ಚಿಕ್ಕಮಗಳೂರು

ಕಾಫಿ ಬೆಳೆಗೆ ಕಂಟಕವಾದ ಅಪಘಾತಗಳು

Published On :

ಕ.ಪ್ರ.ವಾರ್ತೆ  ಮೂಡಿಗೆರೆ  ಜ.22
ಅತಿವೇಗ ಹಾಗೂ ಸೂಕ್ತವಿರುವೆಡೆ ತಡೆಗೋಡೆಗಳಿಲ್ಲದ ಪರಿಣಾಮ ಮೂಡಿಗೆರೆ- ಮಾಕೋನಹಳ್ಳಿ- ಬೆಂಗಳೂರು ಮಾರ್ಗದ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ, ವಾಹನಗಳು ಕಾಫಿ ತೋಟಕ್ಕೆ ಬೀಳುತ್ತಿರುವುದರಿಂದ ಕಾಫಿ ಗಿಡಗಳಿಗೆ ತೊಂದರೆಯಾಗುತ್ತಿದೆ.
ಈ ರಾಜ್ಯ ಹೆದ್ದಾರಿಯಲ್ಲಿ ಘಟ್ಟದಹಳ್ಳಿಯಿಂದ ಮಾಕೋನಹಳ್ಳಿಗೆ ಹೋಗುವ ಮಾರ್ಗ ಮಧ್ಯೆ ಹಲವಾರು ಕಾಫಿ ತೋಟಗಳಿವೆ. ಮುಖ್ಯ ರಸ್ತೆಯ ಬದಿಯಲ್ಲೇ, ಆಳದಲ್ಲಿ ಇವೆ. ಇಂಥ ಸ್ಥಳಗಳಲ್ಲಿ ಸೂಕ್ತ ತಡೆಗೋಡೆಗಳಿಲ್ಲ. ಇದರಿಂದಾಗಿ ಅಪಘಾತ ಸಂಭವಿಸಿದಾಗ ವಾಹನಗಳು ತೋಟದಲ್ಲಿ ಬೀಳುತ್ತಿವೆ. ಇದರಿಂದಾಗಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ವಾಹನದ ಅಡಿಯಲ್ಲಿ ಸಿಲುಕಿ ಗಂಭೀರ ಗಾಯಗಳಾಗಿರುವ ಪ್ರಕರಣಗಳೂ ಇವೆ.
ಅಸಮಾಧಾನ:  ಕಾಫಿ ತೋಟದ ಮಾಲೀಕರು ಮತ್ತು ಕಾರ್ಮಿಕರು ಹಲವಾರು ಬಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ವಿಷಯ ತಂದಿದ್ದಾರೆ. ತಡೆಗೋಡೆ ನಿರ್ಮಿಸಲು ಒತ್ತಾಯಿಸಿದ್ದಾರೆ. ಆದರೆ, ಇದ್ಯಾವುದಕ್ಕೂ ಕೇರ್ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಮುಂದುವರಿಸಿದ್ದಾರೆ ಎಂದು ತೋಟದ ಕಾರ್ಮಿಕ ಮುತ್ತಯ್ಯ ಎಂಬವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆಗಳಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ “ÈÚßßM¥æ ರಸ್ತೆ ತಿರುವು B¥æ’ ಎಂಬ ಎಚ್ಚರಿಕೆಯ ಸೂಚನಾಫಲಕವಾಗಲಿ, ತಡೆಗೋಡೆಯನ್ನಾಗಲಿ ನಿರ್ಮಿಸಲು ಕೈಗೊಳ್ಳದಿರುವುದೇ ಪದೇ ಪದೇ ಅಪಘಾತಗಳು ನಡೆಯಲು ಕಾರಣವಾಗಿದೆ.
ಮಾಲೀಕರ ಗೋಳು:  ಮಲೆನಾಡಿನಲ್ಲಿ ಕಾಫಿ ಬೆಳೆಯನ್ನೇ ನೆಚ್ಚಿಕೊಂಡಿರುವವರು ಅತಿವೃಷ್ಠಿ, ಕಾಡು ಪ್ರಾಣಿಗಳ ಹಾವಳಿಯಿಂದ ನಲುಗಿದ್ದಾರೆ. ಕಾಫಿಗೆ ಇದ್ದ ಬೆಂಬಲ ಬೆಲೆಯು ಇಲ್ಲವಾಗಿದೆ.
ಇವೆಲ್ಲದರ ನಡುವೆ ಅಧಿಕಾರಿಗಳು ಹಾಗೂ ವಾಹನ ಚಾಲಕರ ನಿರ್ಲಕ್ಷ್ಯದಿಂದಾಗಿ ಕಾಫಿ ಗಿಡಗಳಿಗೆ ಕಂಟಕ ಎದುರಾಗಿದೆ. ಹಲವು ಪ್ರಕರಣಗಳಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ನಮಗೆ ನಷ್ಟ ತುಂಬಿಕೊಡುವವರ್ಯಾರು ಎಂಬುದು ತೋಟದ ಮಾಲೀಕರ ಗೋಳು. ಇದಕ್ಕೆ ಪರಿಹಾರವಿದೆಯೇ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.