ರಾಜ್ಯದಲ್ಲಿ ರಾಜೀವ್ ರಿನ್ ಯೋಜನೆ
ಆರ್. ತಾರಾನಾಥ್
ಚಿಕ್ಕಮಗಳೂರು: ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಿದ್ದ ರಾಜೀವ್ ರಿನ್ ಯೋಜನೆ (ರಾಜೀವ್ ಸಾಲ ಯೋಜನೆ) ರಾಜ್ಯದಲ್ಲಿ ಈ ವರ್ಷದಲ್ಲಿ ಜಾರಿಗೆ ಬಂದಿದೆ.
ಕೇಂದ್ರ ಸರ್ಕಾರ ಸೆಪ್ಟೆಂಬರ್ ತಿಂಗಳಲ್ಲಿಯೇ ಈ ಯೋಜನೆ ಜಾರಿಗೆ ತಂದಿತಾದರೂ, ಇದು ರಾಜ್ಯದಲ್ಲಿ ಈಗ ಅನುಷ್ಠಾನಕ್ಕೆ ಬಂದಿದೆ. 2013-14ನೇ ಸಾಲಿನಲ್ಲಿ ರಾಜ್ಯಕ್ಕೆ 14,600 ಭೌತಿಕ ಗುರಿ ನೀಡಲಾಗಿದೆ. ಅಂದರೆ 2011ರ ಜನಗಣತಿ ಪ್ರಕಾರ ಕೊಳಚೆ ಪ್ರದೇಶಗಳಲ್ಲಿ ವಾಸವಾಗಿರುವ ಜನಸಂಖ್ಯೆಯ ಆಧಾರದ ಮೇಲೆ ಭೌತಿಕ ಗುರಿಯನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸುವಂತೆ ರಾಜ್ಯ ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕರು ಜೂನ್ 10 ರಂದು ಆದೇಶ ಹೊರಡಿಸಿದ್ದಾರೆ.
ಯಾವ ಜಿಲ್ಲೆಗೆ ಎಷ್ಟೇಷ್ಟು ಗುರಿ: ರಾಜ್ಯದ 30 ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಲ್ಲಿ ಈ ಯೋಜನೆ ಜಾರಿಗೆ ತರಲಾಗಿದ್ದು, ಸಾಲ ನೀಡಲು ನಿಗದಿಪಡಿಸಿದ ಜಿಲ್ಲೆಯವಾರು ವಿವರ.
ಬೆಂಗಳೂರು ಗ್ರಾಮಾಂತರ ಜಿಲ್ಲೆ- 164, ಬೆಂಗಳೂರು ನಗರ ಜಿಲ್ಲೆ- 29, ರಾಮನಗರ- 163, ಚಿತ್ರದುರ್ಗ- 208, ದಾವಣಗೆರೆ- 407, ಕೋಲಾರ- 307, ಚಿಕ್ಕಬಳ್ಳಾಪುರ- 174, ಶಿವಮೊಗ್ಗ- 408, ತುಮಕೂರು- 381, ಚಾಮರಾಜನಗರ- 115, ಚಿಕ್ಕಮಗಳೂರು- 157, ದಕ್ಷಿಣ ಕನ್ನಡ- 472, ಹಾಸನ- 228, ಕೊಡಗು- 48, ಮಂಡ್ಯ- 192, ಮೈಸೂರು- 741, ಉಡುಪಿ- 142, ಬಾಗಲಕೋಟೆ- 363, ಬೆಳಗಾಂ- 683, ಬಿಜಾಪುರ- 329, ಹುಬ್ಬಳ್ಳಿ- ಧಾರವಾಡ- 687, ಗದಗ- 248, ಹಾವೇರಿ- 224, ಉತ್ತರ ಕನ್ನಡ- 249, ಬೀದರ್- 272, ಬಳ್ಳಾರಿ- 575, ಗುಲ್ಬರ್ಗಾ- 543, ಯಾದಗಿರಿ- 136, ಕೊಪ್ಪಳ- 147, ರಾಯಚೂರು- 299.
ಸಾಲ ಮರು ಪಾವತಿ: ರಾಜೀವ್ ರಿನ್ ಯೋಜನೆಯಡಿ ಗರಿಷ್ಠ 5 ಲಕ್ಷದವರೆಗೆ ಸಾಲ ಪಡೆಯಲು ಅವಕಾಶ ಇದೆ. 5 ಲಕ್ಷದವರೆಗೆ ಸಾಲ ಪಡೆದವರಿಗೆ ಶೇ. 5 ರಷ್ಟು ಸಬ್ಸಿಡಿ ನೀಡಲಾಗುವುದು. ಈ ಸಾಲವನ್ನು ಮರು ಪಾವತಿ ಮಾಡಲು 15 ವರ್ಷದವರೆಗೆ ಕಾಲಾವಕಾಶ ನೀಡಲಾಗುವುದು.
ರು. 5 ಲಕ್ಷ ಮೇಲ್ಪಟ್ಟು, ಅಂದರೆ ಗರಿಷ್ಟ ರು. 8 ಲಕ್ಷ ವರೆಗೆ ಸಾಲ ಪಡೆಯಲು ಅವಕಾಶ ಇದೆ. ರು. 8 ಲಕ್ಷ ಸಾಲ ಪಡೆದುಕೊಂಡವರು ರು. 3 ಲಕ್ಷ ಸಾಲಕ್ಕೆ ಬ್ಯಾಂಕ್‌ನವರು ಗೃಹ ನಿರ್ಮಾಣಕ್ಕೆ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿಯನ್ನು ಪಾವತಿ ಮಾಡಬೇಕಾಗುತ್ತದೆ. ಅಂದರೆ ರು. 5 ಲಕ್ಷದೊಳಗೆ ಸಾಲ ಪಡೆಯುವವರು ರಾಜೀವ್ ರಿನ್ ಯೋಜನೆಯ ಸಬ್ಸಿಡಿ ಪಡೆಯಲು ಅರ್ಹರಾಗಿರುತ್ತಾರೆ.
ಏನಿದು ಯೋಜನೆ?
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಾಸವಾಗಿರುವ ಆರ್ಥಿಕ ದುರ್ಬಲ ಮತ್ತು ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಹೊಸ ಮನೆ ನಿರ್ಮಾಣ ಹಾಗೂ ಪ್ರಸ್ತುತ ಇರುವ ಮನೆಯನ್ನು ವಿಸ್ತರಿಸಿಕೊಳ್ಳಲು ಶೇ. 5 ರ ಸಬ್ಸಿಡಿ ದರದಲ್ಲಿ ಸಾಲ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

