ಚಿಕ್ಕಮಗಳೂರು

ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆಲವಿಗೆ ರಾಜ್ಯ ಕಾದಿದೆ: ಯಡಿಯೂರಪ್ಪ

Published On :

ಶಿಕಾರಿಪುರ: ಇದೇ 31ರ ಗುರುವಾರ ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ನಾಮಪತ್ರ ಸಲ್ಲಿಸಲಿದ್ದಾರೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಜರಿದ್ದು ವಿರೋಧಿಗಳಿಗೆ ಸಂಚಲನ ಮೂಡಿಸುವ ವಾತಾವರಣ ನಿರ್ಮಿಸುವಂತೆ ಮಾಜಿ ಮುಖ್ಯಮಂತ್ರಿ ಸಂಸದ ಯಡಿಯೂರಪ್ಪ ತಿಳಿಸಿದರು.
ಪಟ್ಟಣದ ಭಾನುವಾರ ಮಂಗಳಭವನದಲ್ಲಿ ನಡೆದ ಪಟ್ಟಣ ವ್ಯಾಪ್ತಿಯ ಕಾರ್ಯಕರ್ತರ, ಅಭಿಮಾನಿಗಳ, ಹಿತೈಷಿಗಳ ಕಿಕ್ಕಿರಿದ ಸಭೆಯಲ್ಲಿ ಮಾತನಾಡಿ, ರಾಜ್ಯದ 224 ಕ್ಷೇತ್ರಗಳಿಗೆ ಹೋಲಿಸಿದಲ್ಲಿ ಅತೀ ಹೆಚ್ಚು ಅಬಿವೃದ್ಧಿ ಹೊಂದಿ ಗಮನ ಸೆಳೆದಿರುವ ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲವಿನ ಅಂತರವನ್ನು ರಾಜ್ಯದ ಜನತೆ ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ ಎಂದರು.
ಶಿಕಾರಿಪುರಕ್ಕೆ ಮೂಲಭೂತ ಸೌಲಭ್ಯದ ಸಹಿತ ಶಿಕ್ಷಣ, ವಿದ್ಯುತ್ ಮತ್ತಿತರ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದ್ದು ಸಮಸ್ತ ಅಭಿವೃದ್ಧಿ ಹೆಮ್ಮೆಯ ಸಂಗತಿ ಎಂದ ಅವರು ಚುನಾವಣೆಯಲ್ಲಿ ವಿರೋಧಿ ಕಾಂಗ್ರೆಸ್ ಮತ್ತಿತರ ಪಕ್ಷ ಜಾತಿ ವಿಷಬೀಜ ಬಿತ್ತಿ ಒಡಕು ಮೂಡಿಸುವ ವ್ಯವಸ್ಥಿತ ಪಿತೂರಿ, ಷಡ್ಯಂತ್ರ ರೂಪಿಸುತ್ತಿದ್ದು ಕಾರ್ಯಕರ್ತರು ಸಂಪರ್ಕ ಹೊಂದಿರುವ ಇತರೆ ಪಕ್ಷಗಳ ಮತದಾರರನ್ನು ಅಭಿವೃದ್ಧಿಯ ಆಧಾರದಲ್ಲಿ ಬೆಂಬಲ ಪಡೆಯಬೇಕಾಗಿದೆ ಎಂದರು.
ಚುನಾವಣೆಯಲ್ಲಿ ವಿರೋಧಿ ಕಾಂಗ್ರೆಸ್ ಪಕ್ಷದ ಹಲವು ಸಚಿವರು, ಶಾಸಕರು ಖುದ್ದು ಆಗಮಿಸುವ ಸಂಶಯವಿದ್ದು, ಯಾರು ಬಂದರು ತಾಲೂಕಿನಲ್ಲಿ ಜನತೆಯ ಮನಸ್ಸು ಹಾಗೂ ಕಮಲದ ಹೂವು ಬದಲಾಯಿಸಲು ಅಸಾದ್ಯ. ಮಾದರಿ ಸಂಸದರಾಗಿ ಗುರುತಿಸಿಕೊಂಡಿರುವ ರಾಘವೇಂದ್ರ ಶಾಸಕರಾಗಲು ಕಾರ್ಯಕರ್ತರು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸುವಂತೆ ತಿಳಿಸಿದರು.
