ರಾ ಬಾಯಿ ಗಾದಿಯಾ ಸ್ವಾಗತಿಸಿ, ಡಿಂಪಲ್ ನಿರೂಪಿಸಿ, ಸಂಗೀತಾ ಗಾದಿಯಾ ವಂದಿಸಿದರು.
ವೃದ್ಧಾಶ್ರಮ ವಾಸಿಗಳಿಗೆ ಹೊದಿಕೆ ಕೊಡುಗೆ ನೀಡಲಾಯಿತು. ಆಶ್ರಮ ವಾಸಿಗಲು ಹಾಗೂ ಮಹಿಳಾ ಮಂಡಳಿ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.