ಚಿಕ್ಕಮಗಳೂರು

ಕಳಪೆ ಗೋಧಿ ಸರಬರಾಜುಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಯಲ್ಲಿ ಹುರುಳಿಲ್ಲ

Published On :

ಕೊಪ್ಪ: ಕೊಪ್ಪ ಟಿಎಪಿಸಿಎಂಎಸ್‌ನಿಂದ ಗುಣಮಟ್ಟವಿಲ್ಲದ ಗೋಧಿಯನ್ನು ಉದ್ದೇಶ ಪೂರ್ವಕವಾಗಿ ತಾಲೂಕಿನ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಿಲ್ಲ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಾಹಿತಿ ಕೊರೆತೆಯಿಂದ ಪತ್ರಿಕೆಗಳಲ್ಲಿ ತಪ್ಪು ಹೇಳಿಕೆ ನೀಡಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಹೊಸೂರು ದಿನೇಶ್ ತಿಳಿಸಿದರು.
ಗುರುವಾರ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 2014 ಮಾರ್ಚ್‌ನಲ್ಲಿ ನಮ್ಮ ಸಂಸ್ಥೆಗೆ 850 ಕ್ವಿಂಟಲ್ ಗೋಧಿಯನ್ನು ತರಿಸಿಕೊಳ್ಳಲಾಗಿತ್ತು. ಮಾರ್ಚ್ 21 ರೊಳಗಾಗಿ 323 ಕ್ವಿಂಟಲ್ ಗೋಧಿಯನ್ನು ನ್ಯಾಯಬೆಲೆ ಅಂಗಡಿಗಳಿಗೆ ಸಾರಬರಾಜು ಮಾಡಲಾಗಿತ್ತು. ಮಾರ್ಚ್ 22 ಕ್ಕೆ ನಿಮ್ಮ ವ್ಯಾಪ್ತಿಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಗೋಧಿ ಬದಲಾಗಿ ಅಕ್ಕಿ ನೀಡಬೇಕು ಎಂದು ಸರ್ಕಾರದಿಂದ ಆದೇಶ ಬಂದ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಯಲ್ಲಿ ಉಳಿದ 479 ಕ್ವಿಂಟಲ್ ಗೋಧಿಯನ್ನು ಸಂರಕ್ಷಿಸಿ ಇಡಲಾಗಿತ್ತೇ ವಿನಃ ನಾವು ಯಾವುದೇ ಉದ್ದೇಶ ಪೂರ್ವವಾಕವಾಗಿ ದಸ್ತಾನು ಇಟ್ಟಿಕೊಂಡಿರಲಿಲ್ಲ ಎಂದರು.
ಪುನಃ ಜೂನ್ ತಿಂಗಳಿನಲ್ಲಿ ಸರ್ಕಾರ ಗೋಧಿ ಕೊಡಲು ಆದೇಶಿಸಿದ್ದರಿಂದ ನಾವು ಗೋಧಿಯನ್ನು ನ್ಯಾಯಬೆಲೆ ಅಂಗಡಿಗಳಿಗೆ ವಿತರಣೆ ಮಾಡಿದ್ದೇವೆ. ಇದರಲ್ಲಿ ನಮ್ಮ ಪಾತ್ರವಿಲ್ಲ. ಹೀಗಿರುವಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಟಿಎಪಿಸಿಎಂಎಸ್‌ನಂಥ ರೈತ ಸಂಸ್ಥೆಯ ಮೇಲೆ ಆರೋಪ ಮಾಡುವ ಸಂದರ್ಭದಲ್ಲಿ ಸೂಕ್ತ ಮಾಹಿತಿಯನ್ನು ತರಿಸಿಕೊಂಡು ಆರೋಪ ಮಾಡುವುದು  ಸೂಕ್ತ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.