ಚಿಕ್ಕಮಗಳೂರು

ಸುದ್ದಿ ಸಂಕ್ಷೇಪ

Published On :

ಇಂದು ಆಟೋ ಮುಷ್ಕರ
ಕೊಪ್ಪ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡಿಸೇಲ್, ಪೆಟ್ರೋಲ್, ಎಲ್. ಪಿ.ಜಿ. ಬೆಲೆ ಏರಿಕೆ ಮಾಡಿರುವುದನ್ನು ವಿರೋ ಧಿಸಿ ಕೊಪ್ಪ ತಾಲೂಕು ಮಟ್ಟದ ಆಟೋ ಮುಷ್ಕರವನ್ನು ಜ.20ರಂದು ಮಾಡಲಾಗುವುದು ಎಂದು ತಾಲೂಕು ಆಟೋಚಾಲಕ ಮತ್ತು ಮಾಲೀಕ ಸಂಘದ ಅಧ್ಯಕ್ಷ ರಾಘವೇಂದ್ರ ತಿಳಿಸಿದ್ದಾರೆ. ಡಿಸೇಲ್, ಪೆಟ್ರೋಲ್, ಆಟೋ ಗ್ಯಾಸ್ ದರಗಳನ್ನು ಗಣನೀಯವಾಗಿ ಏರಿಕೆ ಮಾಡಿರುವುದರಿಂದ ಶ್ರಮಿಕ ವರ್ಗದ ನಾವುಗಳು ಆಟೋ ಚಾಲಾಯಿಸಿ ಜೀವನ ನಡೆಸಲು ತುಂಬ ಕಷ್ಟಕರವಾಗಿದೆ. ಅದ್ದರಿಂದ ಇಂಧನ ಬೆಲೆಯನ್ನು ಕೂಡಲೇ ಕಡಮೆ ಮಾಡಬೇಕು ಎಂದು ಒತ್ತಾಯಿಸಿ ಸೋಮವಾರ ಬೆಳಗ್ಗೆ ಪಟ್ಟಣದ ಟೋಲ್‌ಗೇಟ್ ನಿಂದ ಬಸ್ಟಾಂಡ್ ಆವರಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ರಾಘವೇಂದ್ರ ತಿಳಿಸಿದ್ದಾರೆ.
ಯಕ್ಷಗಾನ ಪ್ರಸಂಗ
ಬಾಳೆಹೊನ್ನೂರು: ಸಮೀಪದ ಬಿಳಾಲುಕೊಪ್ಪದ ಆನೇಗಲ್ಲುಮಠದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಯಕ್ಷಗಾನ ಪ್ರಸಂಗ ಏರ್ಪಡಿಸಲಾಗಿತ್ತು. ವಿಘ್ನೇಶ್ವರ ಕಲಾ ಸಂಘದವರು ವಾಲಿ ಮೋಕ್ಷ ಎಂಬ ಕಥಾನಕವನ್ನು ಪ್ರದರ್ಶಿಸಿದರು. ಹಿಮ್ಮೇಳದಲ್ಲಿ ಸದಾನಂದ ಹೆಬ್ಬಾರ್, ಉಮೇಶ್ ಹೆಬ್ಬಾರ್ ಗಮನ ಸೆಳೆದರು. ಕಾರ್ಯಕ್ರಮ ಸಂಘಟಕ ಪ್ರದೀಪ್ ಕುಮಾರ್ ಗ್ರಾಮದ ಹಿರಿಯರಾದ ಸುಂದರಮೂರ್ತಿ, ಭಾಸ್ಕರ್ ರಾವ್ ಹಾಜರಿದ್ದರು.
ಲೋಕಾಯುಕ್ತ ಅಧಿಕಾರಿಗಳ ಪ್ರವಾಸ  
ಚಿಕ್ಕಮಗಳೂರು: ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಸೋಮವಾರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಎನ್.ಆರ್. ಪುರ ಪ್ರವಾಸಿ ಮಂದಿರಕ್ಕೆ, ಮಧ್ಯಾಹ್ನ 3 ಗಂಟೆಗೆ ಕೊಪ್ಪ ಪ್ರವಾಸಿ ಮಂದಿರಕ್ಕೆ ಆಗಮಿಸಲಿದ್ದಾರೆ. ಆಯಾ ತಾಲೂಕಿನ  ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ತಮ್ಮ ಕೆಲಸಗಳ ನಿಮಿತ್ತ ಅರ್ಜಿ, ದೂರು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಸಂಸದರ ಪ್ರವಾಸ
ಚಿಕ್ಕಮಗಳೂರು: ಲೋಕಸಭಾ ಸದಸ್ಯ ಕೆ. ಜಯಪ್ರಕಾಶ್ ಹೆಗ್ಡೆ ಅವರು ಸೋಮವಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಗ್ಗೆ 10 ಗಂಟೆಗೆ ತರೀಕೆರೆ, ಬುಕ್ಕಾಂಬೂದಿ ಹಾಗೂ ಎನ್.ಆರ್. ಪುರದ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.