ಸ್ಕಾರ್ಪಿಯೋ ಪಲ್ಟಿ: ಇಬ್ಬರು ಸಾವು
ಚಿಕ್ಕಮಗಳೂರು: ಸ್ಕಾರ್ಪಿಯೋ ವಾಹನ ಆಯಾ ತಪ್ಪಿ ಉರುಳಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಉದ್ದೇಬೋರನಹಳ್ಳಿ ಸಮೀಪದಲ್ಲಿ ಶನಿವಾರ ರಾತ್ರಿ ನಡೆದಿದೆ.
ಕೆ.ಎನ್.ಗುರುರಾಜ್ (52), ಅಮೃತಪ್ಪ (61) ಮೃತಪಟ್ಟವರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ರಾಜು, ಕೆ.ಎನ್. ಗುರುರಾಜ್, ಅಮೃತಪ್ಪ, ರವಿಕುಮಾರ್, ವಿಶ್ವಮೂರ್ತಿ ಹಾಗೂ ಖಾಲಿದ್ ಅವರು ಶನಿವಾರ ಸಂಜೆ ಅಯ್ಯನಕೆರೆಗೆ ಹೋಗಿ ವಾಪಾಸ್ ಚಿಕ್ಕಮಗಳೂರಿಗೆ ಸ್ಕಾರ್ಪಿಯೋ ಕಾರಿನಲ್ಲಿ ಬರುವ ವೇಳೆಗೆ ಉದ್ದೇಬೋರನಹಳ್ಳಿ ಬಳಿ ರಸ್ತೆಯ ಪಕ್ಕದಲ್ಲಿದ್ದ ಗುಂಡಿಗೆ ಇಳಿದ ವಾಹನ ಪುನಃ ರಸ್ತೆಗೆ ತೆಗೆದುಕೊಳ್ಳುವ ವೇಳೆಗೆ ಆಯಾ ತಪ್ಪಿ ಮುಗುಚಿ ಬಿದ್ದಿದೆ.
ಕಾರ್ ಚಾಲನೆ ಮಾಡುತ್ತಿದ್ದ ಗುರುರಾಜ್ ಹಾಗೂ ಹಿಂಬದಿಯಲ್ಲಿ ಕುಳಿತಿದ್ದ ಅಮೃತಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನುಳಿದವರೆಗೆ ಗಾಯಗಳಾಗಿವೆ. ಎನ್.ರಾಜು ನೀಡಿರುವ ದೂರಿನನ್ವಯ ಸಖರಾಯಪಟ್ಟಣ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಮನೆ ಬೀಗ ಮುರಿದು ಚಿನ್ನ, ನಗದು ಕಳವು
ಚಿಕ್ಕಮಗಳೂರು: ಮನೆಯ ಬಾಗಿಲಿನ ಬೀಗ ಮುರಿದು ಸುಮಾರು 1 ಲಕ್ಷ ಮೌಲ್ಯದ ಚಿನ್ನಾಭರಣ, 1 ಲಕ್ಷ ನಗದು ದೋಚಿರುವ ಘಟನೆ ಇಲ್ಲಿನ ದುಬೈ ನಗರದಲ್ಲಿ ನಡೆದಿದೆ.
ಮಹಮ್ಮದ್ ಸುಹೇಬ್ ಎಂಬವರು ತಮ್ಮ ತಾಯಿಗೆ ಚಿಕಿತ್ಸೆ ನೀಡುವ ಸಲುವಾಗಿ ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದರು. ಈ ಸಂದರ್ಭ
ಕಳ್ಳರು ಮನೆಯ ಮುಂಭಾಗದ ಲಾಕ್ ಮುರಿದು ಒಳ ಪ್ರವೇಶಿಸಿ 1 ಲಕ್ಷ ಮೌಲ್ಯದ ಚಿನ್ನಾಭರಣ, 1 ಲಕ್ಷ ನಗದು ದೋಚಿದ್ದಾರೆ.
ಈ ಸಂಬಂಧ ಮಹಮ್ಮದ್ ಸುಹೇಬ್ ನೀಡಿರುವ ದೂರಿನನ್ವಯ ನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

