ಚಿಕ್ಕಮಗಳೂರು

ಶುದ್ಧ ಕುಡಿವ ನೀರಿನ ಘಟಕ ಯೋಜನೆಗೆ ಕ್ಷೇತ್ರದ 20 ಗ್ರಾಮ ಸೇರ್ಪಡೆ: ಶಾಸಕ ದತ್ತ

Published On :

ಕಡೂರು: ಸರ್ಕಾರ ಆರಂಭಿಸುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಯೋಜನೆಯಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ 20 ಗ್ರಾಮಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.
ಕ್ಷೇತ್ರದ ಯಳ್ಳಂಬಳಸೆ ಮತ್ತು ಗರ್ಜೆ ಗ್ರಾಮಗಳಲ್ಲಿ, ಬಸ್ ನಿಲ್ದಾಣ, ಬಯಲು ರಂಗಮಂದಿರ, ಶುದ್ಧ ಗಂಗಾ ಘಟಕ, ಬಯಲು ರಂಗಮಂದಿರ, ದಾಸೋಹ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ಬಸವ ಮತ್ತು ಇಂದಿರಾ ಅವಾಜ್ ಯೋಜನೆಯಲ್ಲಿ ಕಡೂರು ಕ್ಷೇತ್ರಕ್ಕೆ 500 ಮನೆಗಳು ಮಂಜೂರಾಗಿದ್ದು, ತಾವು ವಸತಿ ಸಚಿವರಿಂದ ಹೆಚ್ಚುವರಿಯಾಗಿ 300 ಮನೆಗಳನ್ನು ತಂದಿದ್ದು ಪ್ರತೀ ಗ್ರಾಪಂಗಳಿಗೆ ತಲಾ 20 ಮನೆಗಳಿದ್ದು, ಗ್ರಾಪಂ ಸದಸ್ಯರು ನಿಜವಾದ ಫಲಾನುಭವಿಗಳನ್ನು ಗುರುತಿಸಿ ವಿತರಿಸಬೇಕು ಎಂದರು.
ಮುಂಗಾರು ಕೈ ಕೊಟ್ಟು ಬೆಳೆ ಹಾಳಾಗಿರುವ ಹಿನ್ನೆಲೆಯಲ್ಲಿ ಎಲ್ಲ ರೈತರಿಗೂ ಬೆಳೆ ವಿಮೆ ಲಾಭ ಸಿಗಲೆಂಬ ಉದ್ದೇಶದಿಂದ ತಾವು ಸದನದಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆದ ಪರಿಣಾಮ ಸರ್ಕಾರ ಜೂನ್ 30ಕ್ಕೆ ನಿಗಧಿಪಡಿಸಿದ್ದ ದಿ. ಜುಲೈ 31ಕ್ಕೆ ಮುಂದೂಡಲಾಗಿದೆ. ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಮಾಜಿ ಶಾಸಕ ಡಾ ವೈ.ಸಿ.ವಿಶ್ವನಾಥ್ ಮಾತನಾಡಿ, ತಾವು ಶಾಸಕರಾಗಿದ್ದ ಅವಧಿಯಲ್ಲಿ ಯಳ್ಳಂಬಳಸೆ ಮತ್ತು ಗ್ರಾಮಕ್ಕೆ ತಮ್ಮ ಕೈಲಾದ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಶಾಸಕ ದತ್ತಾ ಕೂಡ ಕಡೂರು  ಬೀರೂರು ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆಗೆ ಪ್ರಯತ್ನಿಸಿದ್ದಾರೆ. ದತ್ತ ಶಾಸಕರಾದ ನಂತರ ಯೋಜನೆ ಪೂರ್ಣಗೊಳಿಸಿದ್ದು ಅದಕ್ಕಾಗಿ ಅವರನ್ನು  ಅಭಿನಂದಿಸುವುದಾಗಿ ಹೇಳಿದರು.
ಜಿಪಂ ಅಧ್ಯಕ್ಷ ಶೃಂಗೇರಿ ಶಿವಣ್ಣ, ಜಿಪಂ ಸದಸ್ಯೆ ಶಶಿರೇಖಾ ಎಂ.ಆರ್.ಟಿ.ಸುರೇಶ್, ತಾಪಂ ಅಧ್ಯಕ್ಷ ವೈ.ಕೆ.ಬಸಪ್ಪ, ಗ್ರಾಪಂ ಅಧ್ಯಕ್ಷರಾದ ಆಶಾ ಬಸವರಾಜು, ಲೋಕೇಶ್, ಜಿ.ಎನ್.ಜಯಣ್ಣ, ಜಿ.ಎನ್. ಮರುಳಪ್ಪ, ಸಲೀಂ, ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ್, ಶಿಕ್ಷಕ ಶಾಂತಪ್ಪ, ಪ್ರಭು, ಕವಿತಾ ಜಗದೀಶ್, ವೈ.ಎಂ.ಈಶ್ವರಪ್ಪ  ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.