ಚಿಕ್ಕಮಗಳೂರು

ಒತ್ತುವರಿ ಜಮೀನು ಬಿಡಿಸಿಕೊಡಿ

Published On :

ನರಸಿಂಹರಾಜಪುರ: ಕಸಬಾ ಹೋಬಳಿಯ ಬಾಳೆಕೊಪ್ಪದಲ್ಲಿ 6 ಪೌರ ಕಾರ್ಮಿಕರಿಗೆ ಮಂಜೂರಾದ ಒಟ್ಟು 12 ಎಕರೆ ಜಮೀನನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಆ ಜಮೀನನ್ನು ಬಿಡಿಸಿಕೊಡಬೇಕು ಎಂದು ಪೌರ ಕಾರ್ಮಿಕರು ಸರ್ಕಾರವನ್ನು ಒತ್ತಾಯಿಸಿದರು. ಪೌರ ಕಾರ್ಮಿಕ ಹನುಮಂತಪ್ಪ, ದುರ್ಗಪ್ಪ, ತಿಪ್ಪೇಶ, ರಂಗಪ್ಪ, ರಾಮಪ್ಪ, ಲಕ್ಷ್ಮಣ ಎಂಬುವರು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಅರ್ಪಿಸಿ, ಬಾಳೆಕೊಪ್ಪದಲ್ಲಿ 1984-85 ನೇ ಸಾಲಿನಲ್ಲಿ ತಲಾ 2 ಎಕರೆಯಂತೆ 6 ಜನರಿಗೆ 12 ಎಕರೆ ಮಂಜೂರಾಗಿತ್ತು. ಹಂಗಾಮಿ ಸಾಗುವಳಿ ಚೀಟಿಯೂ ಸಿಕ್ಕಿತ್ತು. ನಮಗೆ ಪಪಂನಲ್ಲಿ  ಪೌರಕಾರ್ಮಿಕ ಕೆಲಸ ಸಿಕ್ಕಿದ್ದರಿಂದ ಕೆಲಸದ ಒತ್ತಡದ ನಡುವೆ ಜಮೀನಿನ ಕಡೆಗೆ ಹೋಗಲು ಸಾದ್ಯವಾಗಿರಲಿಲ್ಲ. ಈ ಸಂದರ್ಭ ಬಳಸಿಕೊಂಡ ಬಲಾಢ್ಯ ವ್ಯಕ್ತಿಗಳು ನಮ್ಮ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಕಳೆದ ವರ್ಷವೂ ನಾವು ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರೂ, ಜಮೀನು ನಮ್ಮ ಸ್ವಾಧೀನಕ್ಕೆ ಬಂದಿಲ್ಲ. ಆದ್ದರಿಂದ ತಕ್ಷಣ ನಮ್ಮ ಜಮೀನನ್ನು ಬಿಡಿಸಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.