'ಅಡಕೆ ನಿಷೇಧ, ಒತ್ತುವರಿ ಸಮಸ್ಯೆ ಅಧಿವೇಶನದಲ್ಲಿ ಪರಿಹಾರ ಕಾಣಲಿ'
ಕೊಪ್ಪ: ಮಲೆನಾಡಿನ ಜ್ವಲಂತ ಸಮಸ್ಯೆಗಳಾದ ಅಡಕೆ ನಿಷೇಧ ಹಾಗೂ ಒತ್ತುವರಿ ಸಮಸ್ಯೆ ಬಗ್ಗೆ ಇಂದಿನಿಂದ ಆರಂಭಗೊಂಡಿರುವ ಸದನದಲ್ಲಿ ಜನಪ್ರತಿನಿಧಿಗಳು ರಾಜಕೀಯ ಬದಿಗಿಟ್ಟು ಮಲೆನಾಡು ಜನರ ಹಿತಾಸಕ್ತಿಗಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಕಾಂಗ್ರೆಸ್ ಪಕ್ಷಗಳು ತಮ್ಮ ಹೊಣೆಗಾರಿಕೆ ಮರೆತು ಪರಸ್ಪರ ಕೆಸರೆರಚಾಟದಲ್ಲಿ ಕಾಲಹರಣ ಮಾಡದೆ, ತಂಬಾಕು ಲಾಬಿಗೆ ಮಣಿದು ಅಧಿಕಾರ ಶಾಹಿಗಳು ಮಾಡಿರುವ ತಪ್ಪುಗಳನ್ನು ಸರಿಪಡಿಸಲು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ವಾಜಪೇಯಿ ನೇತೃತ್ವದ ಸರ್ಕಾರ ಗುಟ್ಕಾ ನಿಷೇಧದ ಚರ್ಚೆ ವೇಳೆಯಲ್ಲಿ ತಂಬಾಕು ಹಾಗೂ ಅದರೊಂದಿಗಿರುವ ಅಡಕೆ ಇನ್ನಿತರ ಉತ್ಪನ್ನಗಳ ಪರಾಮರ್ಶೆ ಸಮಿತಿ ರಚಿಸಿ ಅವರಿಂದ ಬಂದ ವರದಿ ಅಧರಿಸಿ ಮುಂದಿನ ಬೆಳವಣಿಗಗಳಾಗಿವೆ. ಅಡಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸಲು ಸಾಧ್ಯವಿಲ್ಲ. ಅದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಒಳಪಡುತ್ತದೆ. ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ರಾಜ್ಯ ಸರ್ಕಾರ ಇಂಪ್ಲಿಡಿಂಗ್ ಮನವಿ ಸಲ್ಲಿಸಿ, ಅಡಕೆ ಹಾನಿಕಾರವಲ್ಲ ಎಂಬ ಮನವರಿಕೆ ನ್ಯಾಯಾಲಯಕ್ಕೆ ಮಾಡಬೇಕು. ಅಡಕೆ ವಿಷಕಾರಕ ಆಹಾರ ಪಟ್ಟಿಯಿಂದ ತೆಗೆಸಿ ಹಾಕಲು ಕ್ರಮ ವಹಿಸಬೇಕಾಗಿದೆ. ಈ ದಿಶೆಯಲ್ಲಿ ಜನ ಪ್ರತಿನಿಧಿಗಳು ಒತ್ತಡ ತರಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ವಾಸಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

