ಚಿಕ್ಕಮಗಳೂರು

ಸರ್ಕಾರಿ ಸವಲತ್ತು ದುರುಪಯೋಗ ಸಲ್ಲ

Published On :

ಕ.ಪ್ರ.ವಾರ್ತೆ, ಮೂಡಿಗೆರೆ, ಜ.17
ನಿರುದ್ಯೋಗ ಯುವಕ- ಯುವತಿಯರಿಗೆ ಸ್ವಾವಲಂಬನೆಗೆ ಪೂರಕವಾದ ಸರ್ಕಾರದ ಸವಲತ್ತುಗಳು ದುರುಪಯೋಗವಾಗುತ್ತಿದೆ. ಈ ಬಗ್ಗೆ ಆರ್ಥಿಕ ಚಿಂತನೆ ಅವಶ್ಯ ಎಂದು ಜಿಲ್ಲಾ ಪಂಚಾಯಿತಿ ಸ್ಸದಸ್ಯ ವಿ.ಕೆ.ಶಿವೇಗೌಡ ಅಭಿಪ್ರಾಯಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಚಿಕ್ಕಮಗಳೂರು ಹಾಗೂ ಜಿಲ್ಲಾ ಪಂಚಾಯಿತಿ ಗ್ರಾಮೀಣ ಕೈಗಾರಿಕೆಗಳ ವಿಭಾಗ, ಚಿಕ್ಕಮಗಳೂರು ಆಶ್ರಯಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕುಮಟ್ಟದ ಕೈಗಾರಿಕಾ ವಿಚಾರ ಸಂಕಿರಣ ಕಾರ್ಯಗಾರ ಉದ್ಘಾಟಿಸಿ, ಮಲೆನಾಡಿನಲ್ಲಿ ಇತ್ತೀಚೆಗೆ ಅತಿವೃಷ್ಠಿಯಿಂದ ಬೆಳೆ ಕೈ ಕೊಟ್ಟಿದ್ದು, ಬೆಲೆ ಇಲ್ಲದಂತಾಗಿದೆ. ಮಹಿಳೆಯರು ಇಂತಹ ಕೈಗಾರಿಕಾ ಸಂಕಿರಣಗಳಲ್ಲಿ ಪಾಲ್ಗೊಂಡು ಮಾಹಿತಿ ಪಡೆದು ಲಾಭ ಗಳಿಸುವಂತೆ ತಿಳಿಸಿದರು.
ಸದುಪಯೋಗವಾಗಲಿ:  ತಾಪಂ ಸದಸ್ಯ ಎ.ಜೆ. ಸುಬ್ರಾಯಗೌಡ ಮಾತನಾಡಿ, ಕೈಗಾರಿಕಾ ವಲಯದಿಂದ ಹೊಲಿಗೆ ತರಬೇತಿ, ಕುಶಲಕರ್ಮಿ ತರಬೇತಿ ಪಡೆದವರಿಗೆ ಸರ್ಕಾರದಿಂದ ಹೊಲಿಗೆ ಯಂತ್ರ ಹಾಗೂ ಕುಶಲಕರ್ಮಿಗಳಿಗೆ ಉಪಯುಕ್ತ ವಸ್ತುಗಳನ್ನು ಉಚಿತವಾಗಿ ನೀಡುತ್ತಿದೆ. ಅದನ್ನು ದುರಪಯೋಗಪಡೆಸಿಕೊಳ್ಳದೆ ಸದುಪಯೋಗ ಪಡೆಸಿಕೊಳ್ಳುವಂತೆ ಕರೆ ನೀಡಿದರು.
ಸಬ್ಸಿಡಿ:  ಖಾದಿ ಗ್ರಾಮದ್ಯೋಗ ಉಪನಿರ್ದೇಶಕ ಎಸ್. ರಿಯಾಜ್ ಅಹಮ್ಮದ್ ಮಾತನಾಡಿ. ಕೈಗಾರಿಕಾ ಸಂಕೀರ್ಣದಲ್ಲಿ ಪಾಲ್ಗೊಂಡಿದ್ದ ಸುಮಾರು 150ಕ್ಕೂ ಅಧಿಕ ಜನರು ಸರ್ಕಾರದಿಂದ ಪ್ರಯೋಜನ ಪಡೆದಿದ್ದಾರೆ. ಕಳೆದ 3 ವರ್ಷಗಳಿಂದ ಎಸ್.ಸಿ., ಎಸ್.ಟಿ. ಜನಾಂಗದವರಿಗೆ 5000 ವೆಚ್ಚದ ಸುಧಾರಿತ ಉಪಕರಣಗಳನ್ನು ನೀಡಿದ್ದು. ಇತರೆ ವರ್ಗದ 60 ಜನರಿಗೆ ಮೂರುಸಾವಿರ ರು.ಗಳ ಸುಧಾರಿತ ಉಪಕರಣಗಳನ್ನು ನೀಡಲಾಗಿದೆ. ಹಲವಾರು ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ. ಪಿಎಂಇಜಿಪಿ ಯೋಜನೆಯಡಿ ಸಣ್ಣ ಕೈಗಾರಿಕೆಗೆ ಬ್ಯಾಂಕಿನಿಂದ ಸಾಲ ಕೊಡಿಸುವುದರೊಂದಿಗೆ ಸಬ್ಸಿಡಿ ನೀಡಲಾಗಿದೆ ಎಂದರು.
ಜಿಪಂ ಸದಸ್ಯ ಅರೇಕುಡಿಗೆ ಶಿವು ಮಾತನಾಡಿದರು. ಕುಶಲಕರ್ಮಿಗಳಿಗೆ ಸರ್ಕಾರದ ವತಿಯಿಂದ ನೀಡಲಾದ ಪರಿಕರಕ ಸಾಮಗ್ರಿಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ತಾಪಂ ಉಪಾಧ್ಯಕ್ಷೆ ಸುಮಾ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಸರೋಜಮ್ಮ, ಹೂವಮ್ಮ, ಸುಧಾ, ಕೈಗಾರಿಕಾ ವಿಸ್ತರಣಾಧಿಕಾರಿ ಡೇವಿಡ್ ಅಮೋಸ್, ತರಬೇತುದಾರರಾದ ಎಚ್.ಎನ್. ಉಮೇಶ್, ಕೃಷ್ಣೇಗೌಡ, ದಿನೇಶ್ ಆರ್. ಜಾವಳಿ, ತಾಪಂ ಕಾರ್ಯನಿರ್ವಹಣಾಧಿಕಾರಿ ವೈ.ಎನ್. ಚಂದ್ರಮೌಳಿ ಕೆನರಾ ಬ್ಯಾಂಕಿನ ಬೊಗೇಶ್ ಉಪಸ್ಥಿತರಿದ್ದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.