ಚಿಕ್ಕಮಗಳೂರು

ಸಹಕಾರದಿಂದ ಸರ್ಕಾರಿ ಯೋಜನೆ ಸಫಲ

Published On :

ನರಸಿಂಹರಾಜಪುರ: ಇಂದಿರಾ ನಗರ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗೆ ಉತ್ತಮ ನಿರ್ವಹಣಾ ಸಮಿತಿ ಎಂದು ಮಾನ್ಯತೆ ದೊರಕಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಲಲಿತಾ ತಿಳಿಸಿದರು.
ಅವರು ಸೋಮವಾರ ಇಂದಿರಾ ನಗರದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಸಹಕಾರ ಅಗತ್ಯ: ಇಚ್ಚಾಶಕ್ತಿ, ಸಹಕಾರ ಮನೋಭಾವ ಇದ್ದರೆ ಸರ್ಕಾರದ ಯೋಜನೆ ಸಫಲವಾಗಲಿದೆ. ಗ್ರಾಮಗಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಗ್ರಾಮಗಳಿಗೆ ಅವಶ್ಯತೆಯಾಗಿರುವುದನ್ನು ಪೂರೈಸುವುದು ಸಮಿತಿಗಳ ಜವಬ್ದಾರಿಯಾಗಿದೆ. ಎಂದವರು ಹೇಳಿದರು.
ಇಂದಿರಾ ನಗರ ಸಮಿತಿ  ಅತ್ಯುತ್ತಮ ನಿರ್ವಹಣೆ ತೋರಿ ರಾಜ್ಯ ಮಟ್ಟಕ್ಕೆ ಸಮಿತಿಯ ಹೆಸರು ಶಿಪಾರಸು ಮಾಡಲಾಗಿದೆ. ಗ್ರಾಮಸ್ಥರ ಸಹಕಾರವೂ ಇದಕ್ಕೆ ಕಾರಣವಾಗಿದೆ ಎಂದರು.
ಗ್ರಾಪಂ ಸ್ಪಂದನೆ: ಅಧ್ಯಕ್ಷತೆ ವಹಿಸಿದ್ದ ನಾಗಲಾಪುರ ಗ್ರಾಪಂ ಸದಸ್ಯ ಫಾರೂಕ್ ಮಾತನಾಡಿ, ಗ್ರಾಮಸ್ಥರ ಬೇಡಿಕೆಗಳಿಗೆ ಗ್ರಾಪಂ ಸ್ಪಂದಿಸಿ ಕೆಲಸ ಮಾಡುತ್ತಿದೆ. ಇಂದಿರಾ ನಗರ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಈ ರೀತಿ ಸ್ಥಳೀಯವಾಗಿ ಉತ್ತಮ ಕೆಲಸ ಮಾಡಿರುವುದು ಗ್ರಾಪಂಗೆ ಹೆಮ್ಮೆ ತಂದಿದೆ ಎಂದರು.
ಇಂದಿರಾ ನಗರದ ಮಹಿಳಾ ಸಂಘಟನೆಗಳು ಅಭಿವೃದ್ಧಿ ಕಾರ್ಯದಲ್ಲಿ ಉತ್ತಮ ಸಹಕಾರ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳಾ ಸಂಘಟನೆಗಳ ಬೇಡಿಕೆಯನ್ನು ಗ್ರಾಪಂ ಈಡೇರಿಸಲಿದೆ ಎಂದರು.
ಸಭೆಯಲ್ಲಿ ಆರೋಗ್ಯ ಇಲಾಖೆಯ ಪದ್ಮಾ, ಗ್ರಾಮ ಆರೋಗ್ಯ ಮತ್ತು ನಿರ್ವಹಣಾ ಸಮಿತಿ ಅಧ್ಯಕ್ಷ ಜಗದೀಶ್, ಆರೋಗ್ಯ ಇಲಾಖೆಯ ಸಹಾಯಕಿ ಅನ್ನಮ್ಮ, ಆಶಾ ಕಾರ್ಯಕರ್ತೆ ಗಾಯತ್ರಿ, ಗ್ರಾಮಸ್ಥರಾದ ಗಿರಿರಾಜ್, ಅಂಗನವಾಡಿ ಕಾರ್ಯಕರ್ತೆ ಶಾರದಾ ಉಪಸ್ಥಿತರಿದ್ದರು.
 ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯ್ತಿಗೆ ಮನವಿ ಪತ್ರ ಅರ್ಪಿಸಿ, ಇಂದಿರಾ ನಗರದ ಬೀದಿಯ ಪ್ರಾರಂಭದಲ್ಲಿ ಕಸದ ತೊಟ್ಟಿ ಇದ್ದು, ಇದನ್ನು ತೆಗೆಸಬೇಕು. ಅಂಗನವಾಡಿ ಬಳಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.