ಚಿಕ್ಕಮಗಳೂರು

'ಪಶ್ಚಿಮಘಟ್ಟ ನಿಸರ್ಗವೇ ವಿಜ್ಞಾನ'

Published On :

ನರಸಿಂಹರಾಜುಪುರ: ಗುಜರಾತಿನಿಂದ ಕೇರಳದವರೆಗೆ ಹರಡಿರುವ ಪಶ್ಚಿಮ ಘಟ್ಟದ ನಿಸರ್ಗವೇ ದೊಡ ್ಡವಿಜ್ಞಾನವಾಗಿದೆ ಎಂದು ಬೆಂಗಳೂರಿನ ಸಹ್ಯಾದ್ರಿ ವಿಜ್ಞಾನ ಸಮುದಾಯ ಅಂಗಳ ಯೋಜನೆಯ ಹಿರಿಯ ಯೋಜನಾ ವಿಜ್ಞಾನಿ ಡಾ.ಬಿ.ಎಸ್.ಸೋಮಶೇಖರ್ ತಿಳಿಸಿದರು. ಅವರು ಬೆಳ್ಳೂರು ಶಾಲಾ ಆವರಣದಲ್ಲಿ ಬೆಳ್ಳೂರು ವನಶ್ರೀ ಗ್ರಾಮ ಅರಣ್ಯ ಸಮಿತಿ ಹಾಗೂ ತರೀಕೆರೆ ಗ್ರೀನ್ ಇಂಡಿಯಾ ದಾಂಡೇಲಿ, ಇಂಡಿಕಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಪಶ್ಷಿಮ ಘಟ್ಟಗಳ ಉನ್ನತ ಪರಿಸರ ಜ್ಞಾನದ ಪರಿಚಯ ಮಾಡುವ ಮಾಹಿತಿ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಮೂಲಕ ಮಾತನಾಡಿದರು. ಬೆಳ್ಳೂರು ವನಶ್ರೀ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಸದಾನಂದ ಅಧ್ಯಕ್ಷತೆ ವಹಿಸಿದ್ದರು. ಸೀತೂರು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎನ್.ಪಿ.ರವಿ, ಕೊನೋಡಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ, ತರೀಕೆರೆಯ ಗ್ರೀನ್ ಇಂಡಿಯಾ ದಾಂಡೇಲಿಯ  ಸಂಶೋಧನಾ ಸಂಯೋಜಕ ಕವಿತ, ಅರುಣ್ ಉಪಸ್ಥಿತರಿದ್ದರು. ಶಶಿಧರ ಸ್ವಾಗತಿಸಿದರು. ಸೀತೂರು ವೃತ್ತದ ವನಪಾಲಕ ವರುಣಶೆಟ್ಟಿ  ನಿರೂಪಿಸಿದರು. ಸೀತೂರು,ಬೆಳ್ಳೂರು ಹಾಗೂ ಕೊನೋಡಿ ಗ್ರಾಮಸ್ಥರು ಹಾಜರಿದ್ದರು.


ವಿದ್ಯಾರ್ಥಿಗಳಿಗೆ ವಸ್ತ್ರ ವಿತರಣೆ


ಮೂಡಿಗೆರೆ: ಸುನ್ನಿ ಸ್ಟೂಡೆಂಟ್ ಫೆಡರೇಶನ್‌ನ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಜಿಲ್ಲೆಯಾದ್ಯಂತ ಬಡ ವಿದ್ಯಾರ್ಥಿಗಳಿಗೆ ವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೀಯ ಮಟ್ಟದಲ್ಲಿ 1ಮಿಲಿಯನ್ ಬಡ ಮಕ್ಕಳಿಗೆ ವಸ್ತ್ರ ವಿತರಣೆ ನಡೆಸಲಾಗುತ್ತಿದೆ ಎಂದು ಎಸ್‌ಎಸ್‌ಎಫ್‌ನ ಜಿಲ್ಲಾಧ್ಯಕ್ಷ ಕೆ.ಪಿ.ಅಬೂಬಕರ್ ತಿಳಿಸಿದರು. ಶನಿವಾರ ಹ್ಯಾಂಡ್‌ಪೋಸ್ಟ್‌ಸಮೀಪದ ಕೃಷ್ಣಾಪುರ ಎಂಬಲ್ಲಿ 54ಬಡ ವಿದ್ಯಾರ್ಥಿಗಳಿಗೆ ಉಚಿತ ವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಸ್‌ಎಸ್‌ಎಫ್‌ನ ಎಂ.ಎಚ್.ಮುಹಮ್ಮದ್ ಮೂಡಿಗೆರೆ ಮಾತನಾಡಿ, ಫೆಡರೇಶನ್ ಹಲವು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ರಕ್ತದಾನ ಶಿಬಿರ, ವರ ದಕ್ಷಿಣೆ ರಹಿತ ವಿವಾಹಕ್ಕೆ ವಾಗ್ದಾನ, ಸಾಮೂಹಿಕ ವಿವಾಹ ಕಾರ್ಯಕ್ರಮ, ಅಂಬುಲೆನ್ಸ್  ವಿತರಣೆ ಬಸಿ ನಿಲ್ದಾಣ ನಿರ್ಮಾಣ, ಶೌಚಾಲಯ, ಗೃಹ ನಿರ್ಮಾಣ, ಸ್ವಚ್ಚತಾ ಆಂದೋಲನ್, ರಂಜಾನ್ ಕಿಟ್ ವಿತರಣೆ, 25 ಲಕ್ಷ ಸಸಿ ನೆಡುವ ಕಾರ್ಯಕ್ರಮವನ್ನು ರಾಜ್ಯದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ವಿವರ ನೀಡಿದರು. ಸಂಘಟನಾ ಕಾರ್ಯದರ್ಶಿ ಶಾಹೀನ್ ಅಲಿ, ಸಾಮಾಜಿಕ ಕಾರ್ಯಕರ್ತ ಫಿಶ್ ಮೋಣು, ಫಾರುಕ್ ಮುಸ್ಲಿಯಾರ್, ಉಸ್ಮಾನ್ ಹಂಡುಗುಳಿ ಇಬ್ರಾಹಿಂ, ಖಾಲೀದ್, ಹಂಝ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.