ಚಿಕ್ಕಮಗಳೂರು

ರೈತರ ಮೇಲೆ ದೌರ್ಜನ್ಯ ನಡೆಸಿದರೆ ಹುಷಾರ್: ಶಾಸಕ ಮಧು ಬಂಗಾರಪ್ಪ ಎಚ್ಚರಿಕೆ

Published On :

ಸೊರಬ: ಒಕ್ಕಲೆಬ್ಬಿಸುವ ನೆಪದಲ್ಲಿ ರೈತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ದೂರು ಕೇಳಿ ಬರುತ್ತಿದೆ. ಅರಣ್ಯ ಹಕ್ಕು ನಿಯಮದಡಿ ಹಲವಾರು ರೈತರು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಅವರಿಗೇ ಹಕ್ಕು ಕೊಡಿಸುವ ಹೋರಾಟ ನಡೆಯುತ್ತಿರುವ ವೇಳೆ ದೌರ್ಜನ್ಯ ನಡೆಸಲು ಅರಣ್ಯ ಇಲಾಖೆ ಮುಂದಾದರೆ ಸಹಿಸುವುದಿಲ್ಲ ಎಂದು ಶಾಸಕ ಮಧು ಬಂಗಾರಪ್ಪ ಗುಡುಗಿದರು.
ಪಟ್ಟಣದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಅನುಸೂಚಿತ, ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕುಗಳ ಮಾನ್ಯತೆ ಅಧಿನಿಯಮ ಅನುಷ್ಠಾನ ಕುರಿತ ಕಾರ್ಯಗಾರ ಉದ್ಘಾಟಿಸಿ ಅವರು  ಮಾತನಾಡಿದರು. ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಿರುವ ರೈತರ ಅರ್ಜಿ ಇತ್ಯರ್ಥವಾಗದೆ ಅವರನ್ನು ಸ್ಥಳಾಂತರಿಸಿಬಾರದೆಂದು ಅರಣ್ಯ ಇಲಾಖೆಗೆ ತಾಕೀತು ಮಾಡಿದರು.
ಮಾಹಿತಿ ಮತ್ತು ಅರ್ಜಿಗಳನ್ನು ನೀಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ರೈತರ ಜೊತೆಗೆ ಉತ್ತಮ ಸ್ಪಂದನೆ ಇಟ್ಟುಕೊಳ್ಳಬೇಕು. ಅವರ ಸಣ್ಣ-ಪುಟ್ಟ ದೋಷಗಳನ್ನು ದೊಡ್ಡದು ಮಾಡದೇ ಅನ್ನಕ್ಕಾಗಿ ನಂಬಿಕೊಂಡ ಅವರ ಭೂಮಿ ಅವರಿಗೆ ದೊರೆಯುವಂತೆ ಸಹಕರಿಸಬೇಕು ಎಂದರು. ಕಾರ್ಯಾಗಾರದಲ್ಲಿ ರೈತರಿಂದ ಅನೇಕ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿ ಬಂದವು. ಆದರೆ, ಕೆಲವರಿಗೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗದೆ ಬೇಸರ ವ್ಯಕ್ತಪಡಿಸಿದರು. ಕಾರ್ಯಾಗಾರದಲ್ಲಿ ತಾಪಂ ಸದಸ್ಯ ಬರಿಗಿ ನಿಂಗಪ್ಪ, ತಹಶೀಲ್ದಾರ್ ಕೆ ತಿಪ್ಪೂರಾವ್, ಇಓ ಇಸ್ಮಾಯಿಲ್, ಸಮಾಜ ಕಲ್ಯಾಣ ಅಧಿಕಾರಿ ರವಿ ಕುಮಾರ್, ಎಸಿಎಫ್ ಅನ್ವರ್‌ಖಾನ್, ಸಮಿತಿ ಪ್ರಮುಖರಾದ ಪರಶುರಾಮ್ ಕೋಳಿಸಾಲು, ಎನ್.ಹಿರಿಯಣ್ಣ ಕಲ್ಲಂಬಿ, ಧರ್ಮಪ್ಪ ಹೆಚ್ಚೆ, ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಮ್, ಮಂಜಪ್ಪ, ಉಮೇಶ್, ಅಂಬಾಜಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.