ಚಿಕ್ಕಮಗಳೂರು

ಸೇವೆಯಿಂದ ನಿವೃತ್ತರಾದ ರಾಜೇಗೌಡಗೆ ಬೀಳ್ಕೊಡುಗೆ

Published On :

ನರಸಿಂಹರಾಜಪುರ:  ಭದ್ರಾವತಿ ತಾಲೂಕು ಪಂಚಾಯ್ತಿಗೆ ಕಾರ್ಯನಿರ್ವಹಣಾಧಿಕಾರಿ ಆಗಿ ಮುಂಬಡ್ತಿ ಹೊಂದಿ ವರ್ಗಾವಣೆಗೊಂಡು ನಂತರ ನಿವೃತ್ತಿ ಹೊಂದಿದ ತಾಲೂಕು ಪಂಚಾಯ್ತಿಯ ಎಜಿಎನ್‌ಆರ್‌ಇಜಿಇ ಯೋಜನೆಯ ಸಹಾಯಕ ನಿರ್ದೇಶಕ ರಾಜೇಗೌಡ ಅವರನ್ನು ಸಾಮರ್ಥ್ಯ ಸೌಧದ ಸಮಾರಂಭದಲ್ಲಿ ಗುರುವಾರ  ಆತ್ಮೀಯವಾಗಿ ಬೀಳ್ಕೊಡಲಾಯಿತು. ತಾಲೂಕು ಪಂಚಾಯ್ತಿ ಸದಸ್ಯ ಎಸ್.ಎಸ್. ಶಾಂತಕುಮಾರ್ ಮಾತನಾಡಿ, ರಾಜೇಗೌಡ ಅವರು ತಮ್ಮ ವೃತ್ತಿಗೆ ಗೌರವ ತರುವ ರೀತಿಯಲ್ಲಿ ಕಾರ್ಯನಿರ್ವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು ಎಂದು ಸ್ಮರಿಸಿದರು. ತಾಲೂಕು ಪಂಚಾಯ್ತ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಮಾತನಾಡಿ, ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಆಗಿದ್ದ ರಾಜೇಗೌಡರ ನಿವೃತ್ತಿಯು ಇಲಾಖೆಗೆ ತುಂಬಲಾರದ ನಷ್ಚವಾಗಿದೆ. ಅವರ ನಿವೃತ್ತಿ ಜೀವನ ಸುಖಕರವಾಗರಲಿ ಎಂದು ಹಾರೈಸಿದರು. ತಾಲೂಕು ಪಂಚಾಯ್ತಿ ಅಧ್ಯಕ್ಷ ಮಂಜಪ್ಪಗೌಡ, ಉಪಾಧ್ಯಕ್ಷೆ ಸುಮಿತ್ರಾ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್, ಬಿ.ಜಿ. ಮಾಳಮ್ಮನವರ್, ಜೋಸೆಫ್, ರಾಮಚಂದ್ರಯ್ಯ, ಮೀನಾಕ್ಷಮ್ಮ ಶುಭ ಹಾರೈಸಿದರು. ಗುರುಶಾಂತಪ್ಪ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.