ಚಿಕ್ಕಮಗಳೂರು

ಕೃತಿ ಬಿಡುಗಡೆಗಿಂತಲೂ ರಚನೆ ಅತಿ ಮುಖ್ಯ: ರಂಭಾಪುರಿ ಶ್ರೀ

Published On :

ಬಾಳೆಹೊನ್ನೂರು: ಕೃತಿ ಬಿಡುಗಡೆಗಿಂತಲೂ ಅವುಗಳನ್ನು ರಚಿಸುವುದು ಮುಖ್ಯವಾಗಿದೆ ಎಂದು ರಂಭಾಪುರೀ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಶ್ರೀ ಹೇಳಿದರು.
ಇಲ್ಲಿನ ರಂಭಾಪುರೀ ಪೀಠದಲ್ಲಿ ನಡೆದ ಜಿಲ್ಲಾ ಚುಸಾಪ ಅಧ್ಯಕ್ಷ ಯಜ್ಞಪುರುಷ ಭಟ್ ಅವರ ವೃಶ್ಚಿಕ ಚುಟುಕು ಕವನ ಸಂಕಲನ ಪುಸ್ತಕವನ್ನು ಶ್ರೀಗಳಿಗೆ ಸಮರ್ಪಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಯಾವುದೇ ಪುಸ್ತಕ, ಪತ್ರಿಕೆಗಳನ್ನು ಮುದ್ರಿಸುವುದು ಸುಲಭ. ಆದರೆ, ಅವುಗಳನ್ನು ಸಂಕಲನಗೊಳಿಸಿ ಇಂದಿನ ಪೀಳಿಗೆಗೆ ಅನುಗುಣವಾಗಿ ರಚಿಸುವುದು ಮುಖ್ಯವಾಗಿದೆ. ಹಾಗೂ ಅವುಗಳಲ್ಲಿ ಸಮಾಜಕ್ಕೆ ಅರ್ಥವಾಗುವಂತಹ ವಸ್ತುನಿಷ್ಠ ವಿಷಯ, ಕಥೆ, ಕವನ ಬರೆಯುವುದು ಲೇಖಕನ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಯಜ್ಞಪುರುಷ ಭಟ್ ತಮ್ಮ ರಚನೆಯ ಹತ್ತು ಹಲವು ಉತ್ತಮ ಕವನಗಳನ್ನು ಹಾಗೂ ಸಮಾಜ, ಸರ್ಕಾರ, ಅಧಿಕಾರಿಗಳನ್ನು ಎಚ್ಚರಿಸುವಂತಹ ಕವನಗಳನ್ನು ಒಗ್ಗೂಡಿಸಿ ವೃಶ್ಚಿಕ ಎಂಬ ಹೆಸರಿನಡಿ ಬಿಡುಗಡೆಗೊಳಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಪತ್ರಕರ್ತ ಎಚ್.ಎನ್. ಸತೀಶ್ ಜೈನ್, ಬಿ.ಆರ್. ನಾಗರಾಜಗೌಡ, ಬಿ.ಎಸ್. ನಾಗರಾಜಭಟ್, ಪ್ರವೀಣ್ ಓಂಕಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.