ಮೃತ ರೈತನ ಕುಟುಂಬಕ್ಕೆ ಪರಿಹಾರ ಕೋರಿ ಬ್ಯಾಂಕ್ ಎದುರು ಪ್ರತಿಭಟನೆ
ಶೃಂಗೇರಿ: ಈಚೆಗೆ ರೈತರೊಬ್ಬರು ಸಾಲ ವಸೂಲಾತಿ ಒತ್ತಡ ತಡೆಯಲಾಗದೇ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಕಾರಣರಾದ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ, ಪರಿಹಾರ ಕೋರಿ ಸೋಮವಾರ ಎಸ್ಬಿಎಂ ಎದುರು ರೈತಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾದ ರೈತ ಶ್ರೀಧರಮೂರ್ತಿ ಬ್ಯಾಂಕ್ನಲ್ಲಿ ಅಡಕೆ ತೋಟ ಆಧಾರ ಮೇಲೆ ಸಾಲ ಮಾಡಿದ್ದರು. ಸಾಲದ ಬಗ್ಗೆ ಬ್ಯಾಂಕ್ನವರು ನೋಟಿಸ್ ನೀಡಿ ಒತ್ತಡ ಹೇರಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ರೈತನ ಸಾವಿಗೆ ಬ್ಯಾಂಕ್ನವರು ಸಾಲ ವಸೂಲಾತಿಗೆ ಒತ್ತಡ ಹೇರಿದ್ದೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಕಾರ್ಯಕರ್ತರು ಬ್ಯಾಂಕ್ ಎದುರು ಸಮಾವೇಶಗೊಂಡು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಕೆಲ ಹೊತ್ತು ಧರಣಿ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ತೊರೊಳ್ಳಿ ಟಿ.ಕೆ.ಗೋಪಾಲನಾಯಕ್, ಬ್ಯಾಂಕ್ನವರ ದುಡುಕಿನ ನಿರ್ಧಾರದಿಂದ ರೈತ ಕುಟುಂಬ ಅನಾಥವಾಗಿದೆ. ಅಡಕೆಗೆ ಹಳದಿ ಎಲೆ ರೋದಿಂದ ರೈತರ ಬದುಕು ಶೋಚನೀಯವಾಗಿದೆ. ಬಲವಂತದ ಸಾಲ ವಸೂಲಾತಿಗೆ ಮುಂದಾಗಿದ್ದು ಖಂಡನೀಯ ಎಂದು ಹೇಳಿದರು.
ರೈತನ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರು. 50 ಲಕ್ಷ ಪರಿಹಾರ ದೊರಕಿಸಿಕೊಡಬೇಕು. ವಾರದೊಳಗಾಗಿ ಪರಿಹಾರ ದೊರಕಿಸಿಕೊಡಲು ವಿಫಲರಾದಲ್ಲಿ ಸಂಘಟನೆ ಬ್ಯಾಂಕಿನ ಎದುರು ಧರಣಿ ಸತ್ಯಾಗ್ರಹ,ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ತಾಲೂಕು ರೈತ ಸಂಘಟನೆ ಸಂಚಾಲಕ ಬಿ.ಎಸ್.ಶ್ರೀಧರರಾವ್, ಮಾಜಿ ಅಧ್ಯಕ್ಷ ಮಾಗಲು ಅಚ್ಚುತ್ತಾ, ಕೆಳವಳಿ ಗುಂಡಪ್ಪ, ಕಾನೋಳ್ಳಿ ಚಂದ್ರಶೇಖರ್, ಅಂಗುರುಡಿ ದಿನೇಶ, ಹಸಿರು ಸೇನೆ ಸಂಘಟನೆಯ ಮಾರನಕೊಡಿಗೆ ಮಂಜುನಾಥ್,ಶ್ರೀನಿವಾಸ್ಮೂರ್ತಿ, ರಾಜಾರಾಂ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

