ಚಿಕ್ಕಮಗಳೂರು

ಮಕ್ಕಳ ಶಿಕ್ಷಣಕ್ಕೆ ಸಹಕಾರ ಅವಶ್ಯ: ಡಾ.ದೊಡ್ಡಗೋಣಿ

Published On :

ಕ.ಪ್ರ. ವಾರ್ತೆ ಕಡೂರು ಮಾ.27
ಪೋಷಕರು ಮಕ್ಕಳನ್ನು ಕೇವಲ ಪ್ರೀತಿಸಿದರೆ ಸಾಲದು. ಅವರ ವಿದ್ಯೆಗೆ ಬೇಕಾದ ಅಗತ್ಯ ಪ್ರೋತ್ಸಾಹ, ಸಹಕಾರ ನೀಡುವ ಜವಾಬ್ದಾರಿ ಇರಬೇಕು ಎಂದು ತಾಲೂಕು ಆಯುಷ್ ಅಧಿಕಾರಿ ಡಾ.ದೊಡ್ಡಗೋಣಿ ಹೇಳಿದರು.
ಪಟ್ಟಣದ ಸ್ಪಿಕ್ ಫೌಂಡೇಷನ್‌ನಿಂದ ಆಯೋಜಿಸಿದ್ದ ಇಂಗ್ಲಿಷ್ ಭಾಷಾ ಕಲಿಕಾ ಶಿಬಿರದ ಸಮಾರೋಪದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳಿಗೆ ಭವಿಷ್ಯ ರೂಪಿಸುವಲ್ಲಿ ಪೋಷಕರಿಗೆ ಎಷ್ಟು ಜವಾಬ್ದಾರಿ ಇರುತ್ತದೋ ಅಷ್ಟೇ ಜವಾಬ್ದಾರಿ ಶಿಕ್ಷಕರಿಗೂ ಇರುತ್ತದೆ. ಪೋಷಕರು ಕಲಿಕೆಗಾಗಿ ತಮ್ಮ ಮಕ್ಕಳನ್ನು ಕಳುಹಿಸಿದರೆ ಜವಾಬ್ದಾರಿ ಮುಗಿಯಿತು ಎಂದು ಭಾವಿಸದೆ ಶಿಕ್ಷಕರು ಕಲಿಸಿದನ್ನು ಮಕ್ಕಳು ಕಲಿಯುತ್ತಿದ್ದಾರೆಯೇ ಎಂದು ಮನನ ಮಾಡಿಕೊಳ್ಳಬೇಕು. ಅವರು ಆಸಕ್ತಿಯಿಂದ ಕಲಿಯುವಂತೆ ಎಚ್ಚರಿಕೆ ವಹಿಸಬೇಕು ಎಂದರು.
ಉತ್ತಮ ಸಾಧನೆ:  ಜಗತ್ತಿನ ಅತಿ ದೊಡ್ಡ ಭಾಷೆಯಾಗಿರುವ ಇಂಗ್ಲಿಷ್ ಪ್ರಪಂಚದಾದ್ಯಂತ ವ್ಯಾಪಿಸಿ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಅಧಿಪತ್ಯ ಸ್ಥಾಪಿಸಿದೆ. ವ್ಯವಹಾರಿಕ ಭಾಷೆ ಆಗಿರುವ ಇಂಗ್ಲಿಷ್ ಅನ್ನು ಪ್ರತಿಯೊಬ್ಬರೂ ಕಲಿತಲ್ಲಿ ಉತ್ತಮ ಸಾಧನೆಗೆ ಸಹಾಯಕವಾಗಲಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಲಕ್ಷ್ಮೀಶ್ ಪಿ. ಶಿರಹಟ್ಟಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸ್ಪೀಕ್ ಫೌಂಡೇಶನ್ ನೂರಾರು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಬೋಧಿಸಲಾಗುತ್ತಿದೆ. ಕಲಿತ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದ ಡಾ.ದೊಡ್ಡಗೋಣಿ ಅವರು, ವಿದ್ಯಾರ್ಥಿಗಳು ಈ ಶಿಬಿರಗಳ ಸದುಪಯೋಗ ಪಡೆದುಕೊಂಡು ಉತ್ತಮ ಸಾಧನೆ ಮಾಡುವಂತೆ ಹೇಳಿದರು.
ಹೆಮ್ಮೆಯಿದೆ:  ಅಧ್ಯಕ್ಷತೆ ವಹಿಸಿದ್ದ ಸ್ಪೀಕ್ ಫೌಡೇಶನ್‌ನ ಲಕ್ಷ್ಮೀಶ್ ಪಿ. ಶಿರಹಟ್ಟಿ ಮಾತನಾಡಿ, ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಕರೆಯಲ್ಪಡುವ ಬ್ರಿಟನ್ ರಾಷ್ಟ್ರದಲ್ಲಿ ಜನ್ಮ ತಳೆದ ಇಂಗ್ಲಿಷ್ ಭಾಷೆ ಇಂದು ಪ್ರಪಂಚದ ಪ್ರಪಂಚದ ವ್ಯಾವಹಾರಿಕ ಭಾಷೆಯಾಗಿದೆ. 1836ರಲ್ಲಿ ಬ್ರಿಟನ್ನಿನ ಇಂಗ್ಲಿಷ್ ಪಂಡಿತರು ಈ ಭಾಷೆಯ ವ್ಯಾಕರಣ ಬದಲಾವಣೆ ಮಾಡುವ ಮೂಲಕ ಇಡೀ ಪ್ರಪಂಚವೇ ಇಂಗ್ಲಿಷ್ ಅಳವಡಿಸಿಕೊಳ್ಳುವಂತೆ ಮಾಡಿದರು. ಭಾರತ ಸರ್ಕಾರ ಕೂಡ ಈ ಕಲಿಕೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಸಂಸ್ಥೆಯು ಆರಂಭದಿಂದ ಇಲ್ಲಿಯವರೆಗೆ ನೂರಾರು ವಿದ್ಯಾರ್ಥಿಗಳಿಗೆ ಕ್ರಮಬದ್ದ ಇಂಗ್ಲಿಷ್ ಕಲಿಕೆ ಬೋಧಿಸುತ್ತಾ ಉತ್ತಮ ವಿದ್ಯಾರ್ಥಿಗಳನ್ನು ತಯಾರು ಮಾಡಿರುವ ಹೆಮ್ಮೆಯಿದೆ. ಮುಂದೂ ಕೂಡ ವಿದ್ಯಾರ್ಥಿಗಳಿಗೆ ಇದೇ ರೀತಿಯಲ್ಲಿ ಉತ್ತಮ ಶಿಕ್ಷಣ ನೀಡಲಿದೆ ಎಂದು ಹೇಳಿದರು.
ಶಿಬಿರದಲ್ಲಿ ಆಸಕ್ತಿಯಿಂದ ಭಾಗವಹಿಸಿ ಉತ್ತಮ ಸಾಧನೆ ಮಾಡಿದ ಎಲ್ಲ ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಕಡೂರು ಕೃಷ್ಣಮೂರ್ತಿ, ಪೋಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.