ಚಿಕ್ಕಮಗಳೂರು

ಕುಡಿಯುವ ನೀರಿನ ಕಾಮಗಾರಿಯಲ್ಲಿ ಭ್ರಷ್ಟಾಚಾರ: ಮಾಜಿ ಶಾಸಕರ ಆರೋಪ

Published On :

ತರೀಕೆರೆ: ಕುಡಿಯುವ ನೀರಿನ ಕಾಮಗಾರಿಯಲ್ಲಿ ಭ್ರಷ್ಟಾಚಾರ ಎಸಗಿರುವವರು ಕಳಂಕ ರಹಿತರಾಗಿದ್ದರೆ ತನಿಖೆ ಸ್ವಾಗತಿಸಲಿ ಎಂದು ಮಾಜಿ ಶಾಸಕ ಬಿ.ಆರ್.ನೀಲಕಂಠಪ್ಪ ಹೇಳಿದ್ದಾರೆ. ಪಟ್ಟಣದ ಕನಕ ಕಲಾ ಭವನದಲ್ಲಿ ಏರ್ಪಾಡಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ತನಿಖೆಗೆ ಅಡ್ಡಿ ಒಡ್ಡುವುದು ಸರಿಯಲ್ಲ. ತಾಲೂಕಿನ 46 ಗ್ರಾಪಂ ವ್ಯಾಪ್ತಿಯ 13-14ನೇ ಸಾಲಿನಲ್ಲಿ ರು. 14 ಕೋಟಿ ಕುಡಿಯುವ ನೀರಿನ ಕಾಮಗಾರಿಯಲ್ಲಿ ಪಕ್ಷಬೇಧ ಮರೆತು ಭ್ರಷ್ಚಾಚಾರ ನಡೆದಿದೆ ಎಂದು ಆರೋಪಿಸಿದ ಅವರು ಜಲಾನಯನ ಇಲಾಖೆಯಲ್ಲಿ ರು. 8 ಕೋಟಿ ಕಾಮಗಾರಿ, 3054ರ ಅನುದಾನದಡಿಯಲ್ಲಿ ಸುಮಾರು ರು. 42 ಲಕ್ಷದ 21 ರಸ್ತೆಗಳ ಕಾಮಗಾರಿಗಳು ಕಳಪೆಯಾಗಿವೆ.
ಇದರೊಂದಿಗೆ ಮಲೆನಾಡು ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ನಡೆಸಲಾದ ರು. 42 ಲಕ್ಷ ಅನುದಾನದ 8 ರಸ್ತೆ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ದೂರಿದರು.
ಕುಡಿಯವ ನೀರಿನ ಕಾಮಗಾರಿಗಳ ಅಕ್ರಮಗಳ ಬಗ್ಗೆ ರೈತರು ನೀಡಿರುವ ದೂರಿನ ಅನ್ವಯ ಗ್ರಾಮೀಣಾಭಿವೃದ್ಧಿ  ಸಚಿವ ಎಚ್.ಕೆ.ಪಾಟೀಲ್ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿಸಿದರು.
ಅಜ್ಜಂಪುರ ಗ್ರಾಪಂ ಸದಸ್ಯ ಶಿವಾನಂದ್ ಮಾತನಾಡಿ ಸರ್ಕಾರದ ಹಾಗೂ ರೈತರ ಹಣ ಪೋಲಾಗುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.