ಚಿಕ್ಕಮಗಳೂರು

ಮಸೀದಿ ಅಭಿವೃದ್ಧಿಗೆ 25 ಲಕ್ಷ

Published On :

ಕಡೂರು: ಶಾಸಕ ವೈ.ಎಸ್.ವಿ.ದತ್ತರವರು ಕ್ಷೇತ್ರದ ವಿವಿಧ ಮಸೀದಿಗಳ ಅಭಿವೃದ್ಧಿಗಾಗಿ ರು. 25 ಲಕ್ಷ ಮಂಜೂರು ಮಾಡಿಸುವ ಮೂಲಕ ಮುಸ್ಲಿಂರಿಗೆ ರಂಜಾನ್ ಕೊಡುಗೆ ನೀಡಿದ್ದಾರೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ವಿಭಾಗ ತಾಲೂಕು ಅಧ್ಯಕ್ಷ ಎನ್.ಇಮಾಮ್ ಹೇಳಿದರು.
ಕ್ಷೇತ್ರದ ಚಿಕ್ಕಪಟ್ಟಣಗೆರೆ ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಕಡೂರು ಹಾಗೂ ಬೀರೂರು ಪಟ್ಟಣ ಸೇರಿದಂತೆ ಕ್ಷೇತ್ರದ ಮಸೀದಿಗಳ ಅಭಿವೃದ್ಧಿಗೆ 2014-15 ಸಾಲಿನ 1ನೇ ಕಂತಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ, ಬೀರೂರು ಜಾಮಿಯಾ ಮಸೀದಿ ಸಾರ್ವಜನಿಕ ಸಮುದಾಯ ಭವನ ನಿರ್ಮಾಣಕ್ಕಾಗಿ ರು. 5 ಲಕ್ಷ, ಕಡೂರಿನ ಬಿಲಾಲ್ ಮಸೀದಿ ಕಾಂಪೊಂಡ್ ನಿರ್ಮಾಣಕ್ಕಾಗಿ ರು. 2 ಲಕ್ಷ, ಕಡೂರು  ಮದೀನಾ ಮಸೀದಿ ಸಮುದಾಯಭವನಕ್ಕಾಗಿ ರು. 2 ಲಕ್ಷ, ಬೀರೂರು ಅಂಜುಮಾನ್ ಮೊಹಲ್ಲಾದ ಅಂಜುಮಾನ್ ಮಸೀದಿಯ ಸಮುದಾಯಭವನಕ್ಕಾಗಿ ರು. 2ಲಕ್ಷ, ಬೀರೂರಿನ ಬಳ್ಳಾರಿ ಕ್ಯಾಂಪಿನ ಮೆಕ್ಕಾ ಮಸೀದಿ ಸಮುದಾಯಭವನಕ್ಕಾಗಿ  ರು. 2 ಲಕ್ಷ, ಬೀರೂರು ಶಾಂತಿ ನಗರದ ಮದೀನಾ ಮಸೀದಿ ಕಾಂಪೌಂಡ್ ನಿರ್ಮಾಣಕ್ಕಾಗಿ ರು. 2 ಲಕ್ಷ ಮಂಜೂರು ಮಾಡಿಸಿದ್ದಾರೆ ಎಂದು ತಿಳಿಸಿದರು.  
ಚಿಕ್ಕಪಟ್ಟಣಗೆರೆ ಕೆರೆ ಸ್ವಚ್ಚತೆಗಾಗಿ ಶಾಸಕರು ಅನುದಾನ ನೀಡಿದ್ದು ಕಾಮಗಾರಿ ಆರಂಭಗೊಂಡಿದೆ ಎಂದರು. ಪಕ್ಷದ ಅಲ್ಪಸಂಖ್ಯಾತ ಘಟಕ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್, ಜೆಡಿಎಸ್ ಮುಖಂಡ ಕೆ.ಎಂ. ಮಹೇಶ್ವರಪ್ಪ, ಭಂಡಾರಿ ಶ್ರೀನಿವಾಸ್, ಕೆ.ವಿ.ವಾಸು, ಕೆ.ಎಚ್.ಲಕ್ಕಣ್ಣ, ತನ್ವೀರ್ ಅಹಮದ್, ಜಿ.ಸೋಮಯ್ಯ, ಸಿ.ಪಿ. ಮಲ್ಲಪ್ಪ, ಮಂಜುನಾಥ್, ಜಗದೀಶ್, ಈಶ್ವರಪ್ಪ, ಶಂಕರ್ ಇತರರು ಉಪಸ್ಥಿತರಿದ್ದರು.


ಭಾವಚಿತ್ರ ಬಳಕೆ ಪ್ರಕರಣ ಶಾಸಕ ಶ್ರೀನಿವಾಸ್ ನಿರಾಳ


ಬೆಂಗಳೂರು: ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಚುನಾವಣೆ ಸಮಯದಲ್ಲಿ ತಮ್ಮ ಹೆಸರು ಹಾಗೂ ಕರ ಪತ್ರದಲ್ಲಿ ಭಾವಚಿತ್ರ ಬಳಸಿದ್ದಾರೆಂದು ಆರೋಪಿಸಿ ಬಿ.ಆರ್. ನೀಲಕಂಠಪ್ಪ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದ ಬಿ.ಆರ್.ನೀಲಕಂಠಪ್ಪ ನಂತರ ಸ್ವತಂತ್ರಅರ್ಭ್ಯ್ಙಯಾಗಿ ತರೀಕೆರೆ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಚುನಾವಣೆ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್ ಅರ್ಭ್ಯ್ಙ ಕರ ಪತ್ರದಲ್ಲಿ ತಮ್ಮ ಭಾವಚಿತ್ರ ಬಳಸಿದ್ದಾರೆಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ, ತಮ್ಮ ಭಾವಚಿತ್ರ ಒಳಗೊಂಡ ಕರ ಪತ್ರಗಳನ್ನು ಹಂಚಿರುವ ಸಂಬಂಧ ಯಾವುದೇ  ಸಾಕ್ಷಿ ಮತ್ತು ದಾಖಲೆಗಳಿಲ್ಲ ಎಂದು ಜಿ.ಎಚ್.ಶ್ರೀನಿವಾಸ್ ಮಧ್ಯಂತರ ಅರ್ಜಿ ಸಲ್ಲಿಸಿದರು.
ಮಧ್ಯಂತರ ಅರ್ಜಿ ಪುರಸ್ಕರಿಸಿದ ನ್ಯಾ.ಎ.ಎಸ್. ಬೋಪಣ್ಣ ಅವರಿದ್ದ ಪೀಠ ಜಿ.ಎಚ್.ಶ್ರೀನಿವಾಸ್ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿ, ಬಿ.ಆರ್.ನೀಲಕಂಠಪ್ಪ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.