ಚಿಕ್ಕಮಗಳೂರು

ಶ್ರದ್ಧೆ, ಭಕ್ತಿಯಿಂದ ಜೀವನದಲ್ಲಿ ಉನ್ನತಿ ಸಾಧ್ಯ: ಡಾ. ಸಿ.ವಿ. ಗಿರಿಧರ ಶಾಸ್ತ್ರಿ ಅಭಿಮತ

Published On :

ಶೃಂಗೇರಿ: ಪ್ರತಿ ವ್ಯಕ್ತಿ ಜೀವನದಲ್ಲಿ ಶ್ರದ್ಧೆ, ಭಕ್ತಿಯನ್ನು ಅಳವಡಿವಡಿಸಿಕೊಂಡರೆ ಉನ್ನತಿ ಗಳಿಸಲು ಸಾಧ್ಯ ಎಂದು ಡಾ.ಸಿ.ವಿ.ಗಿರಿಧರ ಶಾಸ್ತ್ರೀ ಹೇಳಿದರು.
ಅವರು ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ಹೊಸ್ಕೆರೆ ದುರ್ಗಾಶ್ರೀ ಆಡಿಯೋ ಹಾಗೂ ಭಾರತೀ ತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಹೊಸ್ಕೆರೆ ನಾದತರಂಗ, ಸಿಡಿ ಬಿಡುಗಡೆ ಮಾಡಿ ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಚಿಕ್ಕಮಗಳೂರಿನ ವಿದ್ವಾನ್‌ಶ್ರೀಕಂಠಭಟ್ ಭಗವಂತನಲ್ಲಿ ಪ್ರೀತಿ,ವಾತ್ಸಲ್ಯ ಇರಿಸಿಕೊಂಡವನಲ್ಲಿ ನಿಜವಾದ ಭಕ್ತಿ ಭಾವನೆಗಳು ಇರುತ್ತದೆ. ಭಗವಂತನ ಆರಾಧನೆಗೆ ಜಾತಿ, ಮತ ಸೀಮಿತವಾಗಿರುವುದಿಲ್ಲ. ರಾಮಾಯಣದಲ್ಲಿ ಹನುಮಂತನಿಗೆ ರಾಮನಲ್ಲಿದ್ದ ಭಕ್ತಿಯಿಂದ ಸಾಧನೆ ಮಾಡಲು ಸಾಧ್ಯವಾಯಿತು. ಮಹಾಭಾರತದಲ್ಲಿ ಪಾಂಡವರು ಶ್ರೀ ಕೃಷ್ಣನಲ್ಲಿ ಭಕ್ತಿ ಇರಿಸಿದ್ದರಿಂದ ಭಕ್ತಿಗೆ ಶ್ರೀ ಕೃಷ್ಣ ಯುದ್ದದಲ್ಲಿ ಪಾಂಡವರ ಪರ ವಹಿಸುತ್ತಾನೆ. ವಿದ್ಯಾರಣ್ಯರಲ್ಲಿ ಹಕ್ಕಬುಕ್ಕರು ಭಕ್ತಿ ಇರಿಸಿದ್ದರಿಂದ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಲು ಸಾಧ್ಯವಾಯಿತು ಎಂದರು.
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಶೋಭಾ ಅನಂತಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಸಾಪ ಅಧ್ಯಕ್ಷ ಜಿ.ಎಂ.ಸುರೇಂದ್ರ, ಬೆಂಗಳೂರು ಮಲೆನಾಡು ಸಂಘದ ಅಧ್ಯಕ್ಷ ಕೆ.ಸಿ.ಕರುಣಾಕರ, ರಶ್ಮಿ ಹೊಸ್ಕೆರೆ ವೆಂಕಟೇಶ್, ಎಚ್.ಎಂ.ನಾಗರಾಜರಾವ್ ಇದ್ದರು. ಹೊಸ್ಕೆರೆ ವೆಂಕಟೇಶ್ ಸ್ವಾಗತಿಸಿದರು. ಪದ್ಮಶ್ರೀ ನಿರೂಪಿಸಿದರು. ಸುಬ್ರಮಣ್ಯ ವಂದಿಸಿದರು. ಇದೇ ಸಂದರ್ಭದಲ್ಲಿ ಎಚ್.ಎಂ.ನಾಗರಾಜ್‌ರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.