ಚಿಕ್ಕಮಗಳೂರು

82 ಕೆರೆಗಳಿಗೆ ನೀರು ಹರಿಸುವುದು ನಿಶ್ಚಿತ: ಶಾಸಕ

Published On :

ಕ.ಪ್ರ.ವಾರ್ತೆ   ತರೀಕೆರೆ   ಮಾ. 19
ಉಬ್ರಾಣಿ- ಅಮೃತಾಪುರ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಮೂಲದಿಂದ ತರೀಕೆರೆ ತಾಲೂಕಿನ 82 ಕೆರೆಗಳಿಗೆ ನೀರು ಹಾಯಿಸುವುದು ಖಚಿತ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.
ಪಟ್ಟಣದಲ್ಲಿ ಶಾಸಕರೊಡನೆ ಏರ್ಪಡಿಸಲಾಗಿದ್ದ ಪ್ರಶ್ನೋತ್ತರ ವಿಶೇಷ ಪತ್ರಿಕಾ ಸಂದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಏತ ನೀರಾವರಿಯಿಂದ- ಉಬ್ರಾಣಿ- ಅಮೃತಾಪುರ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಮೂಲದಿಂದ ಈ ಹಿಂದೆ 42 ಕೆರೆಗಳಿಗೆ ಮಾತ್ರವೇ ನೀರು ನಿಗದಿಯಾಗಿತ್ತು. ಆದರೆ ನೀರಾವರಿ ನಿಗಮ ಮತ್ತು ನೀರಾವರಿ ತಜ್ಞರೊಡನೆ ಚರ್ಚಿಸಿ ಸರ್ಕಾರದೊಡನೆ ಸಮಾಲೋಚನೆ ನಡೆಸಿದ ನಂತರ ಹಾದಿಕೆರೆ ಉಪಭಾಗದ ಕೆರೆಗಳಿಗೂ ನೀರು ಹಾಯಿಸಲು ಯೋಜನೆ ತಯಾರಾಗಿದೆ ಎಂದರು.
ಜಂಬದಹಳ್ಳ ಯೋಜನೆ: ರೈತರ ಬಹುದಿನದ ಬೇಡಿಕೆಯಾದ ಜಂಬದಹಳ್ಳ ಯೋಜನೆಗೂ ಟೆಂಡರ್ ಕರೆಯಲಾಗಿದ್ದು, ಟನಲ್ ಎಕ್ಸಪರ್ಟ್ಸ್, ಬೃಹತ್ ಪ್ರಮಾಣದ ಯಂತ್ರಗಳು ಯೋಜನಾ ಸ್ಥಳಕ್ಕೆ ಬರಲಿದೆ. ನೀರಾವರಿ ತಜ್ಞರು ಆಗಮಿಸಿ ಯೋಜನಾ ಸ್ಥಳವನ್ನು ಈಗಾಗಲೇ ಪರಿಶೀಲಿಸಿದ್ದಾರೆ ಎಂದು ತಿಳಿಸಿದರು.
ತರೀಕೆರೆ ಜನರಿಗೆ ಪುರಸಭೆ ವತಿಯಿಂದ ಭದ್ರಾ ನದಿ ದಂಡೆ ಸಮೀಪದ ಸೋಂಪುರದಿಂದ ನಾಲ್ಕನೇ ಹಂತದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜಿಗಾಗಿ ಸರ್ಕಾರ ರು. 56 ಕೋಟಿಯ ಡಿಪಿಎಆರ್ ತಯಾರಿಸಿದೆ ಎಂದರು.
ರಸ್ತೆ ನಿರ್ಮಾಣಕ್ಕೆ ಕ್ರಮ: ತಾಲೂಕಿನಲ್ಲಿ ಗ್ರಾಮೀಣ ಪ್ರದೇಶ ಒಳಗೊಂಡಂತೆ ಮುಖ್ಯ ಮತ್ತು ಸಂಪರ್ಕ ರಸ್ತೆಗಳು ಸಂಚರಿಸಲು ಬಾರದಂತೆ ಅದ್ವಾನವಾಗಿದೆ,  1 ಕಿ.ಮೀ.ಗೆ 80 ಲಕ್ಷ ರು.ನಂತೆ ಖರ್ಚು ಮಾಡಿ, ಒಟ್ಟು 20 ಕೋಟಿ ರು.ಗಳಲ್ಲಿ ಬಾಳಿಕೆ ಬರುವ ರೀತಿಯಲ್ಲಿ ಗುಣಮಟ್ಟದ ರಸ್ತೆಗಳನ್ನು  ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಅಂತರ್ಜಲ ಅಭಿವೃದ್ಧಿಗಾಗಿ ತಾಲೂಕಿನ ಸಣ್ಣಪುಟ್ಟ ಕೆರೆ ತೊರೆ ಹಳ್ಳಕೊಳ್ಳಗಳನ್ನು ಅಭಿವೃದ್ಧಿಪಡಿಸಲಾಗುವುದು, ಆಧುನಿಕ ತಂತ್ರಜ್ಞಾನದ ಸಹಾಯ ಪಡೆದು ಶಾಸಕರ ಕಾರ್ಯಾಲಯಕ್ಕೆ ಇಲ್ಲಿಯವರೆಗೆ ಬರುತ್ತಿರುವ ಸಾರ್ವಜನಿಕರ ಎಲ್ಲ ಅಹವಾಲುಗಳನ್ನು ಅರ್ಜಿಗಳನ್ನು ದಾಖಲಿಸಿಟ್ಟು ಅದ್ಯತೆ ಮೇರೆಗೆ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.