ಚಿಕ್ಕಮಗಳೂರು

ಬಿಜೆಪಿ ಸ್ಥಾನಗಳಿಕೆಗಾಗಿ ಸ್ಪರ್ಧೆ: ಸತೀಶ್ ಟೀಕೆ

Published On :

ಕೊಪ್ಪ: ಬಿಜೆಪಿ ಪಕ್ಷದ ಅಭ್ಯರ್ಥಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಸ್ಥಾನಗಳಿಸುವುದಕ್ಕಾಗಿ ಹೋರತು ಕ್ಷೇತ್ರ ಅಭಿವೃದ್ಧಿಗಾಗಿ ಅಲ್ಲ ಎಂಬುದು ಈ ಹಿಂದಿನ ಚುನಾವಣೆಯಲ್ಲಿ ಗೆದ್ದಂತಹ  ಬಿಜೆಪಿ ಅಭ್ಯರ್ಥಿಗಳು ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಸ್ಪಂದಿಸದಿರುವುದು ಇಂದಿಗೂ ಕೂಡ ಜನರ ಮನದಲ್ಲಿ ಹಸಿರಾಗಿ ಉಳಿದಿದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ಸತೀಶ್ ಟೀಕಿಸಿದ್ದಾರೆ.
ಈ ಹಿಂದೆ 32 ತಿಂಗಳು ಸಂಸದರಾದ ಸದಾನಂದ ಗೌಡರು ನೆಪಮಾತ್ರಕ್ಕೆ ಲೋಕಸಭಾ ಸದಸ್ಯರಾದರು. ಆಗ ಕ್ಷೇತ್ರ ಜೀವಂತ ಸಮಸ್ಯೆಗಾಳಾದ ಅಡಿಕೆ ಹಳದಿ ರೋಗದ ಬಗ್ಗೆಯಾಗಲಿ, ಒತ್ತುವರಿ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳದೇ ಅಧಿಕಾರವನ್ನು ಅನುಭವಿಸಿದರು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಜಯಪ್ರಕಾಶ್ ಅವರಿಗೆ ಈ ಕ್ಷೇತ್ರ ರಾಜಕೀಯ ಕರ್ಮಭೂಮಿ, ಅವರು ಮೊದಲ ಬಾರಿ ಸೋತಾಗಲು ಅಡಕೆ ಹಳದಿ ರೋಗದ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿದರು. ನಂತರ 22 ತಿಂಗಳ ಕಾಲದಲ್ಲಿ ಸಂಸದರಾಗಿ ಜಿಲ್ಲೆಗೆ ರೇಲ್ವೆ ವ್ಯವಸ್ಥೆಯನ್ನು ಪ್ರಾರಂಭ ಮಾಡಿಸಿದರು. ಗೋರಕ್ ಸಿಂಗ್ ವರದಿಯ 10 ಅಂಶದ ಪೈಕಿ 9 ಅಂಶವನ್ನು ಜಾರಿಗೆ ತರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹಾಗಾಗಿ ಈ ಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಯವರಿಗೆ ಜಯ ಖಚಿತ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.