ಚಿಕ್ಕಮಗಳೂರು

ಕಡೂರಿನಲ್ಲಿ ಸಂಭ್ರಮದ ಈದ್ ಮಿಲಾದ್

Published On :

ಕ.ಪ್ರ.ವಾರ್ತೆ  ಕಡೂರು   ಜ.17
ಪಟ್ಟಣದ ಎಚ್.ಡಿ. ದೇವೇಗೌಡ ಬಡಾವಣೆಯ ನುರಾನಿ ಮಸೀದಿ, ಅಹಲೇ ಸುನ್ನತ್ ಜಮಾತ್ ಮಸೀದಿಗಳ ಆಶ್ರಯದಲ್ಲಿ ಮಹಮದ್ ಪೈಗಂಬರ್ ಜಯಂತಿಯನ್ನು ಮುಸ್ಲಿಂ ಬಾಂಧವರು ಶುಕ್ರವಾರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು.
ಪಟ್ಟಣದ ಪ್ರವಾಸಿ ಮಂದಿರ ರಸ್ತೆ ಮೂಲಕ ಕೆಎಸ್‌ಆರ್‌ಟಿಸಿ ರಸ್ತೆ, ದೇವರಾಜ ಅರಸು ರಸ್ತೆ, ರಾಷ್ಟ್ರೀಯ ಹೆದ್ದಾರಿಗೆ ಆಗಮಿಸಿದ ಮೆರವಣಿಗೆಯು ಮರವಂಜಿ ವೃತ್ತ, ಕೆಎಲ್‌ವಿ ವೃತ್ತ, ಕೆಎಂ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು.
ನಾತ್ ಅಹಮದ್ ಮೆರವಣಿಗೆಯಲ್ಲಿ ಪೈಗಂಬರರ ಕುರಿತು ಗೀತೆಗಳನ್ನು ಹಾಡಿದರು.
ಸುನ್ನತ್ ಜಮಾತ್ ಮಸೀದಿಯ ಎಲ್ಲ ಕಾರ್ಯಕಾರಿ ಸಮಿತಿ ಸದಸ್ಯರು ಶುಭಾಶಯ ವಿನಿಮಯ ಮಾಡಿಕೊಂಡರು.
ಈದ್ ಮಿಲಾದ್ ಆಚರಣೆಯಲ್ಲಿ ಸಮಿತಿ ಅಧ್ಯಕ್ಷ ಖಲೀಲ್ ಅಹಮದ್, ಪದಾಧಿಕಾರಿಗಳಾದ ಮಹಮದ್ ಆಲಿ, ಕಬೀರ್, ಗೌಸ್‌ಪೀರ್, ಫೈರೋಜ್, ಭಾಷಾ, ಖಾದರ್, ರೆಹಮಾನ್, ಶರೀಫ್ ಜಾನ್, ಸಾಧಿಕ್ ಮೌಲಾನಾ, ಪುರಸಭೆ ಸದಸ್ಯರಾದ ಕೋಳಿ ಲೋಕೇಶ್, ಮಾದಪ್ಪ, ಮಾಜಿ ಪುರಸಭಾ ಸದಸ್ಯ ಕೆ.ಬಿ. ಸೋಮೇಶ್ ಪಾಲ್ಗೊಂಡಿದ್ದರು. ಸಾವಿರಾರು ಮುಸ್ಲಿಂ ಬಾಂಧವರು ಈ ಸಂದರ್ಭದಲ್ಲಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.