ಎಳ್ಳೂರಿನಲ್ಲಿ ಮತ್ತೆ ಮರಾಠಿ ನಾಮಫಲಕ: ನಗರದಲ್ಲಿ ಕನ್ನಡಸೇನೆ ಪ್ರತಿಭಟನೆ
ಚಿಕ್ಕಮಗಳೂರು: ತಾಳ್ಮೆ ಕಳೆದುಕೊಳ್ಳದೆ ಸ್ವಾಭಿಮಾನದಿಂದ ಸಹಬಾಳ್ವೆ ಮಾಡುತ್ತಿರುವುದನ್ನೆ ನಮ್ಮ ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಿ ಮರಾಠಿಗರು ಪದೇ ಪದೇ ಕಾಲು ಕೆರೆದು ಕನ್ನಡಿಗರನ್ನು ಕೆಣಕಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ. ರಾಜೇಗೌಡ ಎಚ್ಚರಿಸಿದ್ದಾರೆ.
ಎಳ್ಳೂರಿನಲ್ಲಿ ಮಹಾರಾಷ್ಟ್ರ ಎಂದು ಮರಾಠಿ ನಾಮಫಲಕವನ್ನು ಮರು ನಾಮಕರಣ ಮಾಡಿರುವ ಕ್ರಮವನ್ನು ಖಂಡಿಸಿ ಶನಿವಾರ ನಗರದ ಹನುಮಂತಪ್ಪ ವೃತ್ತದಲ್ಲಿ ಕನ್ನಡಸೇನೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ವಿನಾಶಕಾಲೆ ವಿಪರೀತ ಬುದ್ಧಿ ಎಂಬ ಗಾದೆಮಾತಿಗೆ ಅನುಗುಣವಾಗಿ ಮರಾಠಿಗರು ಪುಂಡಾಟಿಕೆ ನಡೆಸುತ್ತಿದ್ದಾರೆ. ಗಡಿ ವಿಚಾರದಲ್ಲಿ ಸುಖಾಸುಮ್ಮನೆ ಕಾಲು ಕೆರೆದು ಜಗಳಕ್ಕೆ ಬರುವ ಎಂಇಎಸ್ ಪುಂಡರು, ಆರ್.ಟಿ.ಎ. ಕಾರ್ಯಕರ್ತ ಭೀಮಪ್ಪ ಸುಪ್ರಿಂ ಕೋರ್ಟ್‌ನ ಮೋರೆಹೋಗಿ ಮರಾಠಿ ನಾಮಫಲಕ ತೆರವು ಮಾಡುವಂತೆ ಕೋರಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶ ನೀಡಿದ್ದರು. ಅದನ್ನು ಮೀರಿ ಎಳ್ಳೂರಿನಲ್ಲಿ ಮರಾಠಿ ಭಾಷೆಯಲ್ಲಿ ಮಹಾರಾಷ್ಟ್ರ ಎಂದು ನಾಮಫಲಕವನ್ನು ಮತ್ತೆ ಹಾಕಿರುವುದು ಇವರ ಗರ್ವತನ ಪ್ರದರ್ಶಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಸೇನೆ ನಗರಾಧ್ಯಕ್ಷ ಪ್ರವೀಣಕುಮಾರ್, ಜಿಲ್ಲಾ ಉಪಾಧ್ಯಕ್ಷ ಮಂಜೇಗೌಡ, ದೇವರಾಜ್, ಮುಖಂಡರಾದ ನೀಲೇಶ್, ಲೋಕೇಶ್, ಕುಪ್ಪೇನಹಳ್ಳಿ ರಾಜು, ಗುರು, ಕೃಷ್ಣ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

