ಪಾರ್ಕ್ ಒತ್ತುವರಿ ತೆರವಿಗೆ ಮಲ್ಲಿಕಾರ್ಜುನ್ ಆಗ್ರಹ
ಕಡೂರು: ಜನರು ಅತಿ ಹೆಚ್ಚಿನ ಮತ ನೀಡಿ ಬಹುಮತದ ತೀರ್ಪು ನೀಡಿದ್ದು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ ಆ.15 ರಂದು ಪಾರ್ಕ್ ಉದ್ಘಾಟನೆ ಆಗುವಂತೆ, ಪಟ್ಟಣದಲ್ಲಿ ಒತ್ತುವರಿ ಪಾರ್ಕುಗಳನ್ನು ತೆರವುಗೊಳಿಸಿ ಸಾರ್ವಜನಿಕ ಸದುಪಯೋಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದಲ್ಲಿ ಕಡೂರು ಪುರಸಭೆಗೆ ಆಯ್ಕೆಯಾದ ನೂತನ ಅಧ್ಯಕ್ಷೆ ಸರಸ್ವತಿ ಕೃಷ್ಣಮೂರ್ತಿ ಹಾಗೂ ಉಪಾಧ್ಯಕ್ಷ ಕೆ.ಎನ್.ಜಯಣ್ಣ ಅವರನ್ನು ಅಭಿನಂದಿಸಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಉದ್ಘಾಟನೆಯಾಗಲಿ: ಕಡೂರು ಪಟ್ಟಣದಲ್ಲಿ 36 ಪಾರ್ಕ್ಗಳಿದ್ದು, ಅವುಗಳಲ್ಲಿ ಹಲವು ಒತ್ತುವರಿಯಾಗಿ ಕೆಲವು ಮಾತ್ರ ಉಳಿದಿದ್ದು ಈ ಬಗ್ಗೆ ಕಾಂಗ್ರೆಸ್ ಆಡಳಿತವು ಒತ್ತುವರಿ ತೆರವುಗೊಳಿಸಿ ಅವುಗಳನ್ನು ಅಭಿವೃದ್ಧಿಗೊಳಿಸಬೇಕು ಎಂದು ಸೂಚಿಸಿ ಬರುವ ಆ.15 ರಂದು ನೂತನ ಪಾರ್ಕ್ ಉದ್ಘಾಟನೆಗೊಳಿಸಿ ಸಾರ್ವಜನಿಕ ಬಳಕೆಗೆ ನೀಡಬೇಕು ಎಂದು ನೂತನ ಪುರಸಭಾ ಸಮಿತಿಗೆ ಸೂಚಿಸಿದರು.
ಕೃತಜ್ಞತೆ: ಕುಡಿಯುವ ನೀರು, ರಸ್ತೆ, ವಿದ್ಯುತ್ ವ್ಯವಸ್ಥೆ ಸರಿಪಡಿಸಿ ಅಕ್ರಮ ಖಾತೆಗಳನ್ನು ರದ್ದುಪಡಿಸುವ ಕಾರ್ಯ ಮಾಡಬೇಕು. ಆಡಳಿತವನ್ನು ಎಚ್ಚರಗೊಳಿಸಲು ಕಾಂಗ್ರೆಸ್ ಪಕ್ಷದಿಂದ ಜಾಗೃತ ಸಮಿತಿ ರಚಿಸಿ ಪುರಸಭೆ ಆಡಳಿತ ಸುಗಮವಾಗುವಂತೆ ತಿಳಿವಳಿಕೆ ನೀಡಲಾಗುವುದು. ಬಹಳ ದಿನಗಳ ನಂತರ ಜನತೆ ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದು, ಅದಕ್ಕಾಗಿ ತಾವು ಪಕ್ಷದ ಪರವಾಗಿ ಕೃತಜ್ಞತೆ ಅರ್ಪಿಸವುದಾಗಿ ಹೇಳಿದರು.
ಅಭಿವೃದ್ಧಿಗೆ ಕೈ ಜೋಡಿಸಿ: ನೂತನ ಅಧ್ಯಕ್ಷೆ ಸರಸ್ವತಿ ಕೃಷ್ಣಮೂರ್ತಿ, ಉಪಾಧ್ಯಕ್ಷ ಉಪಾಧ್ಯಕ್ಷ ಕೆ.ಎನ್. ಜಯಣ್ಣ ಮಾತನಾಡಿ, ಜನರಿಗೆ ಮೂಲಭೂತ ಸವಲತ್ತುಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡಿ ತಮಗೆ ನೀಡಿರುವ ಅಧಿಕಾರದ ಅವಧಿಯಲ್ಲಿ ಶ್ರಮ ವಹಿಸಿ ಕೆಲಸ ಮಾಡಲಾಗುವುದು ಎಂದರು.
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಆನಂದ್ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರು ಕೈ ಜೋಡಿಸಿ ದುಡಿಯಬೇಕು ಎಂದು ಹೇಳಿ ಶುಭ ಹಾರೈಸಿದರು.
ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಚ್. ಚಂದ್ರಪ್ಪ ಮಾತನಾಡಿ, ಅವಿರೋಧ ಆಯ್ಕೆಗೆ ಸಹಕಾರ ನೀಡಿ ಕಾಂಗ್ರೆಸ್ ಪಕ್ಷದ ಪುರಸಭೆಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸಹಕರಿಸಿದಕ್ಕೆ ತಾವು ಕೃತಜ್ಞತೆ ಅರ್ಪಿಸುವುದಾಗಿ ಹೇಳಿ ನೂತನ ಪದಾಧಿಕಾರಿಗಳು ಉತ್ತಮ ಆಡಳಿತ ನೀಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ಒಡೆಯರ್, ಬೀರೂರು ಬ್ಲಾಕ್ ಅಧ್ಯಕ್ಷ ಕೆ.ಎಂ.ವಿನಾಯಕ್, ಮುಖಂಡರಾದ ಕೆ.ಜಿ. ಶ್ರೀನಿವಾಸಮೂರ್ತಿ, ಸಾವಿತ್ರಿ ಗಂಗಪ್ಪ, ಪುರಸಭಾ ಸದಸ್ಯರಾದ ತೋಟದಮನೆ ಮೋಹನ್, ಲೋಕೇಶ್, ರೇಣುಕಾರಾಧ್ಯ, ಸೋಮಶೇಖರ್, ಕೆ.ಎನ್. ರವಿ, ಎನ್.ಬಶೀರ್ ಸಾಬ್ ಸೇರಿದಂತೆ ಗೋವಿಂದಪ್ಪ, ರಂಗನಾಥ್, ಚಂದ್ರಮೌಳಿ, ಕೃಷ್ಣಮೂರ್ತಿ ಚಿಕ್ಕಣ್ಣ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

