ಪುನರ್ವಸು ಅಬ್ಬರ, ಜನಜೀವನ ತತ್ತರ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜು.13
ಜಿಟಿ ಜಿಟಿ ನಿರಂತರವಾಗಿ ಸುರಿಯುವ ಮಳೆ, ಮನೆಯ ಮುಂದಿನ ಚರಂಡಿಯಲ್ಲಿ ಹರಿಯುವ ನೀರು, ಥಂಡಿ, ಆಗಾಗ ಬಲವಾಗಿ ಬೀಸುವ ಗಾಳಿ.
- ಇದೆಲ್ಲಾ ಮುಂಗಾರಿನ ವೈಭವ. ಇದು, ಮಲೆನಾಡಿನಲ್ಲಿ ನೋಡಲು ಚೆಂದ. ಈ ರೀತಿಯ ವಾತಾವರಣ ಮಲೆನಾಡಿನಲ್ಲಿ ನಿರ್ಮಾಣಗೊಂಡಿದೆ. ಜಿಲ್ಲೆಯ ಮಲೆನಾಡು ಸೇರಿದಂತೆ ಬರಗಾಲ ಆವರಿಸಿದ್ದ ಬಯಲುಸೀಮೆಯಲ್ಲೂ ಭಾನುವಾರ ಬಿಡುವಿಲ್ಲದೆ ಮಳೆ ಸುರಿಯುತ್ತಿತ್ತು.
ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು, ಮೂಡಿಗೆರೆ ಸುತ್ತಮುತ್ತ ಬೀಳುತ್ತಿರುವ ಮಳೆಯಿಂದಾಗಿ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಮುಂದಿನ 24 ಗಂಟೆಗಳಲ್ಲಿ ತುಂಗಾ ಹಾಗೂ ಭದ್ರಾ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಳವಾಗಲಿದೆ. ಮಳೆ ಇಲ್ಲದೆ ಮಲೆನಾಡಿನಲ್ಲಿ ಕಂಗಾಲಾಗಿದ್ದ ಕಾಫಿ ಹಾಗೂ ರಬ್ಬರ್ ಬೆಳೆಗಾರರಲ್ಲಿ ಈ ಮಳೆ ಆತ್ಮಸ್ಥೈರ್ಯ ತುಂಬಿದೆ. ಇನ್ನು ಮುಂಗಾರು ಮಳೆ ಅವಲಂಬಿತ ಬಯಲುಸೀಮೆಯ ಬೆಳೆಗಳು ಚೇತರಿಸಿಕೊಳ್ಳುವ ಸಾಧ್ಯತೆ ಇದೆ.
ಮಳೆ: ಜಿಲ್ಲೆಯ ಬಯಲುಸೀಮೆಯ ತರೀಕೆರೆ, ಕಡೂರು, ಚಿಕ್ಕಮಗಳೂರಿನ ಕೆಲವು ಹೋಬಳಿಗಳು ಸೇರಿದಂತೆ ಮೂಡಿಗೆರೆ, ಎನ್.ಆರ್. ಪುರ, ಕೊಪ್ಪ ಹಾಗೂ ಶೃಂಗೇರಿ ತಾಲೂಕಿನಲ್ಲಿ ಭಾನುವಾರ ಬೆಳಗ್ಗೆಯಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿತ್ತು. ಈ ಮಳೆಯಿಂದಾಗಿ ಮಲೆನಾಡಿನಲ್ಲಿ ಥಂಡಿಯ ವಾತಾವರಣ ನಿರ್ಮಾಣಗೊಂಡಿದೆ.
ಮಲೆನಾಡಿನಲ್ಲಿ ಬಲವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಕೆಲವೆಡೆ ಮರಗಳು ಉರುಳಿದ್ದು, ಇಂದರಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

