ಹೆಚ್ಚು ಅನುದಾನ ನೀಡಿದ ಗೌಡರನ್ನು ಗೆಲ್ಲಿಸಿ: ದತ್ತ
ಕಡೂರು: ಮಾಜಿ ಪ್ರಧಾನಿಯೆಂಬ ಹಮ್ಮಿಲ್ಲದೆ ಜನರಿಗೆ ಅತಿ ಸುಲಭವಾಗಿ ಸಿಗುವ ಏಕೈಕ ಸಂಸದರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ದೇವೇಗೌಡರು ಅತಿ ಹೆಚ್ಚು ಅನುದಾನ ನೀಡುವ ಮೂಲಕ ಕಡೂರು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ ವ್ಯಕ್ತಿಯಾಗಿದ್ದಾರೆ ಎಂದು ಶಾಸಕ ವೈ.ಎಸ್.ವಿ.ದತ್ತ ಹೇಳಿದರು.
ಅವರು ಕಡೂರು ಪಟ್ಟಣದ ಲಕ್ಷ್ಮೀಶನಗರದಲ್ಲಿ ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟನೆ ಮತ್ತು ಕೋಟೆಯ ಶಂಕರಮಠದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆಚ್ಚು ಅನುದಾನ ಬಳಕೆ: ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ನಿಂದ ಮಾತ್ರ ಈ ರಾಜ್ಯಕ್ಕೆ ಅಗತ್ಯವಿರುವ ಪಕ್ಷವಾಗಿದೆ ಎಂಬುದನ್ನು ನಮ್ಮ ಜನ ಒಪ್ಪಿಕೊಂಡು ಮೋದಿ ಗೀದಿ ನಮಗೆ ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಕಳೆದ 2009ರ ಲೋಕಸಭಾ ಚುನಾವಣೆಯಲ್ಲಿ ಕಡೂರು ಕ್ಷೇತ್ರದಲ್ಲಿ ಗೌಡರಿಗೆ 1500 ಮತಗಳ ಲೀಡ್ ನೀಡಲಾಗಿತ್ತು. ಕಳೆದ 40 ವರ್ಷಗಳ ಕಡೂರು ರಾಜಕೀಯ ಇತಿಹಾಸದಲ್ಲಿ ಯಾವುದೇ ಸಂಸದರು ನೀಡದಿರುವಷ್ಟು ಅನುದಾನವನ್ನು ಗೌಡರು ನೀಡಿದ್ದಾರೆ. ಅವರಿಗೆ ಕಾರ್ಯಕರ್ತರು ಹೆಚ್ಚಿನ ಮತ ನೀಡಬೇಕು ಎಂದರು.
ಬೆಂಬಲ ನೀಡಿ: ಜೆಡಿಎಸ್ ನಗರ ಘಟಕದ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಹಿಂದೆ ಕಡೂರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಆಯ್ಕೆಯಾದ ಸಂಸದರನ್ನು ನೋಡಿರುವ ನಮಗೆ ಲೋಕಸಭಾ ಸದಸ್ಯರ ನಿಧಿ ಎಂದರೆ ಏನು ಎಂದು ತಿಳಿಯುತ್ತಿರಲಿಲ್ಲ. ಡಿ.ಸಿ. ಶ್ರೀಕಂಠಪ್ಪನವರ ನಂತರ ಕ್ಷೇತ್ರದ ಜನರಿಗೆ ಸಂಸದರ ನಿಧಿ ಎಂದರೆ ಏನು ಎಂಬುದನ್ನು ಮಾಜಿ ಪ್ರಧಾನಿ ದೇವೇಗೌಡರು ತೋರಿಸಿದ್ದು ಎಂಬುದನ್ನು ಮರೆಯುವಂತಿಲ್ಲ ಎಂದರು.
ಜೆಡಿಎಸ್ ಪ್ರಚಾರ ಕಾರ್ಯಾಲಯವನ್ನು ಮಾಜಿ ಪುರಸಭಾಧ್ಯಕ್ಷೆ ಹಾಗು ಜೆಡಿಎಸ್ ಮಹಿಳಾ ಘಟಕದ ನಾಯಕಿ ರುಕ್ಸಾನ ಪರ್ವೀನ್ ಮತ್ತು ಶಾರದಮ್ಮ ಉಧ್ಘಾಟಿಸಿದರು. ಸಭೆಯಲ್ಲಿ ಜೆಡಿಎಸ್ ಮುಖಂಡರಾದ ಕೆ. ಎಂ.ಮಹೇಶ್ವರಪ್ಪ, ಭಂಢಾರಿ ಶ್ರೀನಿವಾಸ್, ಸೀಗೇಹಡ್ಲು ಹರೀಶ್,ಎನ್.ಇಮಾಮ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

