ಬದುಕಲ್ಲಿ ವಿವೇಕ, ಸ್ವಾಭಿಮಾನ ಅಗತ್ಯ: ನಾಗರಾಜ ರಾವ್
ಚಿಕ್ಕಮಗಳೂರು: ಧಾರ್ಮಿಕತೆ ಪ್ರಚಾರದ್ದಲ್ಲ, ಆಚಾರದ್ದು. ಅಂತರಂಗದ ಪ್ರಪಂಚದಲ್ಲಿ ಅರಳಿಸುವುದೇ ಆಚಾರ ಎಂದು ಉಪನ್ಯಾಸಕ ಕಲ್ಕಟ್ಟೆ ಪುಸ್ತಕಮನೆಯ ಎಚ್.ಎಂ. ನಾಗರಾಜರಾವ್ ಹೇಳಿದ್ದಾರೆ.
ಚೌಳಹಿರಿಯೂರಿನ ಸೋಮೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಎಚ್.ಸಿ. ಹಿರಣ್ಯಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಬೀಗುವುದರ ಬದಲು ಬಾಗುವುದರಿಂದ ಬೆಳಗನ್ನು ಕಾಣಲು ಸಾಧ್ಯ. ವಿವೇಕ ಮತ್ತು ಸ್ವಾಭಿಮಾನದ ಬದುಕು ನಮ್ಮದಾಗಬೇಕು ಎಂದರು.
ಮನಿಪ್ಲಾಂಟ್: ಅಹಂಕಾರ- ಮಾಹಿತಿಗಳ ಕಸ ನಮ್ಮನ್ನು ಆವರಿಸಿದ್ದು, ಇದನ್ನು ಜ್ಞಾನಕ್ಕೆ ಪರಿವರ್ತನೆ ಮಾಡಿಕೊಳ್ಳಬೇಕು. ಬೇರು- ಹೂವು ಇಲ್ಲದ ಮನಿಪ್ಲಾಂಟ್‌ಗಳಾಗದೆ, ಆಳವಾಗಿ ಬೇರು ಬಿಟ್ಟು ಚೆಂದದ ಹೂ ಫಲ ಕೊಡುವ ಗಿಡ ನಾವಾಗಬೇಕೆಂಬುದಕ್ಕೆ ಹಿರಣ್ಯಪ್ಪ ಅವರ ಬದುಕು ಮಾದರಿ ಎಂದರು.
ಶುಚಿಗೆ ಸಹಾಯಕ: ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದಲ್ಲಿ ಪರಿವರ್ತನೆ ಮಾಡಬೇಕಾದ ವ್ಯಕ್ತಿಗಳು ಹೃದಯದಲ್ಲಿ ಪ್ರೀತಿ ತುಂಬಿಕೊಂಡು ನಿಸ್ವಾರ್ಥದಿಂದ ಕಾರ್ಯನಿರ್ವಹಿಸಿದರೆ ಒಳ್ಳೆಯ ಸಮಾಜ ಕಟ್ಟಬಹುದು ಎಂದರು.
ದೆಹಲಿ ಚುನಾವಣೆ ಗಮನಿಸಿದರೆ ಸಾಮಾನ್ಯ ಜನರು ಮನಸ್ಸು ಮಾಡಿದರೆ ಬದಲಾವಣೆ ತರಬಹುದೆಂಬುದನ್ನು ಅರಿಯಬಹುದೆಂದ ಸ್ವಾಮೀಜಿ, ಒಳಿತನ್ನು ಗುರುತಿಸುವ ಕಣ್ಣು ಕಳೆದುಕೊಳ್ಳಬಾರದೆಂದರು. ಜಿಪಂ ಮಾಜಿ ಸದಸ್ಯ ಮರುಳಪ್ಪ, ಕಡೂರು ಪಿಸಿಎಆರ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಕಲ್ಮುರಡಪ್ಪ ಮತ್ತು ರಾಮಜ್ಜ, ಮಾಜಿ ಪ್ರಧಾನ ಮಲ್ಲೇನಿಂಗಪ್ಪ, ಕೃಷಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಮೂಡಿಗೆರೆಯ ಎಸ್. ವೆಂಕಟರಾಮ್, ಪತ್ರಕರ್ತ ಪ್ರಭುಲಿಂಗಶಾಸ್ತ್ರಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

