ನರಸಿಂಹರಾಜಪುರದಲ್ಲೂ ಪ್ರತಿಭಟನೆ
ನರಸಿಂಹರಾಜಪುರ: ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟದ ಕರೆಯಂತೆ ಅನ್ನಭಾಗ್ಯ ಯೋಜನೆಯಡಿ ಕಾರ್ಮಿಕರ ಹಕ್ಕುಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ಇಲ್ಲಿನ ಹಮಾಲಿ ಕಾರ್ಮಿಕರು ಕಾರ್ಮಿಕ ಮುಖಂಡ ಉಮರ್ ನೇತೃತ್ವದಲ್ಲಿ ವಾಟರ್ ಟ್ಯಾಂಕ್ ಸಮೀಪದ ರಂಗಮಂದಿರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಕಳೆದ 20 ವರ್ಷದಿಂದಲೂ ಹಮಾಲಿ ಕಾರ್ಮಿಕರಿಗೆ 1 ಮೂಟೆಗೆ ಕೇವಲ ರು. 2 ನೀಡಲಾಗುತ್ತಿದೆ. ಕನಿಷ್ಠ 4 ರುಪಾಯಿ ನೀಡಬೇಕು. ಗೋಡನ್‌ನಲ್ಲಿ ಹಾವು ಕಟ್ಟಿದ ಸಂದರ್ಭದಲ್ಲಿ ನೆರವಿಗೆ ಯಾರೂ ಬರಲಿಲ್ಲ. ಒಂದು ಸಂದರ್ಭದಲ್ಲಿ ಮೂಟೆ ಹೊರುವಾಗ ಅವಗಢವಾಗಿ ಬೆರಳು ತುಂಡಾಗಿತ್ತು. ಆಗಲೂ ನೆರವಿಗೆ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನ್ನಭಾಗ್ಯ ಯೋಜನೆಯಡಿ ಕೆಲಸ ಮಾಡುವ ಎಲ್ಲಾ ಹಮಾಲಿ ಕಾರ್ಮಿಕರಿಗೆ ಆಹಾರ ಇಲಾಖೆ ನಿಗಮ ಗುರುತಿನ ಚೀಟಿ ನೀಡಬೇಕು. ಎಲ್ಲಾ ಹಮಾಲಿ ಕಾರ್ಮಿಕರಿಗೆ ಇ.ಎಸ್.ಐ ಮತ್ತು ಇಪಿ.ಎಸ್ ಖಾತ್ರಿ ಮಾಡಬೇಕು. ಇದನ್ನು ಗುತ್ತಿಗೆದಾರರಿಂದ ಕೊಡಿಸುವ ಯೋಜನೆ ಕಾರ್ಯಸಾಧುವಲ್ಲ. ಸರ್ಕಾರವೇ ಇದನ್ನು ಜಾರಿ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಶಾಸಕರ ಭೇಟಿ: ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಶಾಸಕ ಡಿ.ಎನ್. ಜೀವರಾಜ್ ಭೇಟಿ ನೀಡಿ ಮಾತುಕತೆ ನಡೆಸಿದರು. ಶೀಘ್ರದಲ್ಲೇ ಅಧಿಕಾರಿಗಳು ಹಾಗೂ ಕಾರ್ಮಿಕ ಹಮಾಲರ ಸಭೆ ಕರೆಯುತ್ತೇನೆ. ಸಭೆಯಲ್ಲಿ ನಿಮ್ಮ ಬೇಡಿಕೆ ಬಗ್ಗೆ ಪರಿಶೀಲನೆ ಮಾಡೋಣ ಈಗ ಧರಣಿ ಕೈಬಿಡಿ ಎಂದು ಮನವಿ ಮಾಡಿದರು.
ಶಾಸಕರ ಅಶ್ವಾಸನೆಯಂತೆ ಸದ್ಯಕ್ಕೆ ಧರಣಿ ಕೈಬಿಡುತ್ತೇವೆ. ಆದರೆ, ಬೇಡಿಕೆ ಈಡೇರಿದಿದ್ದರೆ ಮುಂದಿನ ತಿಂಗಳ 1 ನೇ ತಾರೀಕಿನಿಂದ ಮತ್ತೆ ಧರಣಿ ನಡೆಸಲಿದ್ದೇವೆ ಎಂದು ಕಾರ್ಮಿಕ ಮುಖಂಡ ಉಮರ್ ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

