15 ದಿನದಲ್ಲಿ ಕುಡಿವ ನೀರಿನ ಸಮಸ್ಯೆ ಪರಿಹರಿಸಿ: ಜಿಪಂ ಅಧ್ಯಕ್ಷ ಶಿವಣ್ಣ
ತರೀಕೆರೆ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಇನ್ನು 15 ದಿವಸದೊಳಗೆ ಪರಿಹರಿಸಬೇಕು ಎಂದು ಸೂಚಿಸಿರುವುದಾಗಿ ಚಿಕ್ಕಮಗಳೂರು ಜಿಪಂ ಅಧ್ಯಕ್ಷ ಶೃಂಗೇರಿ ಶಿವಣ್ಣ ಸುದ್ದಿಗಾರರಿಗೆ ತಿಳಿಸಿದರು.
ತಾಲೂಕಿನ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಸರ್ಕಾರ ಕೋಟ್ಯಂತರ ರು.ಗಳನ್ನು ಕುಡಿಯುವ ನೀರು ಸರಬರಾಜಿಗಾಗಿ ಬಿಡುಗಡೆ ಮಾಡಿದೆ. ಆದರೆ ತಾಲೂಕಿನ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಟ್ಯಾಂಕ್ ಮಾತ್ರ ಇನ್ನೂ ಬರಿದಾಗಿದೆ. ನೀರು ತುಂಬಿಸದಿದ್ದರೆ ಹಣ ಖರ್ಚು ಮಾಡಿ ನಿರ್ಮಿಸಿದ ಟ್ಯಾಂಕ್ ಕೂಡಾ ಹಾಳಾಗುತ್ತದೆ. ತಾಲೂಕಿನ ಅಜ್ಜಂಪುರ ಮತ್ತು ಶಿವನಿ ಭಾಗದಲ್ಲಿ 12 ಟ್ಯಾಂಕುಗಳಿಗೆ ಟಿಸಿಯನ್ನೇ ಫಿಕ್ಸ್ ಮಾಡಿಲ್ಲ ಎಂದು ಹೇಳಿದರು.
ಹಾಗೂ ಮೆಸ್ಕಾಂ ಮತ್ತು ಜಿಪಂ ಅಧಿಕಾರಿಗಳು ಜುಲೈ 21ರೊಳಗಾಗಿ ಈ ಬಗ್ಗೆ ಸಭೆ ನಡೆಸಿ ಕ್ರಮ ತೆಗೆದುಕೊಂಡ ಬಗ್ಗೆ ಸಂಪೂರ್ಣ ವರದಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಹೇಳಿದರು.
ಸರ್ಕಾರ ಜಲಾನಯನ ಇಲಾಖೆಗೆ ರು. 6 ಕೋಟಿ ನೀಡಿದೆ. ಆದರೆ ಮನಸೋ ಇಚ್ಚೆ ಕೆಲಸ ಮಾಡಿದ್ದಾರೆ. ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಇತ್ಯಾದಿಗಳಿಗಾಗಿ ಹಣ ನೀಡಿದರೆ, ಅದು ಸಮರ್ಪಕವಾಗಿ ಆಗಿಲ್ಲ. ಕೇವಲ ತರಬೇತಿ ಮತ್ತು ಕಾಫಿ ತಿಂಡಿಗೆಂದೇ ರು. 18 ಲಕ್ಷ ಖರ್ಚು ಮಾಡಲಾಗಿದೆ ಹೀಗಾದರೆ ಹೇಗೆ. ಸರ್ಕಾರದ ಉದ್ದೇಶ ಸಫಲವಾಯಿತೆ ಎಂದು ಪ್ರಶ್ನಿಸಿದರು.
ಆರೋಗ್ಯ ರಕ್ಷಾ ಸಮಿತಿ ಸಭೆ: ಜಿಪಂ ಅಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕೆಡಿಪಿ ಸಭೆ ನಡೆಸಲಾಗುತ್ತಿದೆ. ಅಧಿಕಾರಿಗಳು ಕಚೇರಿಗೆ, ಜಿಪಂ, ತಾಪಂ ಸಭೆಗಳಿಗೆ ಸಮಯಕ್ಕೆ ಸರಿಯಾಗಿ ಬರಬೇಕು, ಪ್ರತಿ ಇಲಾಖೆಗಳ ಸಭೆಗಳನ್ನು ತಪ್ಪದೇ ಕರೆಯಬೇಕು, ಜನಪ್ರತಿನಿಧಿಗಳಿಗೆ
ಸಭೆಯ ವಿವಿರಗಳನ್ನು ತಿಳಿಸಬೇಕು. ಅವರು ಜನಸಾಮಾನ್ಯರಿಗೆ ತಿಳಿಸುತ್ತಾರೆ, ಪ್ರತಿ ತಿಂಗಳು ಆರೋಗ್ಯ ರಕ್ಷಾ ಸಭೆಗಳನ್ನು ಕರೆಯಬೇಕು, ಸರ್ಕಾರ ಆರೋಗ್ಯ ರಕ್ಷ ಸಭೆಗಳಿಗೆ 1.75 ಸಾವಿರ ರು.ಗಳನ್ನು ಮೀಸಲಿಟ್ಟಿದೆ ಎಂದು ತಿಳಿಸಿದರು.
-
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

