'ಕಲೆ ಬೆಳವಣಿಗೆಗೆ ತರಬೇತಿ ಅಗತ್ಯ'
ನರಸಿಂಹರಾಜಪುರ: ಸೂಕ್ತ ತರಬೇತಿ ಕೊರತೆಯಿಂದಾಗಿ ಕಲಾವಿದರ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದು ಪಪಂ ಸದಸ್ಯ ಪಿ.ಆರ್. ಸುಕುಮಾರ್ ತಿಳಿಸಿದರು.
ಇತ್ತೀಚಿಗೆ ಪಟ್ಟಣದ ಬಿಇಒ ಕಚೇರಿಯ ಪಕ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣ ರಂಗಮಂದಿರದಲ್ಲಿ ಅಭಿನವ ಪ್ರತಿಭಾ ವೇದಿಕೆಯ ಆಶ್ರಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಡ್ಯಾನ್ಸ್ ಕ್ಲಾಸ್ ಸಂಗೀತ ಶಾಲೆ ಉದ್ಘಾಟಿಸಿ ಮಾತನಾಡಿದರು.
ಅಭಿನವ ಪ್ರತಿಭಾ ವೇದಿಕೆಯವರು ಸಂಗೀತ, ನೃತ್ಯ ಕಲಿಸುವ ತರಬೇತಿ ಶಾಲೆ ಪ್ರಾರಂಭಿಸಿರುವುದರಿಂದ ಕಲಾವಿದರ ಉಗಮಕ್ಕೆ ಕಾರಣವಾಗಲಿದೆ.ನರಸಿಂಹರಾಜಪುರ ಪಟ್ಟಣದ ವ್ಯಾಪ್ತಿಯಲ್ಲಿ ಸಾಂಸ್ಕೃತಿಕ ಕಲೆ ಕಡಿಮೆಯಾಗುತ್ತಿದ್ದು, ಕಲಾವಿದರಿಗೆ ಸೂಕ್ತ ತರಬೇತಿ ನೀಡುವ ಮೂಲಕ ಮತ್ತೆ ಕಲೆಯನ್ನು ಪುನರುಜ್ಜೀವಗೊಳಿಸುವ ಪ್ರಯತ್ನ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾ. ಯೋಜನೆಯ ಕೃಷಿ ಉತ್ಸವ ವೇದಿಕೆ ಸಮಿತಿ ಅಧ್ಯಕ್ಷ ಎನ್.ಎಂ. ಕಾಂತರಾಜ್ ಮಾತನಾಡಿ, ತಾಲೂಕಿನಲ್ಲಿ ಈ ಹಿಂದೆ ತಾಲೂಕು ಮಟ್ಟದ ಯುವಜನ ಮೇಳ ನಡೆದು ಜಾನಪದ ಕಲೆಯ ಅನಾವರಣಗೊಳ್ಳುತ್ತಿತ್ತು. ಈಗ ತಾಲೂಕು ಮಟ್ಟದ ಯುವಜನ ಮೇಳ ನಿಂತು ಹೋಗಿದೆ. ಕಲಾವಿದರಿಗೆ ಸೂಕ್ತ ವೇದಿಕೆ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಚಲನಚಿತ್ರ ಸಹ ನಿರ್ದೇಶಕ ಸತೀಶ್ ಆಚಾರ್ ಮಾತನಾಡಿ, ಶಾಲೆಗಳಲ್ಲಿ ಮಕ್ಕಳಿಗೆ ಕ್ಯಾಸೆಟ್ ನೃತ್ಯ ಏರ್ಪಡಿಸಿ ಕಲೆಗೆ ಅವಮಾನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಅಭಿನವ ಪ್ರತಿಭಾ ವೇದಿಕೆಯ ಅದ್ಯಕ್ಷ ಅಭಿನವ ಗಿರಿರಾಜ್ ವಹಿಸಿದ್ದರು. ಪಪಂ ಸದಸ್ಯ ಸಮೀರಾ ನಂಹೀಂ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪುರುಶೋತಮ್ಮ, ಇನ್ ಕೇಬಲ್ ಮಾಲೀಕ ಎನ್.ಎ. ಶೇಖಬ್ಬ, ಕಲಾವಿದ ಎನ್.ಮಂಜುನಾಥ್, ವೇದಿಕೆ ಸಂಚಾಲಕಿ ಮಾಲ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಭಿನವ ಪ್ರತಿಭಾ ವೇದಿಕೆಯಿಂದ ಚಲನಚಿತ್ರ ಸಹ ನಿರ್ದೇಶಕ ಸತೀಶ್ ಆಚಾರ್ ಅವರನ್ನು ಸನ್ಮಾನಿಸಲಾಯಿತು. ನಂತರ ಶಾಲಾ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

