ಕಾಂಗ್ರೆಸ್ ಪ್ರಚೋದನೆಯಿಂದ ಭಗವಾಧ್ವಜ ತೆರವು: ಸಿ.ಟಿ.ರವಿ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮಾ. 11
ಕಳೆದ 23 ವರ್ಷದಿಂದ ಆಲ್ದೂರು ಪಟ್ಟಣದಲ್ಲಿ ರಾರಾಜಿಸುತ್ತಿದ್ದ ಭಗವಾ ಧ್ವಜ ಕಟ್ಟೆಯನ್ನು ಕಾಂಗ್ರೆಸ್ಸಿಗರ ಪ್ರಚೋದನೆಯಿಂದ ಜಿಲ್ಲಾಡಳಿತ ತೆರವು ಮಾಡುವ ಮೂಲಕ ಕೋಮು ಭಾವನೆ ಕೆರಳಿಸುವ ಕೆಲಸ ಮಾಡಿದೆ ಎಂದು ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧ್ವಜಕಟ್ಟೆ ತೆರವು ಪ್ರಕರಣವನ್ನು ಖಂಡಿಸಿರುವ ಸಿ.ಟಿ. ರವಿ, ಲೋಕಸಭಾ ಚುನಾವಣೆ ಘೋಷಣೆಯಾದ ಮೇಲೆ ಭಗವಾ ಧ್ವಜ ಕಟ್ಟೆ ತೆರವು ಮಾಡುವಂತಹ ದುಸ್ಸಾಹಸಕ್ಕೆ ಕೈ ಹಾಕಿರುವುದು ಒಂದು ವರ್ಗವನ್ನು ಓಲೈಸಲು ರಾಜಕೀಯ ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಡನ್ ಅಜೆಂಡಾ: ಭಾವನೆ ಕೆರಳಿಸೋದು, ಪ್ರತಿಭಟಿಸೋದಕ್ಕೆ ಮುಂದಾದವರನ್ನು ಬಂಧಿಸಿ ಜೈಲಿಗೆ ಕಳಿಸುವಂತಹ ಹಿಡನ್ ಅಜೆಂಡಾ ಕಾರ್ಯ ನಿರ್ವಹಿಸುತ್ತಿದೆ ಎಂದಿರುವ ಅವರು, ಕಾಂಗ್ರೆಸ್ ಪಕ್ಷಕ್ಕೆ ಏಕಪಕ್ಷೀಯವಾಗಿ ಸಹಾಯ ಮಾಡುವ ದೃಷ್ಟಿಯಿಂದ ಚುನಾವಣೆ ಘೋಷಣೆ ನಂತರದ ಸಂದರ್ಭವನ್ನು ಅಯ್ಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಾಗಿದ್ದು, ಬ್ಲಾಕ್ ಮೇಲ್ ಮೂಲಕ ಹಣ ವಸೂಲಿ ಮಾಡುವ ಕಾರ್ಯಕ್ಕೆ ನಕ್ಸಲರು ಮುಂದಾಗಿದ್ದರೂ ನಾಗರಿಕರಿಗೆ ರಕ್ಷಣೆ ನೀಡದೆ ಕೈ ಕಟ್ಟಿ ಕುಳಿತಿರುವ ಜಿಲ್ಲಾಡಳಿತ ಛ್ಛಮತ್ತು ಪೋಲಿಸ್ ಇಲಾಖೆ, ಜಿಲ್ಲೆಯಲ್ಲಿ ಕೇರಳ ಮೂಲದ ಉಗ್ರವಾದಿ ಸಂಘಟನೆಗೆ ಬೆಂಬಲ ಕೊಡುವ ಸಂಘಟನೆ ಬೆಳೆಯುತ್ತಿದ್ದರೂ ಇವುಗಳ ಬಗ್ಗೆ ಯಾವುದೇ ಕ್ರಮಕೈಗೊಳ್ಳದೆ ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.
ಡಿಸಿ ವಿರುದ್ಧ ಆರೋಪ: ಜಿಲ್ಲಾಧಿಕಾರಿ ಕಾಗ್ರೆಸ್ಸಿಗರಂತೆ ವರ್ತನೆ ಮಾಡುತ್ತಿದ್ದು, ಇಂತಹವರಿಂದ ನಿಸ್ಪಕ್ಷಪಾತವಾದ ಚುನಾವಣೆ ನಡೆಯುವಿದೇ ಎಂಬ ಅನುಮಾನ ವ್ಯಕ್ತ ಪಡಿಸಿದ್ದಾರೆ. ತೆರವು ಮಾಡಿರುವ ಭಗವಾಧ್ವಜವನ್ನು ಗೌರವಯುತವಾಗಿ ಪ್ರತಿಷ್ಠಿಪಿಸಬೇಕು ಇಲ್ಲದಿದ್ದರೆ ಜಿಲ್ಲೆಯ ಶಾಂತಿ ನೆಮ್ಮದಿ ಕದಡಲು ಜಿಲ್ಲಾಡಳಿತವೇ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

