ನಿಲ್ದಾಣಕ್ಕೆ ಬಾರದ ಬಸ್ಸುಗಳು
ತರೀಕೆರೆ: ಪಟ್ಟಣದಲ್ಲಿರುವ ಸರ್ಕಾರಿ ನಿಲ್ದಾಣಕ್ಕೆ ಬಸ್ಸುಗಳು ಬಾರದೇ ರಸ್ತೆ ಬದಿಯಲ್ಲೇ ಕ್ಷಣಕಾಲ ನಿಂತು ಹೊರಡುತ್ತಿರುವ ಪರಿಪಾಠದ ಬಗ್ಗೆ ನಾಗರಿಕ ಸೇವಾ ಸಮಿತಿ ಆಕ್ಷೇಪಿಸಿದೆ.
ನಾಗರಿಕ ಸೇವಾ ಸಮಿತಿ ಅಧ್ಯಕ್ಷರು, ಕನ್ನಡಶ್ರೀ ಬಿ.ಎಸ್.ಭಗವಾನ್ ಹೇಳಿಕೆ ನೀಡಿದ್ದು, ಪಟ್ಟಣದಲ್ಲಿ ಬಹು ಮುಖ್ಯವಾದ ರಾಷ್ಟ್ರೀಯ ಹೆದ್ದಾರಿ 206 ಹಾದು ಹೋಗಿದ್ದು, ಕೇಂದ್ರ ಸ್ಥಾನದಲ್ಲೇ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸುಸಜ್ಜಿತವಾಗಿದೆ ಎಂದರು.
ಪ್ರಯಾಣಿಕರಿಗೆ ತೊಂದರೆ: ಇಷ್ಟಾದರೂ ಹೆದ್ದಾರಿಯಲ್ಲಿ ಸಂಚರಿಸುವ ಸಾರಿಗೆ ವಾಹನಗಳು ಕೇವಲ ಹಗಲಿನಲ್ಲಿ ಮಾತ್ರ ನಿಲ್ದಾಣ ಪ್ರವೇಶಿಸಿ, ಸಂಜೆಯಾಗುತ್ತಲೇ ಯಾವುದೇ ಬಸ್ಸುಗಳು ನಿಲ್ದಾಣದೊಳಗೆ ನೇರವಾಗಿ ಪ್ರವೇಶಿಸದೆ, ರಸ್ತೆ ಬದಿಯಲ್ಲೇ ಪ್ರಯಾಣಿಕರನ್ನು ಆತುರಾತುರವಾಗಿ ಹತ್ತಿಸಿಕೊಂಡು ಹೋಗುತ್ತಿವೆ.
ಇದರಿಂದ ಮಹಿಳೆಯರು ಮಕ್ಕಳು ಮ್ತತ್ತು ವೃದ್ಧರಿಗೆ ಬಸ್ಸಿಗಾಗಿ ನಿಲ್ದಾಣದಿಂದ ರಸ್ತೆ ಬದಿಗೆ ಲಗೇಜು ಮತ್ತು ಮಕ್ಕಳನ್ನು ಅಲ್ಲಿಂದಿಲ್ಲಿಗೆ ಕರೆದುಕೊಂಡು ಹೋಗುವ ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
ಶಾಲಾ ಕಾಲೇಜು ಮತ್ತಿತರ ವಿದ್ಯಾಸಂಸ್ಥೆಗಳಿಗೆ ವಿದ್ಯಾರ್ಥಿಗಳು ಕೆಎಸ್ಆರ್ಟಿಸಿ ಬಸ್ಸುಗಳನ್ನೇ ಅವಲಂಬಿಸಬೇಕಾಗಿದೆ. ಆದರೆ ಬಸ್ಸುಗಳು ನಿಲ್ದಾಣ ಪ್ರವೇಶಿಸಿದೇ ನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.
ಕ್ರಮ ಕೈಗೊಂಡಿಲ್ಲ: ಈ ಬಗ್ಗೆ ಅನೇಕ ಸಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿರುವ ಅವರು ಲಕ್ಷಾಂತರ ರು. ಖರ್ಚು ಮಾಡಿ ಸುಸಜ್ಜಿತ ನಿಲ್ದಾಣ ಹೆದ್ದಾರಿ ಬಳಿಯಲ್ಲೇ ನಿರ್ಮಾಣವಾಗಿದ್ದರೂ ಬಸ್ಸುಗಳು ನಿಲ್ದಾಣ ಪ್ರವೇಶಿಸದೇ ವಿನಾಕಾರಣ ಪ್ರಯಾಣಿಕರಿಗೆ ತೊಂದೆರೆಯಾಗುತ್ತಿದೆ.
ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಬಸ್ಸುಗಳು ಎಲ್ಲಾ ವೇಳೆಯಲ್ಲೂ ನಿಲ್ದಾಣ ಪ್ರವೇಶಿಸುವಂತೆ ಕ್ರಮ ಕೈಗೊಳ್ಳದಿದ್ದಲ್ಲಿ ಸಾರ್ವಜನಿಕರು, ಸ್ಥಳೀಯ ಸಂಘ ಸಂಸ್ಥೆಗಳು ಈ ಬಗ್ಗೆ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ನಾಗರಿಕ ಸಮಿತಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

