ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ
ಮೊಳಕಾಲ್ಮುರು: ನಿಮ್ಮಲ್ಲೆರ ಅಭಿಮಾನದ ಶ್ರೀ ರಕ್ಷೆಯಿಂದ ನನಗೆ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದೀರಿ. ಪ್ರಮಾಣಿಕವಾಗಿ ಜಿಲ್ಲೆ ಅಬಿವೃದ್ಧಿಗೆ ಶ್ರಮಿಸುತ್ತೇನೆಂದು ಸಂಸದ ಬಿ.ಎನ್. ಚಂದ್ರಪ್ಪ ತಿಳಿಸಿದ್ದಾರೆ.
ತಾಲೂಕಿನ ದೇವಸಮುದ್ರದ ಪರಮೇಶ್ವರಪ್ಪನ ಮಠದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಬೇರೆ ಜಿಲ್ಲೆಯವನಾದರೂ ನನ್ನನ್ನು ಅತಿ ಹೆಚ್ಚಿನ ಮತನೀಡಿ ಗೆಲ್ಲಿಸಿದ ನಿಮಗೆ ಚ್ಯುತಿ ಬಾರದ ಹಾಗೆ ಕೇಂದ್ರದ ಅನುದಾನ ತಂದು ಹಿಂದುಳಿದ ಜಿಲ್ಲೆ ಅಭಿವೃದ್ಧಿಗೆ ಪ್ರಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಎನ್. ವೈ. ಗೋಪಾಲ ಕೃಷ್ಣ, ಕೇವಲ ಮಳೆಯಾಶ್ರಿತವಾಗಿ ಬದುಕುವ ಇಲ್ಲಿನ ಜನತೆ ಮುಗ್ದರು. ಇಲ್ಲಿ ಕುಡಿಯುವ ನೀರಿಗೂ ಬರ. ನನ್ನ ಹದಿನೆಂಟು ವರ್ಷಗಳ ಸುದೀರ್ಘ ಅಧಿಕಾರವಧಿಯಲ್ಲಿ ನನ್ನ ಸರ್ಕಾರವಿರಲಿಲ್ಲ. ಹಾಗಾಗಿ ನನಗೆ ಹೆಚ್ಚಿನ ಅನುದಾನ ಸಿಗಲಿಲ್ಲ. ಇರುವ ಅನುದಾನಬಳಕೆ ಮಾಡಿಕೊಂಡು ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದರು.
ಈಗಾಗಲೇ ತುಂಗಭದ್ರಾ ಹಿನ್ನೀರಿನಿಂದ ತಾಲೂಕಿಗೆ ಕುಡಿಯುವ ನೀರಿನ ಯೋಜನೆಯ ಸರ್ವೆ ಕಾರ್ಯ ನಡೆಸಲು ಸರ್ಕಾರ ಬದ್ಧವಾಗಿದ್ದು, ಇನ್ನು ಎರಡು ವರ್ಷದಲ್ಲಿ ತಾಲೂಕಿನ ಎಲ್ಲ ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂದರು. ನೂತನ ವಿಧಾನ ಪರಿಷತ್ ಸದಸ್ಯೆ ಜಯಮ್ಮ, ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿರುವ ಕಾಂಗ್ರೆಸ್ ಪಕ್ಷವು ದೇಶದ ಅಭಿವೃದ್ದಿಗೆ ತನ್ನದೇ ಆದ ಕೊಡುಗೆ ನೀಡಿದೆ. ಸಂಸದರೊಂದಿಗೆ ಸೇರಿ ಹಿಂದುಳಿದ ಈ ತಾಲೂಕಿನ ಅಭಿವೃದ್ಧಿಗೆ ಯತ್ನಿಸುತ್ತೇನೆ ಎಂದು ತಿಳಿಸಿದರು.
ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಂ. ಜಯಣ್ಣ, ಜಿಲ್ಲಾಧ್ಯಕ್ಷ ಸೇತುರಾಂ, ಕ್ಷೇತ್ರಾಧ್ಯಕ್ಷ ಪಾಪನಾಯಕ, ಪೆನ್ನೋಬಳಸ್ವಾಮಿ, ಜಿಪಂ ಅಧ್ಯಕ್ಷೆ ನರಸಮ್ಮ, ವಕೀಲ ಆರ್.ಎಂ. ಅಶೋಕ, ಯೋಗೀಶ ಬಾಬು, ಜಗದೀಶ, ವಿಜಯ್ ಅಡವಿ, ಮಾರಯ್ಯ, ಶ್ರೀನಿವಾಸಲು, ದಡಗೂರು ಮಂಜಣ್ಣ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