30 ಕೋಟಿ ವೆಚ್ಚದ ಕೆಮ್ಮಣ್ಣು ಗುಂಡಿ ಅಭಿವೃದ್ಧಿ ಕಾಮಗಾರಿ ಸೂಕ್ತ ನಿರ್ವಹಣೆ ಇಲ್ಲದೆ ಕಳಾಹೀನವಾಗಿದ್ದು, ಶಿವಮೊಗ್ಗದ ಜೈಲು ಸ್ಥಳಾಂತರಗೊಳಿಸಿ ಸ್ಥಳವನ್ನು ಸದ್ವಿನಿಯೋಗಿಸಿಕೊಳ್ಳಲು ಸೂಚಿಸಿದರೆ ಗೃಹ ಸಚಿವರು ಅದೇ ಸ್ಥಳದಲ್ಲಿಯೇ ಮುಂದುವರಿಯಲಿ ಎಂದು ಸೂಚಿಸಿದ್ದಾರೆ. ಮುಂದಾಲೋಚನೆ ಇಲ್ಲದ ಸರ್ಕಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಂಸದರಾಗಿ ರಾಘವೇಂದ್ರ ಶಿಕಾರಿಪುರದ ಮೂಲಕ ರೈಲು ಮಾರ್ಗಕ್ಕೆ ಹೆಚ್ಚಿನ ಶ್ರಮ ವಹಿಸಿದ್ದು ಸಮೀಕ್ಷಾ ಕಾರ್ಯ ಆರಂಭವಾಗಿದೆ ಎಂದರು.
ಮಾಜಿ ಸಂಸದ ಅಭ್ಯರ್ಥಿ ರಾಘವೇಂದ್ರ ಮಾತನಾಡಿ, ನಾಮಪತ್ರ ಸಲ್ಲಿಸುವ ಗುರುವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಗುರವಾಗಿ ಮಾತನಾಡುವವರಿಗೆ ಸೂಕ್ತ ಪ್ರತ್ಯುತ್ತರ ನೀಡಬೇಕಾಗಿದೆ ಎಂದರು.
ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ ಯಡಿಯೂರಪ್ಪನವರ ದೀರ್ಘ ಕಾಲದ ಆಪ್ತ ಸಚ್ಚಿದಾನಂದ ಬಿ. ಮಠದ್ ಮಾತನಾಡಿ, ರಾಘವೇಂದ್ರ ಮತದಾರರ ಒತ್ತಡದಿಂದ ಚುನಾವಣೆಗೆ ಸ್ವರ್ಧಿಸಿದ್ದು, ತಲೆಮಾರಿನ ಅಧಿಕಾರದ ಹಸ್ತಾಂತರ ಪ್ರಕ್ರಿಯೆ ಎಂದರು.
ತಾಪಂ ಮಾಜಿ ಸದಸ್ಯ ಸುರೇಶ್ ನಾಯ್ಕ್, ಪುರಸಭಾ ಮಾಜಿ ಸದಸ್ಯ ರೇವಣಸಿದ್ದಪ್ಪ ಸಹಿತ ಹಲವರು ಪಕ್ಷಕ್ಕೆ ಸೇರ್ಪಡೆಗೊಂಡರು. ಮುಖಂಡ ಶೇಖರಪ್ಪ, ಮೌಲಾನಾ ಅಮ್ಜದ್ ಹುಸೇನ್, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ಕೊಪ್ಪಲು, ನಾಗರಾಜಪ್ಪ, ಗೌರಮ್ಮ, ಸೈಯದ್ ಪೀರ್, ಗುರುಮೂರ್ತಿ, ಚನ್ನವೀರಪ್ಪ, ಮೋಹನ್, ಕಬಾಡಿ ರಾಜು, ಗಾಯತ್ರಿದೇವಿ, ರವಿಕಲಾ ಹೆಗ್ಗಡೆ, ಪದ್ಮಾ, ನ್ಯಾಯವಾದಿ ಶಿವಪ್ರಕಾಶ್, ಕೋಟ್ರೇಶಪ್ಪ, ನಿಂಗಪ್ಪ, ಸೋಹನ್ ರಾಜ್, ಬಿ.ಎಸ್ ಪಾಟೀಲ್, ಪ್ರವೀಣ ಶೆಟ್ಟಿ, ಪ್ರವೀಣ ಜೈನ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.