ಸ್ವಾವಲಂಬಿ ಬದುಕಿಗೆ ಶ್ರೀ ಸಿದ್ದರಾಮೇಶ್ವರ ಪ್ರೇರಕ ಶಕ್ತಿ
ಕ.ಪ್ರ.ವಾರ್ತೆ, ಕಡೂರು, ಜ.14
8ನೇ ಶತಮಾನದಲ್ಲೇ ದುಡಿಯುವ ಕೈಗಳಿಗೆ ಕೆಲಸ ನೀಡಿ ಕೆರೆ ಕೆಟ್ಟೆಗಳನ್ನು ನಿರ್ಮಾಣ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅಂದಿನ ಕಾಲದಲ್ಲಿಯೇ ಪ್ರೇರಕ ಶಕ್ತಿಯಾಗಿದ್ದ ಶ್ರೀ ಗುರು ಸಿದ್ದರಾಮೇಶ್ವರರು ಜನಮಾನಸದಲ್ಲಿ ಅಜರಾಮರರಾಗಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ 841ನೇ ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮದ ಶರಣ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಿದ್ದರಾಮರು ಯಾವುದೇ ಜಾತಿ ಭೇದವಿಲ್ಲದೆ ಎಲ್ಲರೂ ಒಂದೇ ಎಂಬುದನ್ನು ಸಾರಿ ಕಾಯಕದಿಂದ ಜೀವನ ಎಂಬ ತತ್ವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕಬೇಕು ಎಂದು ಮಾರ್ಗದರ್ಶನ ಮಾಡಿದ ಸಿದ್ದಸಾಧಕ ಪುರುಷರಾಗಿದ್ದಾರೆ ಎಂದರು.
ಮಹಿಳಾ ಸಬಲೀಕರಣ: ಸಿದ್ದರಾಮರ ಸಿದ್ದಾಂತಗಳು ಸ್ವಾವಲಂಬಿಗಳ ಮತ್ತು ಶ್ರಮಜೀವಿಗಳ ಪರವಾಗಿರುವ ಮೂಲಕ ಸಿದ್ದರಾಮರು ಧರ್ಮ ಪ್ರಚಾರ ಸಮಯದಲ್ಲಿ ದಕ್ಷಿಣ ಭಾರತಾದ್ಯಂತ ಹಾಗು ನಾಡಿನ ಉದ್ದಗಲಕ್ಕೂ ಸಂಚರಿಸಿ ದೀನ ದಲಿತರ, ಶ್ರಮಿಕರ ಪರವಾದ ನಿಲುವು, ಮಹಿಳಾ ಸಬಲೀಕರಣದ ಪರಿಕಲ್ಪನೆಯಡಿ ಸಕಲ ಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಸಾರಿದ ಸಾಧಕ ಎಂದು ಬಣ್ಣಿಸಿದರು.
ಮುಖ್ಯ ಅತಿಥಿಗಳಾಗಿದ್ದ ಶಾಸಕ ವೈ.ಎಸ್.ವಿ. ದತ್ತ ಮಾತನಾಡಿ, ಬರದಿಂದ ಕಂಗೆಟ್ಟಿರುವ ಕಡೂರು ತಾಲೂಕು ಶ್ರೀ ಸಿದ್ದರಾಮರ ಆಶೀರ್ವಾದಿಂದ ಬರ ಮತ್ತು ಬಾಯರಿಕೆ ಎರಡೂ ನೀಗಿ ಶಾಶ್ವತ ನೀರಾವರಿ ಹರಿದು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆದರ್ಶ ವ್ಯಕ್ತಿ: ಸಾಹಿತಿಗಳಾದ ಡಾ ವಿಜಯಲಕ್ಷ್ಮೀ ಬಾಳೇಕುಂದ್ರಿ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ತಿಪಟೂರು ಶಾಸಕ ಕೆ.ಷಡಾಕ್ಷರಿ ಮಾತನಾಡಿ, ಚಿಂತನ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಕೆ. ಗುರುಪ್ರಸಾದ್, ಗೋಡೆಕೆರೆ ಯ ಶ್ರೀ ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ, ನಂದಿಗುಡಿ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ,ಬೆಟ್ಟದಹಳ್ಳಿ ಶ್ರೀ ಚಂದ್ರಶೇಖರ ಸ್ವಾಮೀಜಿ,ಬೀರೂರು ರಂಭಾಪುರಿ ಪೀಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಮಾಜಿ ಜಿಪಂ ಅಧ್ಯಕ್ಷ ಹಾಗೂ ಆಹಾರ ಸಮಿತಿ ಅಧ್ಯಕ್ಷ ಬೆಳ್ಳಿ ಪ್ರಕಾಶ್,ಕಾಮನಕೆರೆ ಶಶಿಧರ್,ಹೆಚ್.ಎಂ.ಲೋಕೇಶ್, ಪ್ರಪುಲ್ಲಾ ಮಂಜುನಾಥ್, ಎಸ್. ಕೊಪ್ಪಲು ಮಂಜುನಾಥ್, ಎಸ್.ವಿ. ಉಮಾಪತಿ,ಸೀಗೇಹಡ್ಲು ಹರೀಶ್,ಸಂಕ್ಲಾಪುರ ಕುಮಾರ್,ಬಿಸಲೆರೆ ಕೆಂಪರಾಜು,ಭುಜೇಂದ್ರ,ಭೈರೇಗೌಡ,ಕುಶಾಲ್, ಯಶೋಧಮ್ಮ, ಬಿ.ಟಿ. ಗಂಗಾಧರನಾಯ್ಕ, ಟಿ.ಆರ್. ಲಕ್ಕಪ್ಪ,ಮಚ್ಚೇರಿ ಕರಿಯಪ್ಪ, ಡಾ ಕೆ.ಎಸ್. ಮನೋಹರ್, ಎಸ್.ಮಲ್ಲಿಕಾರ್ಜುನ್, ಎಸ್.ವಿ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಸಂಜೆ ಸ್ಥಳೀಯ ಕಲಾವಿದರಿಂದ ಸೊನ್ನಲಿಗ ಶಿವಯೋಗಿ ಸಿದ್ದರಾಮ ರೂಪಕ ಪ್ರದರ್ಶನ ಹಾಗು ಕುದ್ರೋಳಿ ಗಣೇಶ್ರವರಿಂದ ಜಾದು ಪ್ರದರ್ಶನ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

